ಜು.27: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

ಬೆಂಗಳೂರು, ಜು. 27: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
13.15: ಹಿಂಸೆ ಪೀಡಿತ ಉತ್ತರಪ್ರದೇಶದ ಸಹರಾನ್ ಪುರದಲ್ಲಿ ಗಲಭೆಕೋರರನ್ನು ಹತ್ತಿಕ್ಕಲು ಪೊಲೀಸರು ಕಂಡಲ್ಲಿ ಗುಂಡು ಹೊಡೆಯುವ ಕ್ರಮಕ್ಕೆ ಮುಂದಾಗಿದ್ದಾರೆ.
11.50: ಹಿಂಸೆ ಪೀಡಿತ ಉತ್ತರಪ್ರದೇಶದ ಸಹರಾನ್ ಪುರದಲ್ಲಿ ಕರ್ಫ್ಯೂ ಮುಂದುವರೆಸಲಾಗಿದೆ. ಸಿಆರ್ ಪಿಎಫ್, ಆರ್ ಎಎಫ್, ಐಟಿಬಿಪಿ ಹಾಗೂ ಪಿಎಸಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
11.45: ಮುಜಾಫರ್‌ನಗರ ಗಲಭೆ ಬಳಿಕ ಈಗ ಮತ್ತೆ ಉತ್ತರಪ್ರದೇಶದಲ್ಲಿ ಕೋಮು ದ್ವೇಷದ ಕಿಡಿ ಹೊತ್ತಿಕೊಂಡಿದೆ. ಜಮೀನಿನ ವಿವಾದ ಎರಡು ಸಮುದಾಯಗಳ ನಡುವೆ ಘರ್ಷಣೆಗೆ ಕಾರಣವಾಗಿದೆ. ಸಹರಾನ್‌ಪುರದಲ್ಲಿ ಶನಿವಾರ ನಡೆದ ಹಿಂಸಾಚಾರಕ್ಕೆ ಇಬ್ಬರು ಬಲಿಯಾಗಿದ್ದು, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

Curfew imposed in UP

10.40: ಮೆಟ್ರೋ ನಿಲ್ದಾಣ ಬೆದರಿಕೆ ಕರೆ ನಂತರ ನಿಧಾನ ಗತಿಯಿಂದ ಸಹಜ ಸ್ಥಿತಿಗೆ ಮರಳುತ್ತಿದೆ. ಪ್ರಯಾಣಿಕರಿಗೆ ಸುರಕ್ಷತೆ ಬಗ್ಗೆ ನಂಬಿಕೆಯುಂಟಾಗಿದೆ.
10.30: ಕೋಲ್ಕತ್ತಾ ಮೆಟ್ರೋ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ. ಮೆಟ್ರೋ ನಿಲ್ದಾಣಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ.


10.20: ಮೆಟ್ರೋ ನಿಲ್ದಾಣದಲ್ಲಿ ಬಾಂಬ್ ಎಂದು ಕರೆ ಮಾಡಿದ್ದ ವ್ಯಕ್ತಿಯ ಹುಡುಕಾಟ ಜಾರಿಯಲ್ಲಿದೆ ಎಂದು ಮೆಟ್ರೋ ರೈಲ್ವೆ ಸಿಪಿಆರ್ ಒ ಆರ್ ಎನ್ ಮಹಾಪಾತ್ರ ಹೇಳಿದ್ದಾರೆ.

Updates India, International News in Brief July 27

10.15: ಕಾರು ಪತ್ತೆ: 1930ರಿಂದ 1941ರ ಅವಧಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರು ಬಳಸಿದ್ದ ಆಸ್ಟಿನ್ ಮಾರ್ಟಿನ್ ಕಾರು ಗೋವಾದ ಗೋದಾಮಿನಲ್ಲಿ ಪತ್ತೆಯಾಗಿದೆ.

9.50: ಸಹಾರಾ ಕೇಸ್ : ಭದ್ರತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೇ ತಿಹಾರ್ ಜೈಲಿನ ಸಂಕೀರ್ಣದಲ್ಲಿ ಸಹಾರಾ ಮುಖ್ಯಸ್ಥ ಸುಬ್ರತಾ ರಾಯ್ ಅವರ ಆಸ್ತಿಯನ್ನು ಮಾರಾಟ ಮಾಡಲು ಯಾವ್ಯಾವ ಕ್ರಮ ಕೈಗೊಳ್ಳಬಹುದು ಎಂಬುದನ್ನು ವಿವರಿಸುವಂತೆ ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+