ಆ.13: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

ಬೆಂಗಳೂರು, ಆ.13: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

15.15: ಮೋದಿ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದೆನಿಸಿರುವ ಗಂಗಾ ಸ್ವಚ್ಛತಾ ಯೋಜನೆಯ ನೀಲಿ ನಕ್ಷೆ ಬಹಿರಂಗ ಪಡಿಸಲು ಸರ್ಕಾರಕ್ಕೆ ಸುಪ್ರೀಂಕೋರ್ಟ್ 2 ವಾರಗಳ ಗಡುವು ನೀಡಿದೆ.
15.00 : ಲೋಕಸಭೆಯ ಉಪ ಸಭಾಧ್ಯಕ್ಷರಾಗಿ ಎಐಎಡಿಎಂಕೆಯ ಸಂಸದ ಎಂ.ತಂಬಿದೊರೈ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
14.45 : ಸ್ವಾತಂತ್ರ್ಯೋತ್ಸವಕ್ಕೆ ಭಾರತೀಯ ಪ್ರಜೆಗಳಿಗೆ ಕೊಡುಗೆಯಾಗಿ ಆಗಸ್ಟ್ 15ರ ವೇಳೆಗೆ ಪೆಟ್ರೋಲ್ ದರ 2.50 ರು ಕಡಿಮೆಯಾಗಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ.

Updates India, International News in Brief Aug 13

14.25: ಕುಸ್ತಿಪಟುಗಳಾದ ಅಮಿತ್ ಧಾಂಕರ್ ಹಾಗೂ ಪ್ರದೀಪ್ ಅವರು ಆಟವನ್ನು ಮರೆತು ನೈಜವಾಗಿ ಕುಸ್ತಿ ಆಡಿ ಗಾಯಗೊಂಡ ಘಟನೆ ಏಷ್ಯನ್ ಗೇಮ್ಸ್ ಆಯ್ಕೆ ಸಮಯದಲ್ಲಿ ನಡೆದಿದೆ.
14.00: ಮೋದಿ ಅವರು ಪಾಕಿಸ್ತಾನ ಬೆಂಬಲಿತ ಉಗ್ರರ ದಾಳಿ ಬಗ್ಗೆ ನೀಡಿರುವ ಪ್ರತಿಕ್ರಿಯೆಯನ್ನು ತಿರಸ್ಕರಿಸಿದೆ.
13.45: ಭಾರತೀಯ ಮೂಲದ ಮಂಜಲ್ ಭಾರ್ಗವ ಅವರಿಗೆ ಗಣಿತ ವಿಭಾಗದ ನೊಬೆಲ್ ಪ್ರಶಸ್ತಿ ಲಭಿಸಿದೆ.

11.05: ಜಮ್ಮು ಮತ್ತು ಕಾಶ್ಮೀರದಿಂದ ಪ್ರಧಾನಿ ನರೇಂದ್ರ ಮೋದಿ ನಿರ್ಗಮನ ನಂತರ ಕಣಿವೆ ರಾಜ್ಯದಲ್ಲಿ ಗುಂಡಿನ ಮೊರೆತ ಹೆಚ್ಚಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
11.00 : ದೆಹಲಿಯಲ್ಲಿ ಸ್ವಾತಂತ್ರೋತ್ಸವ ಸಂಭ್ರಮಾಚರಣೆ ತಯಾರಿ ನಡುವೆ ಟ್ರಾಫಿಕ್ ಜಾಮ್ ಸಮಸ್ಯೆ ಉಲ್ಬಣಿಸಿದೆ.

Updates India, International News in Brief Aug 13

10.45: ಬೆಂಗಳೂರಿನ ಐಐಎಸ್ಸಿಯಲ್ಲಿ ನಾಲ್ಕುವರ್ಷದ ಪದವಿ ಪೂರ್ವ ಕೋರ್ಸ್ ರದ್ದತಿಯನ್ನು ಯುಜಿಸಿ ಹಿಂಪಡೆದಿದೆ.
10.30: ಮೋದಿ ಸರ್ಕಾರದ ಅವಧಿಯಲ್ಲಿ ಕೋಮುಗಲಭೆ ಹೆಚ್ಚುತ್ತಿರುವುದಕ್ಕೆ ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದೆ.
10.15: ದೆಹಲಿಯಲ್ಲಿ 194 ಫೈರಿಂಗ್ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಭದ್ರತೆ ಹೆಚ್ಚಿಸಲಾಗಿದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+