ಅತ್ಯಾಚಾರ ಬಾಧಿತೆ ಕೋರ್ಟ್ ಆವರಣದಲ್ಲೇ ಶೂಟೌಟ್!

ಮೂರು ವರ್ಷಗಳ ಹಿಂದೆ ಸ್ಥಳೀಯ ಸ್ವಯಂಘೋಷಿತ ದೇವಮಾನವ ಗೋವಿಂದಾನಂದ ತೀರ್ಥ ಎಂಬುವವ ಸದರಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದ. ತತ್ಸಂಬಂಧ, 25 ವರ್ಷದ ಮಹಿಳೆ ತನ್ನ ತಾಯಿಯ ಜತೆಗೂಡಿ ನ್ಯಾಯಾಲಯಕ್ಕೆ ವಿಚಾರಣೆಗೆಂದು ಬಂದಿದ್ದಳು.
ತನ್ನ ಮೇಲೆ ಅತ್ಯಾಚಾರ ನಡೆದ ಬಗ್ಗೆ ಆಕೆ ಮೂರು ವರ್ಷಗಳಿಂದ ನ್ಯಾಯಾಲಯದಲ್ಲಿ ಆಕೆ ಕಾನೂನು ಹೋರಾಟ ನಡೆಸುತ್ತಿದ್ದಳು. ಮಗಳ ಜತೆಗೆ ಬಂದಿದ್ದ ತಾಯಿಗೂ ಗುಂಡೇಟು ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿರುವ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ದುಷ್ಕರ್ಮಿಗಳು ಸ್ವಯಂಘೋಷಿತ ದೇವಮಾನವನ ಕಡೆಯವರು ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಅಲ್ಲದೆ, ಇನ್ನೊಬ್ಬ ದೇವಮಾನವ ಭಾಗೀರಥಿ ಬಾಬಾ ಎಂಬುವವನ ಕೈವಾಡವೂ ಇರಬಹುದು ಎಂಬುದು ಪೊಲೀಸರ ಅನುಮಾನ. ದೂರು ದಾಖಲಾಗಿದ್ದರೂ, ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದರೂ ಗೋವಿಂದಾನಂದನನ್ನು ಮಥುರಾ ಪೊಲೀಸರು ಇದುವರೆಗೂ ಬಂಧಿಸಿಲ್ಲ!
ಗಾಯಗೊಂಡಿರುವ ಬಾಧಿತ ಮಹಿಳೆಯ ತಾಯಿಯನ್ನು ಅಲಿಗಢ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಸಂಬಂಧ ಪೊಲೀಸರು ವಿಚಾರಣೆಗಾಗಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.












Click it and Unblock the Notifications