BREAKING: ಯುಪಿಯ ವೃಂದಾವನ ಹೋಟೆಲ್‌ನಲ್ಲಿ ಭಾರಿ ಬೆಂಕಿ, 2 ಸಾವು
ಲಕ್ನೋ ನವೆಂಬರ್ 3: ಮಥುರಾದ ವೃಂದಾವನದಲ್ಲಿರುವ ಹೊಟೇಲ್‌ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿರುವುದು ತಿಳಿದು ಬಂದಿದೆ. ಬೆಳಗ್ಗೆ 6:30ಕ್ಕೆ ಈ ಘಟನೆ ನಡೆದಿದ್ದು ಬೆಂಕಿ ನಂದಿಸುವ ಕಾರ್ಯ ಪೂರ್ಣಗೊಂಡಿದೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ಧಾರೆ.
ಮೃತರನ್ನು ಉಮೇಶ್ (30) ಮತ್ತು ಬೀರಿ ಸಿಂಗ್ (40) ಎಂದು ಗುರುತಿಸಲಾಗಿದೆ. ಅವರಿಬ್ಬರೂ ಹೋಟೆಲ್‌ನ ಉದ್ಯೋಗಿಗಳಾಗಿದ್ದರು. ಎರಡು ಆಂಬ್ಯುಲೆನ್ಸ್‌ಗಳು ಮತ್ತು ಎರಡು ಅಗ್ನಿಶಾಮಕ ಟೆಂಡರ್‌ಗಳನ್ನು ಸ್ಥಳಕ್ಕೆ ಧಾವಿಸಿ ರಕ್ಷಣ ಕಾರ್ಯವನ್ನು ನಡೆಸಿವೆ.
ಮಥುರಾ-ವೃಂದಾವನ ರಸ್ತೆಯಲ್ಲಿರುವ ಹೊಟೇಲ್‌ನ ಮೇಲಿನ ಮಹಡಿಯಲ್ಲಿರುವ ಕಿಚನ್ ಸ್ಟೋರ್ ರೂಮ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

"ಸ್ಥಳವನ್ನು ತಲುಪಿದ ನಂತರ ನಮಗೆ ಮೊದಲ ಮಹಡಿಯಲ್ಲಿ (ಹೋಟೆಲ್‌ನ) ಸ್ಟೋರ್ ರೂಮ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಗೊತ್ತಾಯಿತು. ಹೋಟೆಲ್‌ನಲ್ಲಿ ಸುಮಾರು 100 ಅತಿಥಿಗಳು ಉಳಿದುಕೊಂಡಿದ್ದರು. ನಾವು ಕೂಡಲೆ ಅವರೆಲ್ಲರನ್ನು ಸ್ಥಳಾಂತರಿಸಿದೆವು. ಅಗ್ನಿಶಾಮಕ ಇಲಾಖೆಯು ಒಂದೂವರೆ ಗಂಟೆಗಳ ಹೋರಾಟದ ನಂತರ ಬೆಂಕಿಯನ್ನು ಹತೋಟಿಗೆ ತಂದಿದೆ'' ಎಂದು ಮಥುರಾದ ಮುಖ್ಯ ಅಗ್ನಿಶಾಮಕ ಅಧಿಕಾರಿ ಪ್ರಮೋದ್ ಶರ್ಮಾ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವೃಂದಾವನದ ಎಸ್‌ಎಚ್‌ಒ ಸೂರಜ್ ಶರ್ಮಾ, ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಮೇಲ್ನೋಟಕ್ಕೆ ಇದು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಎಂದು ತೋರುತ್ತದೆ ಎಂದು ಹೇಳಿದ್ದಾರೆ.












Click it and Unblock the Notifications