UP Lok Sabha Election 2024 Result: 'ಅಖಿಲೇಶ್ ಯಾದವ್ ಮುಂದಿನ ಪ್ರಧಾನಿ'- ಇದೇನಿದು ಹೊಸ ಆಟ?
ಲಕ್ನೋ ಜೂನ್ 4: ಉತ್ತರಪ್ರದೇಶದಲ್ಲಿ ನಿರೀಕ್ಷೆಯಂತೆ ಬಿಜೆಪಿ ಹೆಚ್ಚಿನ ಸ್ಥಾನ ತೆಗೆದುಕೊಂಡಿಲ್ಲ. ಅಲ್ಲದೆ ಸಮಾಜವಾದಿ ಪಕ್ಷ ಬಿಜೆಪಿಗೆ ಕಠಿಣ ಸ್ಪರ್ಧೆ ನೀಡುತ್ತಿದೆ. ಇದರ ನಡುವೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರೇ ಮುಂದಿನ ಪ್ರಧಾನಿ ಎಂಬ ಪೋಸ್ಟರ್‌ಗಳು ಹರಿದಾಡುತ್ತಿವೆ.
ಹೌದು... ಬಿಜೆಪಿಯೊಂದಿಗೆ ಹೆಚ್ಚಿನ ಸ್ಥಾನಗಳ ಅಂತರ ಇಲ್ಲದೆ ಕಠಿಣ ಪೈಪೋಟಿ ನೀಡುತ್ತಿರುವ ಸಮಾಜವಾದಿ ಪಕ್ಷಕ್ಕೆ ಜಯಕಾರಗಳು ಕೇಳಿ ಬರುತ್ತಿವೆ. ಎಲ್ಲೆಡೆ ಸಿಹಿ ಹಂಚಿ ಸಂಭ್ರಮಾಚರಣೆ ಕಂಡು ಬರುತ್ತಿದೆ. ಕಾರ್ಯಕರ್ತರ ಸಂತಸ ಮುಗಿಲು ಮುಟ್ಟಿದೆ. ಇದರ ನಡುವೆ ಅಖಿಲೇಶ್ ಯಾದವ್ ಅವರು ದೇಶದ ಮುಂದಿನ ಪ್ರಧಾನಿ ಎನ್ನುವ ಪೋಸ್ಟರ್‌ಗಳೊಂದಿಗೆ ಕಾರ್ಯಕರ್ತರು ಸಂಭ್ರಮಿಸಿದ್ದಾರೆ.

ಉತ್ತರಪ್ರದೇಶದಲ್ಲಿ ಯಾದವ ಸಮುದಾಯ ಪ್ರಬಲವಾಗಿದ್ದರಿಂದ ಸಮಾಜವಾದಿ ಪಕ್ಷ ಗೆಲುವು ಸಾಧಿಸುವ ಸಾಧ್ಯತೆ ಕೂಡ ಇದೆ. ಬಿಜೆಪಿ ಆಡಳಿತದ ಅವಧಿಯಲ್ಲಿ ಮಾಡಿದ ಸಾಕಷ್ಟು ಅಭಿವೃದ್ಧಿ ಕಾರ್ಯಗಳಲ್ಲಿ ರಾಮ ಮಂದಿರ ನಿರ್ಮಾಣ ಕೂಡ ಒಂದು. ಇದರಿಂದಾಗಿ ಉತ್ತರಪ್ರದೇಶ ಮಾತ್ರವಲ್ಲದೆ ದೇಶದ ಹಲವೆಡೆ ಬಿಜೆಪಿ ಅಧಿಕ ಸ್ಥಾನಗಳ ಅಂತರದಿಂದ ಜನ ಸಾಧಿಸುವ ಸಾಧ್ಯತೆ ಇದೆ.

ಆದರೆ ಉತ್ತರಪ್ರದೇಶದಲ್ಲಿ ಈವರೆಗಿನ ಫಲಿತಾಂಶ ಅಚ್ಚರಿ ಮೂಡಿಸಿದೆ. ಯಾಕೆಂದರೆ ಉತ್ತರಪ್ರದೇಶದಲ್ಲಿ ಗೆಲುವು ಖಚಿತ ಎಂದು ಬೀಗುತ್ತಿದ್ದ ಬಿಜೆಪಿಗೆ ಎಸ್‌ಪಿ ಭಾರೀ ಪೈಪೋಟಿ ನೀಡುವ ಮೂಲಕ ಬಿಗ್ ಶಾಕ್ ಕೊಟ್ಟಿದೆ. ಇದರಿಂದ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದ್ದು ಎಲ್ಲೆಡೆ ಪಟಾಕಿ ಸಿಡಿಸಿ ಗೆಲುವು ನಮ್ಮದೇ ಎಂದು ಕಾರ್ಯಕರ್ತರು ಸಂಭ್ರಮಿಸುತ್ತಿದ್ದು ಹಬ್ಬದಂತಾ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಎಲ್ಲೆಡೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರೇ ಮುಂದಿನ ಪ್ರಧಾನಿ ಎಂದು ಪೋಸ್ಟರ್ ಅಂಟಿಸಿ ಸಂತಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications