ಬಿಜೆಪಿಗೆ ಪ್ಲಸ್ ಆಗಲಿವೆ ಉಪ್ರ ನಾಲ್ಕನೇ ಹಂತದ ಮತದಾನ ಕ್ಷೇತ್ರಗಳು

ಉತ್ತರಪ್ರದೇಶ ವಿಧಾನಸಭೆಗೆ ಗುರುವಾರ (ಫೆಬ್ರವರಿ 23) ನಡೆಯುತ್ತಿರುವ ನಾಲ್ಕನೇ ಹಂತದ ಚುನಾವಣೆ ಮತದಾನ ಬಿಜೆಪಿ ಪಾಲಿಗೆ ಪ್ಲಸ್ ಆಗಲಿದೆ ಎಂದು ಮತಗಟ್ಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಅದಕ್ಕೆ ಅಂಕಿ-ಅಂಶ ಸಹಿತ ವಿವರಣೆ ಕೂಡ ನೀಡಿದ್ದಾರೆ

ಲಖನೌ, ಫೆಬ್ರವರಿ 23: ಉತ್ತರಪ್ರದೇಶ ವಿಧಾನಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನ ಗುರುವಾರ ನಡೆಯುತ್ತಿದೆ. ಏಳು ಜಿಲ್ಲೆ ವ್ಯಾಪ್ತಿಯ 53 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತದೆ. ಅದರಲ್ಲಿ ಬುಂದೇಲ್ ಖಂಡ್ ವಲಯ ಹಾಗೂ ರಾಯ್ ಬರೇಲಿ ಒಳಗೊಂಡಿದೆ. ಈ ಹಂತದ ಚುನಾವಣೆಯಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸುತ್ತದೆ ಎಂದು ಮತಗಟ್ಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

2012ರಲ್ಲಿ ಸಮಾಜವಾದಿ ಪಕ್ಷ 24 ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದರೆ, ಅದರ ಮೈತ್ರಿ ಪಕ್ಷ ಕಾಂಗ್ರೆಸ್ 6 ಸ್ಥಾನ ಜಯಿಸಿತ್ತು. ಇನ್ನು ಬಿಜೆಪಿ 53 ಸ್ಥಾನಗಳ ಪೈಕಿ 6ರಲ್ಲಿ ವಿಜಯಿಯಾಗಿತ್ತು. ಆದರೆ 2014ರ ಲೋಕಸಭೆ ಚುನಾವಣೆಯಲ್ಲಿ ಈ ಲೆಕ್ಕಾಚಾರ ಪೂರ್ತಿ ಉಲ್ಟಾ ಆಗಿ, ಬಿಜೆಪಿಯು 37 ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಮುನ್ನಡೆ ಕಾಯ್ದುಕೊಂಡಿತು. ಎಸ್ ಪಿ ಮತ್ತು ಕಾಂಗ್ರೆಸ್ ಕ್ರಮವಾಗಿ 5 ಮತ್ತು 7ರಲ್ಲಿ ಮುನ್ನಡೆ ಸಾಧಿಸಿದ್ದವು.['ಹುಲಿ' ಹೊಡೆಯಲು ಬಡಿಗೆ ಬಿಸಾಡಿ 'ಬಂದೂಕು' ಕೈಗೆತ್ತಿಕೊಂಡ ಮೋದಿ!]

UP elections 2017: Why BJP will score big in the fourth phase

ಲೋಕಸಭೆ ಚುನಾವಣೆಯಲ್ಲಿ ಹಿಂದೂ ಮತಗಳು ಒಗ್ಗೂಡಿದ್ದು ಬಿಜೆಪಿಗೆ ಪ್ಲಸ್ ಆಗಿತ್ತು. ಆದ್ದರಿಂದ ನಾಲ್ಕನೇ ಹಂತದ ಚುನಾವಣೆ ಬಿಜೆಪಿಗೆ ಅನುಕೂಲಕರ ಅಂಶಗಳನ್ನು ಒಳಗೊಂಡಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಬುಂದೇಲ್ ಖಂಡ್ ನ ಗುಜರಾತ್ ನ ಕಛ್ ರೀತಿಯಲ್ಲಿ ಅಭಿವೃದ್ಧಿ ಪಡಿಸುವ ಭರವಸೆ ನೀಡಿದ್ದಾರೆ ಪ್ರಧಾನಿ ಮೋದಿ.

ಬುಂದೇಲ್ ಖಂಡ್ ಖನಿಜದ ಶ್ರೀಮಂತವಾಗಿರುವ ವಲಯ. ಆದರೆ ಯಾವುದೇ ಅಭಿವೃದ್ಧಿ ಕಂಡಿಲ್ಲ. ನೀರಿನ ಅಭಾವ ಮತ್ತು ರೈತರ ಹೀನಾಯ ಸ್ಥಿತಿ ಚುನಾವಣೆ ಪ್ರಚಾರದ ವೇಳೆ ಪ್ರಮುಖವಾಗಿ ಪ್ರಸ್ತಾವವಾಗಿವೆ. ಈ ಹಿಂದಿನ ಸರಕಾರಗಳು ಇಲ್ಲಿನ ಸಮಸ್ಯೆಗಳನ್ನು ನಿವಾರಿಸುವಲ್ಲಿ ವಿಫಲವಾಗಿವೆ.[ಮುಸ್ಲಿಮರ ಖಬರಸ್ತಾನ್ ಗೆ ಜಾಗ, ಆದ್ರೆ ಹಿಂದೂಗಳ ಸ್ಮಶಾನಕ್ಕೇಕಿಲ್ಲ?: ಮೋದಿ]

ಈ ವಿಚಾರಗಳನ್ನೇ ಮುಂದಿಟ್ಟುಕೊಂಡು ಮೋದಿ ಪ್ರಚಾರ ನಡೆಸಿದ್ದಾರೆ. ಜತೆಗೆ ಆಡಳಿತವಿರೋಧಿ ಅಲೆ ಇದ್ದು, ಅದನ್ನು ಬಿಜೆಪಿ ಬಳಸಿಕೊಳ್ಳುವ ಎಲ್ಲ ಸಾಧ್ಯತೆಗಳಿವೆ.

ಅಂಕಿ-ಅಂಶ
ಒಟ್ಟು ವಿಧಾನಸಭೆ ಕ್ಷೇತ್ರ- 53
ಒಟ್ಟು ಮತದಾರರು- 1,84,82,166
ಪುರುಷರು- 1,00,31,093
ಮಹಿಳೆಯರು- 84,50,039
ವಿದ್ಯುನ್ಮಾನ ಮತಯಂತ್ರಗಳು- 23,924
ಮತದಾನ ಕೇಂದ್ರಗಳು- 19,487
ಜಿಲ್ಲೆಗಳು- ರಾಯ್ ಬರೇಲಿ, ಪ್ರತಾಪ್ ಘರ್, ಕೌಶಂಬಿ, ಅಲಹಾಬಾದ್, ಜಲೌನ್, ಝಾನ್ಸಿ, ಲಲಿತ್ ಪುರ್, ಮಹೋಬ, ಬಾಂದ, ಹಮೀರ್ ಪುರ್, ಚಿತ್ರಕೂಟ್ ಮತ್ತು ಫತ್ತೇಪುರ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+