UP 'ಮಿಷನ್ ಮಹಿಳಾ ಸಾರಥಿ' 50 ಬಸ್‌ಗಳಿಗೆ ಸಿಎಂ ಯೋಗಿ ಚಾಲನೆ

ಬೆಂಗಳೂರು, ಅಕ್ಟೋಬರ್ 23: ಉತ್ತರ ಪ್ರದೇಶ ರಾಜ್ಯದ ಅಯೋಧ್ಯೆಯಲ್ಲಿ ದುರ್ಗಾ ಅಷ್ಟಮಿಯ ಸಂದರ್ಭದಲ್ಲಿ ಭಾನುವಾರ ಮುಖ್ಯಮಂತ್ರಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 'ಮಿಷನ್ ಮಹಿಳಾ ಸಾರಥಿ' ಕಾರ್ಯಕ್ರಮ ಅಡಿಯಲ್ಲಿ ರಾಜ್ಯ ಸಾರಿಗೆ ನಿಗಮದ 51 ಬಸ್‌ಗಳಿಗೆ ಹಸಿರು ನಿಶಾನೆ ತೋರಿಸಿದರು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು ಈ ಬಸ್‌ಗಳನ್ನು ಚಾಲಕರು ಮತ್ತು ಕಂಡಕ್ಟರ್‌ಗಳಾಗಿ ಮಹಿಳೆಯರು ಪ್ರತ್ಯೇಕವಾಗಿ ನಿರ್ವಹಿಸಲಿದ್ದಾರೆ. ಮಿಷನ್ ಮಹಿಳಾ ಸಾರಥಿಯ ಬಸ್‌ಗಳನ್ನು ಈ ಯೋಜನೆ ಅಡಿ ಆರಂಭಿಸಲು 'ಮಹಾ ಅಷ್ಟಮಿ' ದಿನ ಉತ್ತಮವಾಗಿದೆ.

UP CM Yogi Adityanath Green Signal To 50 Bus Under Mission Mahila Sarathi Program

ಮಹಿಳಾ ಚಾಲಕರು ಮತ್ತು ಕಂಡಕ್ಟರ್‌ಗಳ ಸಂಪರ್ಕ, ಸಬಲೀಕರಣಕ್ಕೆ ಸರ್ಕಾರ ಪ್ರಯತ್ನಿಸುತ್ತದೆ ಎಂದು ಆದಿತ್ಯನಾಥ್ ತಿ. ಹೇಳಿದರು. ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಮಹಿಳೆಯರಿಗೆ ಘನತೆ ಸಿಗಬೇಕು ಎಂದು ಅವರು ಹೇಳಿದರು.

ರಾಜ್ಯದ ಮಹಿಳೆಯರ ಸುರಕ್ಷತೆ, ಸ್ವಾವಲಂಬನೆ ಮತ್ತು ಗೌರವಕ್ಕೆ ಒತ್ತು ನೀಡಿರುವ ನಮ್ಮ ಸರ್ಕಾರ, ಮಿಷನ್ ಶಕ್ತಿಯ ನಾಲ್ಕನೇ ಹಂತದ ಮೂಲಕ ರಾಜ್ಯ ಸರ್ಕಾರವು ಈ ಆಲೋಚನೆಗಳನ್ನು ನಿರಂತರವಾಗಿ ಪ್ರಚಾರ ಮಾಡಿದೆ ಎಂದರು.

UP CM Yogi Adityanath Green Signal To 50 Bus Under Mission Mahila Sarathi Program

ಮಹಿಳಾ ಸ್ವಾವಲಂಬನೆ ಕಾರ್ಯಕ್ರಮಕ್ಕೆ ಪ್ರೋತ್ಸಾಹ

ಭಾರತೀಯ ಸಮಾಜವು ಯಾವಾಗಲೂ ಮಹಿಳೆಯರ ಘನತೆಯನ್ನು ಕಾಪಾಡುವುದರಲ್ಲಿ ನಂಬಿಕೆ ಇಟ್ಟಿದೆ. ಉತ್ತರ ಪ್ರದೇಶ ಸರ್ಕಾರವು ಮಿಷನ್ ಶಕ್ತಿಯ ನಾಲ್ಕನೇ ಹಂತದಲ್ಲಿ ಸುರಕ್ಷತೆ, ಗೌರವ ಮತ್ತು ಸ್ವಾವಲಂಬನೆಯ ಕ್ರಮಗಳನ್ನು ನಿರಂತರವಾಗಿ ಪ್ರೋತ್ಸಾಹಿಸಿದೆ.

ಅಕ್ಟೋಬರ್ 22 ರಂದು ಅಯೋಧ್ಯೆಯಲ್ಲಿ ನವರಾತ್ರಿ ಉತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಸಂಬಂಧ ಮಹಿಳಾ ಚಾಲಕರ ನೇತೃತ್ವದಲ್ಲಿ ಹೊಸ ಬಸ್‌ಗಳು ಲೋಕಾರ್ಪಣೆಗೊಂಡವು ಬಳಿಕ ಸಿಎಂ ಜೊತೆಗೆ ಮಹಿಳಾ ಚಾಲಕರು ಫೋಟೋಗಳನ್ನು ಕ್ಲಿಕ್ಕಿಸಿಕೊಂಡರು.

ಸರ್ಕಾರಿ ವ್ಯಾಪ್ತಿಯಲ್ಲಿ ಲಕ್ಷಕ್ಕೂ ಹೆಚ್ಚು ಹೆಣ್ಮಕ್ಕಳು ಕೆಲಸ

ರಾಜ್ಯ ಸರ್ಕಾರದಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ಮಹಿಳೆಯರು ಎಲ್ಲ ವಿಧದ ಪಾತ್ರಗಳನ್ನು ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ. 1.5 ಲಕ್ಷಕ್ಕೂ ಹೆಚ್ಚು ಹೆಣ್ಣುಮಕ್ಕಳು ಮತ್ತು ಸಹೋದರಿಯರು ರಾಜ್ಯದ ಪೊಲೀಸ್ ಹಾಗೂ ಸರ್ಕಾರ ಮಟ್ಟದ ವಿವಿಧ ಪಾತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಸಾರಿಗೆ ನಿಗಮದಲ್ಲಿ ಮಹಿಳೆಯರೇ ಡ್ರೈವರ್ ಮತ್ತು ಕಂಡಕ್ಟರ್ ಆಗಬೇಕೆಂಬ ಆಸೆ ಈಡೇರಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಆದಿತ್ಯನಾಥ್ ಅವರು ಸಾರಿಗೆ ನಿಗಮದ ಕಾರ್ಯಾಚರಣೆಯ ವಿಸ್ತರಣೆಯ ಬಗ್ಗೆ ಪ್ರಸ್ತಾಪಿಸಿದರು. ಕಾರ್ಯಕ್ರಮದಲ್ಲಿ ಕೃಷಿ ಸಚಿವ ಸೂರ್ಯ ಪ್ರತಾಪ್ ಶಾಹಿ, ಸಾರಿಗೆ ಖಾತೆ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ದಯಾಶಂಕರ್ ಸಿಂಗ್, ಸ್ಥಳೀಯ ಶಾಸಕರಾದ ವೇದಪ್ರಕಾಶ್ ಗುಪ್ತಾ, ರಾಮಚಂದ್ರ ಯಾದವ್, ಎಂಎಲ್ ಸಿ ಹರಿಓಂ ಪಾಂಡೆ ಮತ್ತಿತರರು ಪಾಲ್ಗೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+