ಮತ್ತೆ ಸದ್ದು ಮಾಡುತ್ತಿದೆ ಇವಿಎಂ ದೋಷ! ಮಾಯಾವತಿ ಹೊಸ ವರಸೆ!
ಲಕ್ನೋ, ಡಿಸೆಂಬರ್ 02: ಈ ಸುದ್ದಿ ಕೇಳಿ ಕುಣಿಯೋಕೆ ಬಾರದವನು ನೆಲ ಡೊಂಕು ಅಂದ್ನಂತೆ ಅನ್ನೋ ಗಾದೆ ನೆನಪಾದರೆ ಅಚ್ಚರಿಯೇನಿಲ್ಲ! ಡಿ.1 ರಂದು ಹೊರಬಂದ ಉತ್ತರ ಪ್ರದೇಶ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯಸಾಧಿಸುತ್ತಿದ್ದಂತೆಯೇ ಪ್ರತಿಪಕ್ಷ ಬಿಎಸ್ ಪಿಯ ನಾಯಕಿ ಮಾಯಾವತಿ ಹೊಸ ವರಸೆ ಶುರುಮಾಡಿದ್ದಾರೆ.
ಬಿಜೆಪಿಯ ಗೆಲುವಿಗೆ ಮತಯಂತ್ರದಲ್ಲಿನ ದೋಷವೇ ಕಾರಣ ಎಂಬುದು ಆ ವರಸೆ! ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಸಮಯದಲ್ಲೂ ಕಾಂಗ್ರೆಸ್ ಸೇರಿದಂತೆ ಹಲವು ಬಿಜೆಪಿ ವಿರೋಧಿ ಪಕ್ಷಗಳು ಇವಿಎಂ( Electronic Voting Machines) ದೋಷದ ಬಗ್ಗೆ ಮಾತನಾಡಿ, ನಂತರ ಚುನಾವಣಾ ಆಯೋಗದಿಂದಲೇ ಛೀಮಾರಿ ಹಾಕಿಸಿಕೊಂಡಿದ್ದವು. ಆದರೆ ಇದೀಗ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿದ ನಂತರವೂ ಇದೇ ವರಾತ ಆರಂಭಿಸಿರುವುದು, ಗೆಲ್ಲಲಾಗದ ಖಂಡತವಾಗಿಯೂ, ಮೇಲಿನ ಗಾದೆಯನ್ನೇ ನೆನಪಿಸಿದೆ!

ಯಾವ ಸಾಕ್ಷಿಯೂ ಇಲ್ಲದೆ, 2014, 2017 ರ ಚುನಾವಣೆಗಳಲ್ಲಿ ಬಿಜೆಪಿ ಇವಿಎಂ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿರುವ ಮಾಯಾವತಿ ಹೇಳಿಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಡಿ.1 ರಂದು ಹೊರಬಿದ್ದ ಫಲಿತಾಂಶದಲ್ಲಿ ಸ್ಥಳೀಯ ಸಂಸ್ಥೆ 16 ಮೇಯರ್ ಸ್ಥಾನಗಳಲ್ಲಿ ಬಿಜೆಪಿ 12ನ್ನು ಗೆದ್ದುಕೊಂಡು ದಾಖಲೆ ಬರೆದಿತ್ತು.












Click it and Unblock the Notifications