UP Budget 2023: ನಯಾ ಉತ್ತರ ಪ್ರದೇಶಕ್ಕೆ ಯೋಗಿ ಆದಿತ್ಯನಾಥ್ ಒತ್ತು

ಇದು ಉತ್ತರಪ್ರದೇಶ ಬಿಜೆಪಿ ನೇತೃತ್ವದ ಸರ್ಕಾರದ ಸತತ ಏಳನೇ ಬಜೆಟ್ ಆಗಿದ್ದು, ಹಣಕಾಸು ಸಚಿವ ಸುರೇಶ್ ಖನ್ನಾ ಅವರು ಬುಧವಾರ ಬೆಳಿಗ್ಗೆ 11 ಗಂಟೆಗೆ ರಾಜ್ಯ ವಿಧಾನಸಭೆಯಲ್ಲಿ ತಮ್ಮ ನಾಲ್ಕನೇ ಬಜೆಟ್ ಮಂಡಿಸಿದರು.

ಲಕ್ನೋ, ಫೆಬ್ರವರಿ 22: ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರವು ಬುಧವಾರ ಅತಿದೊಡ್ಡ ಬಜೆಟ್‌ನಲ್ಲಿ ಹಣ ಹಂಚಿಕೆ ಮಾಡುವಾಗ ಮೂಲಸೌಕರ್ಯಗಳ ಅಭಿವೃದ್ಧಿ, ಮೆಟ್ರೋ, ರೈಲು, ಆರೋಗ್ಯ ಕ್ಷೇತ್ರ ಮತ್ತು ಶಿಕ್ಷಣದ ಮೇಲೆ ಕೇಂದ್ರೀಕರಿಸಿದ್ದಾರೆ.

ಸರ್ಕಾರವು ತನ್ನ 1 ಟ್ರಿಲಿಯನ್ ಡಾಲರ್ ಗುರಿಯನ್ನು ಸಹ ಮನಸ್ಸಿನಲ್ಲಿಟ್ಟುಕೊಂಡು ಹಣ ಹಂಚಿಕೆ ಮಾಡಿದೆ. ಇದು ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರದ ಸತತ ಏಳನೇ ಬಜೆಟ್ ಆಗಿದ್ದು, ಹಣಕಾಸು ಸಚಿವ ಸುರೇಶ್ ಖನ್ನಾ ಅವರು ಬುಧವಾರ ಬೆಳಿಗ್ಗೆ 11 ಗಂಟೆಗೆ ರಾಜ್ಯ ವಿಧಾನಸಭೆಯಲ್ಲಿ ತಮ್ಮ ನಾಲ್ಕನೇ ಬಜೆಟ್ ಮಂಡಿಸಿದರು.

UP Budget 2023: Yogi Adityanaths emphasis on naya Uttar Pradesh

ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ ಅವರು ಬುಧವಾರ ರಾಜ್ಯ ವಿಧಾನಸಭೆಯಲ್ಲಿ "ಅಭಿವೃದ್ಧಿ ಆಧಾರಿತ" ಬಜೆಟ್ 2023-24 ಅನ್ನು ಮಂಡಿಸಿದರು, ಮುಖ್ಯವಾಗಿ ಮೂಲಸೌಕರ್ಯ, ವಿದ್ಯಾರ್ಥಿಗಳು, ರೈತರು ಮತ್ತು ಮಹಿಳೆಯರ ಮೇಲೆ ಕೇಂದ್ರೀಕರಿಸಿದ್ದಾರೆ. 2021-2022ರಲ್ಲಿ ರಾಷ್ಟ್ರೀಯ ಬೆಳವಣಿಗೆ ದರಕ್ಕಿಂತ ಹೆಚ್ಚಿರುವ ಒಟ್ಟು ರಾಜ್ಯ ದೇಶೀಯ ಉತ್ಪನ್ನದಲ್ಲಿ (ಜಿಎಸ್‌ಡಿಪಿ) ರಾಜ್ಯವು ಶೇ.16.8ರಷ್ಟು ಏರಿಕೆ ದಾಖಲಿಸಿದೆ ಎಂದು ಬಜೆಟ್ ಮಂಡಿಸಿದ ರಾಜ್ಯ ಹಣಕಾಸು ಸಚಿವರು ತಿಳಿಸಿದರು.

ಅವರು 2017 ರಿಂದ ಒಟ್ಟಾರೆ ಏಳನೇ ಬಾರಿಗೆ ಯೋಗಿ ಆದಿತ್ಯನಾಥ್ ಸರ್ಕಾರದ ಎರಡನೇ ಬಜೆಟ್ ಅನ್ನು ಮಂಡಿಸಿದರು. ಈ ವೇಳೆ ಪ್ರಮುಖ ಘೋಷಣೆಗಳನ್ನು ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ ಮಾಡಿದ್ದಾರೆ. ಯುವಕರನ್ನು ಗುರಿಯಾಗಿಸಿಕೊಂಡು ಬಜೆಟ್‌ನಲ್ಲಿ "ಮುಖ್ಯಮಂತ್ರಿ ಕನ್ಯಾ ಸುಮಂಗಲಾ ಯೋಜನೆ" ಅಡಿಯಲ್ಲಿ 1,050 ಕೋಟಿ ರೂ. ನೀಡಲಾಗಿದೆ.

ನಿರ್ಗತಿಕ ವಿಧವೆಯರಿಗೆ ರೂ 4,032 ಕೋಟಿ ಮತ್ತು ಎಲ್ಲಾ ವರ್ಗದ ಹೆಣ್ಣುಮಕ್ಕಳ ವಿವಾಹಕ್ಕಾಗಿ "ಸಾಮುಹಿಕ್ ವಿವಾಹ" ಯೋಜನೆಗೆ 600 ಕೋಟಿ ರೂ. ಮೀಸಲಿಡಲಾಗಿದೆ. ಇತರೆ ಹಿಂದುಳಿದ ವರ್ಗಗಳ ಬಡವರ ಹೆಣ್ಣು ಮಕ್ಕಳ ಮದುವೆ ಅನುದಾನ ಯೋಜನೆಗೆ ಹಣಕಾಸು ಸಚಿವರು 150 ಕೋಟಿ ರೂ. ನೀಡಲಾಗಿದೆ.

UP Budget 2023: Yogi Adityanaths emphasis on naya Uttar Pradesh

ಸ್ವಾಮಿ ವಿವೇಕಾನಂದ ಯುವ ಸಬಲೀಕರಣ ಯೋಜನೆಯಡಿ ಅರ್ಹ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳನ್ನು ಒದಗಿಸಲು, 2023-24ನೇ ಹಣಕಾಸು ವರ್ಷಕ್ಕೆ ಬಜೆಟ್‌ನಲ್ಲಿ 3,600 ಕೋಟಿ ರೂ. ನೀಡಲಾಗಿದೆ. ಮೂಲಸೌಕರ್ಯ ರಂಗದಲ್ಲಿ, ಹಣಕಾಸು ಸಚಿವರು ರಸ್ತೆಗಳು ಮತ್ತು ಸೇತುವೆಗಳ ನಿರ್ಮಾಣಕ್ಕಾಗಿ 21,159 ಕೋಟಿ ರೂ.ಗಳನ್ನು ಮತ್ತು ಅವುಗಳ ನಿರ್ವಹಣೆಗಾಗಿ 6,209 ಕೋಟಿ ರೂ. ನೀಡಲಾಗಿದೆ.

ಕೃಷಿ ಮಾರುಕಟ್ಟೆ ಸೌಲಭ್ಯಗಳಿಗಾಗಿ ಸೇತುವೆಗಳು ಮತ್ತು ರಸ್ತೆಗಳ ಕಾಮಗಾರಿಗೆ 3,473 ಕೋಟಿ ಮತ್ತು ಗ್ರಾಮೀಣ ಪ್ರದೇಶದ ರಸ್ತೆಗಳಿಗೆ 1,525 ಕೋಟಿಗಳನ್ನು ಒದಗಿಸಲಾಗಿದೆ. ರೈಲ್ವೆ ಮೇಲ್ಸೇತುವೆಗಳ ನಿರ್ಮಾಣಕ್ಕೆ 1,700 ಕೋಟಿ ಮತ್ತು ಇತರ ಸೇತುವೆಗಳಿಗೆ 1,850 ಕೋಟಿ ನೀಡಿದ್ದರೆ, ರಾಜ್ಯ ಹೆದ್ದಾರಿಗಳ ಅಗಲೀಕರಣ/ಬಲಪಡಿಸುವಿಕೆ ಮತ್ತು ಹೊಸ ಕಾಮಗಾರಿಗಳಿಗೆ ಬಜೆಟ್‌ನಲ್ಲಿ 2,588 ಕೋಟಿ ರೂ. ನೀಡಲಾಗಿದೆ. ಪ್ರಮುಖರ ಜಿಲ್ಲೆಯ ರಸ್ತೆಗಳ ಅಗಲೀಕರಣ ಮತ್ತು ಹೊಸ ಕಾಮಗಾರಿಗಳಿಗೆ ರೂ 2,538 ಕೋಟಿಯನ್ನು ಒದಗಿಸಲಾಗಿದೆ ಎಂದು ಖನ್ನಾ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+