ನಾಪತ್ತೆಯಾದ ವ್ಯಕ್ತಿಗೆ ಮನೆ ಹುಡುಕಿ ಕೊಟ್ಟ ಆಧಾರ್ ಕಾರ್ಡ್!

Posted By:
Subscribe to Oneindia Kannada

ರಾಯ್ ಬರೇಲಿ, ಡಿಸೆಂಬರ್ 22: ಬ್ಯಾಂಕ್ ಅಕೌಂಟ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್ ಕೊನೆಗೆ ಫೋನ್ ನಂಬರ್ ಗೂ ಆಧಾರ್ ಜೋಡಿಸಿ ಎಂದಾಗ, ಅಯ್ಯೋ ಇದೆಂಥ ತಾಪತ್ರಯ ಎಂದು ಮೂಗು ಮುರಿದವರೇ ಹೆಚ್ಚು. ಅಷ್ಟಕ್ಕೂ ಈ ಆಧಾರ್ ಕಾರ್ಡ್ ನಮಗೆ ಅಗತ್ಯವಿತ್ತಾ ಎಂದೂ ಕೆಲವರು ಪ್ರಶ್ನಿಸುತ್ತಲೇ ಇದ್ದಾರೆ. ಆದರೆ ಈ ಆಧಾರ್ ಕಾರ್ಡ್ ನಾಪತ್ತೆಯಾದ ಒಬ್ಬ ವ್ಯಕ್ತಿಯನ್ನು ವಾಪಸ್ ತನ್ನ ಮನೆಗೆ ತಲುಪಿಸಿದೆ ಎಂದರೆ ನಂಬುತ್ತೀರಾ..?

ಕುಷ್ಠರೋಗಿಯ ಅನ್ನ, ಪಿಂಚಣಿ ಕಿತ್ತುಕೊಂಡ ಆಧಾರ್!

ಉತ್ತರ ಪ್ರದೇಶ ರಾಯ್ ಬರೇಲಿಯ ರಸ್ತೆಯೊಂದರಲ್ಲಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯೊಬ್ಬ, ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಸ್ವಾಮಿ ಭಾಸ್ಕರ್ ಎಂಬುವವರು ಹಿದಿಯಲ್ಲಿ ಮಾತನಾಡಿಸಿದರೂ ಅವರು ಯಾವ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ. ಅವರಿಗೆ ಹಿಂದಿ ಮಾತನಾಡುವುದಕ್ಕೆ ಬರುತ್ತಿರಲಿಲ್ಲ. ನಂತರ ಅವರ ಬಟ್ಟೆಯಲ್ಲಿದ್ದ ಆಧಾರ್ ಕಾರ್ಡ್ ನೋಡಿದಾಗ ಅದರಲ್ಲಿದ್ದ ಅಡ್ರೆಸ್ ಮೂಲಕ ಅವರು ತಮಿಳುನಾಡಿನವರೆಂಬುದು ತಿಳಿದಿದೆ.

UP: Aadhar helps a TN man to find his home again

ಅಷ್ಟೇ ಅಲ್ಲ, ಅವರ ಬಳಿ ಇದ್ದ ಬ್ಯಾಂಕ್ ದಾಖಲೆ ಪತ್ರಗಳ ಮೂಲಕ ಅವರೊಬ್ಬ ಶ್ರೀಮಂತ ವ್ಯಾಪಾರಿಯಾಗಿದ್ದರು ಎಂಬುದೂ ಪತ್ತೆಯಾಗಿತ್ತು!

ಮತ್ತಯ್ಯ ನದಾರ್ ಎಂಬ ಹೆಸರಿನ ಅವರನ್ನು ಸೆಲೂನ್ ಗೆ ಕರೆದೊಯ್ದು ಕೂದಲು, ಗಡ್ಡವನ್ನು ಕತ್ತರಿಸಿ, ನಂತರ ಫೋನ್ ನಂಬರ್ ಪತ್ತೆ ಮಾಡಿ, ಅವರ ಕುಟುಂಬಕ್ಕೆ ಸ್ವಾಮಿ ಭಾಸ್ಕರ್ ಅವರು ಮಾಹಿತಿ ನೀಡಿದ್ದರು.

ಆಧಾರ್ ಜೋಡಣೆ ಕುರಿತು ಸುಪ್ರೀಂ ಮಧ್ಯಂತರ ಆದೇಶ: ಮಾರ್ಚ್ 31 ಕೊನೇ ದಿನ

ವಿಷಯ ತಿಳಿದ ಅವರ ಮಗಳು ಗೀತಾ ರಾಯ್ ಬರೇಲಿಗೆ ಬಂದು, ಸ್ವಾಮಿ ಅವರಿಗೆ ಧನ್ಯವಾದ ಅರ್ಪಿಸಿ ಮುತ್ತಯ್ಯ ಅವರನ್ನು ಮನೆಗೆ ಕರೆದೊಯ್ದಿದ್ದಾರೆ. ತಾವು ಉತ್ತರ ಭಾರತಕ್ಕೆ ಪ್ರವಾಸಕ್ಕೆ ಬಂದಿದ್ದ ಸಮಯದಲ್ಲಿ ಅವರು ರೈಲ್ವೇ ಸ್ಟೇಶನ್ನಿನಲ್ಲಿ ನಾಪತ್ತೆಯಾಗಿದ್ದರು. ನಂತರ ಅವರನ್ನು ಹುಡುಕಲು ಬಹಳ ಪ್ರಯತ್ನಿಸಿದರೂ ಸಿಕ್ಕಿರಲಿಲ್ಲ. ಅಲ್ಲದೆ ಅವರಿಗೆ ನೆನಪಿನ ಶಕ್ತಿಯೂ ಇರಲಿಲ್ಲ ಎಂದು ಗೀತಾ ಅವರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Aadhaar card heped a Tamil Nadu man who was missed in Uttar Pradesh to find his home again. During a train journey his went missing, And he was begging in a road in Rae Bareilly.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ