Sugarcane FRP Price: ರೈತರಿಗೆ ಸಿಹಿ ಸುದ್ದಿ: ಕಬ್ಬು ಖರೀದಿ ಬೆಲೆ ಹೆಚ್ಚಳ: ಜಾರಿ ದಿನಾಂಕ?
ನವದೆಹಲಿ, ಫೆಬ್ರವರಿ 22: ರೈತರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಷ್ಟ್ರ ರಾಜಧಾನಿಯಲ್ಲಿ ದೆಹಲಿ ಚಲೋ ಹೋರಾಟ ಮಾಡುತ್ತಿದ್ದು, ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಈ ನಡುವೆಯೇ ಕೇಂದ್ರ ಸರ್ಕಾರ ರೈತರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ.
ಬುಧವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತು ಕೇಂದ್ರ ಸಚಿವ ಸಂಪುಟ ಸಭೆ ನಡೆಯಿತು. ಈ ವೇಳೆ ಮುಂಬರುವ ಕಬ್ಬು ಖರೀದಿ ಹಂಗಾಮಿನಲ್ಲಿ ಖರೀದಿ ದರ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಮುಂದಿನ ಕಬ್ಬು ಹಂಗಾಮಿನ ವೇಳೆ ಅಂದರೆ 2024ರ ಅಕ್ಟೋಬರ್ 1ರಿಂದ 2025 ಸೆಪ್ಟಂಬರ್ 30ರ ಅವಧಿಗೆ ಕಬ್ಬು ಖರೀದಿ ದರವನ್ನು ಕ್ವಿಂಟಲ್‌ಗೆ 315 ರು.ನಿಂದ 340 ರು.ಗೆ ಹೆಚ್ಚಿಸಲಾಗಿದೆ. ಅಂದರೆ ಪ್ರತಿ ಕ್ವಿಂಟಲ್‌ಗೆ 25 ರು. ಹೆಚ್ಚಳ ಮಾಡಲಾಗಿದೆ. ರೈತರಿಗೆ ನ್ಯಾಯಸಮ್ಮತ ಮತ್ತು ಸಮಂಜಸ ಬೆಲೆ ನೀಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಮೂರು ರಾಜ್ಯಗಳ ರೈತರಿಗೆ ಅನುಕೂಲ
ಇದು ನರೇಂದ್ರ ಮೋದಿ ಸರ್ಕಾರ ಒಂದೇ ಬಾರಿಗೆ ಕಬ್ಬು ಖರೀದಿ ದರದಲ್ಲಿ ಮಾಡಿದ ಗರಿಷ್ಠ ಏರಿಕೆ ಪ್ರಮಾಣವಾಗಿದೆ. ಈ ಏರಿಕೆಯ ಲಾಭ ಹೆಚ್ಚಿನ ಕಬ್ಬು ಬೆಳೆಯುವ ಕರ್ನಾಟಕ, ಮಹಾರಾಷ್ಟ್ರರ, ಉತ್ತರಪ್ರದೇಶದ ರಾಜ್ಯಗಳ ರೈತರಿಗೆ ಸಿಗಲಿದೆ ಎಂದು ಸರ್ಕಾರ ತಿಳಿಸಿದೆ.
ದೇಶದಲ್ಲಿ ಕಬ್ಬನ್ನು ಹೆಚ್ಚಾಗಿ ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಕರ್ನಾಟಕದಲ್ಲಿ ಬೆಳೆಯಲಾಗುತ್ತದೆ. ಸಿಸಿಇಎ 2024-25ರ ಕಬ್ಬಿನ ಎಫ್‌ಆರ್‌ಪಿಯನ್ನು ಪ್ರತಿ ಕ್ವಿಂಟಲ್‌ಗೆ 340 ರೂ.ಗೆ 10.25 ಪ್ರತಿಶತದಷ್ಟು ಸಕ್ಕರೆ ಚೇತರಿಕೆ ದರದಲ್ಲಿ ಅನುಮೋದಿಸಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದರು.
Under the @narendramodi’s leadership, the approval of Fair and Remunerative Price (FRP) for sugarcane at Rs 340/quintal for 2024-25 showcases a remarkable 8% increase, reflecting the government's unwavering commitment to farmers' welfare. This historic milestone empowers our… pic.twitter.com/94WDOZFPu0
— Basavaraj S Bommai (@BSBommai) February 21, 2024
ಕಳೆದ ವರ್ಷಕ್ಕಿಂತ ಶೇ.8 ಅಧಿಕ ಏರಿಕೆ
ಇಂದು ನಿಗದಿಪಡಿಸಿದ ಬೆಲೆ ಇದು ಕಬ್ಬಿನ ಐತಿಹಾಸಿಕ ಬೆಲೆಯಾಗಿದೆ. ಪ್ರಸಕ್ತ ಋತುವಿನ 2023-24 ರ ಕಬ್ಬಿನ FRP ಗಿಂತ ಸುಮಾರು 8 ಶೇಕಡಾ ಹೆಚ್ಚಾಗಿದೆ ಎಂದು ಅವರು ಬಣ್ಣಿಸಿದರು. ಹೊಸ ಎಫ್‌ಆರ್‌ಪಿಯು ಕಬ್ಬಿನ ಎ2+ಎಫ್‌ಎಲ್ ವೆಚ್ಚಕ್ಕಿಂತ ಶೇ.107ರಷ್ಟು ಇದು ಹೆಚ್ಚು ಎಂದರು.

ಭಾರತ ಸರ್ಕಾರವು ವಿಶ್ವದಲ್ಲೇ ಅತಿ ಹೆಚ್ಚು ಖರೀದಿ ಬೆಲೆಯನ್ನು ಕಬ್ಬಿಗೆ ನೀಡುತ್ತಿದೆ. ಸದ್ಯ ಇಂದು ಸರ್ಕಾರ ಕೈಗೊಂಡ ಪರಿಷ್ಕೃತ FRP ಬೆಲೆ ನಿರ್ಧಾರವು ಮುಂದಿನ ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ. ಇಂದಿನ ಕೃಷಿ ವೆಚ್ಚಗಳು ಹಾಗೂ ಬೆಲೆಗಳ ಆಯೋಗದ (CACP) ಶಿಫಾರಸುಗಳ ಆಧಾರದ ಮೇಲೆ ಈ FRP ನಿರ್ಧರಿಸಲಾಗಿದೆ ಎಂದು ಹೇಳಿದರು.
5 ಕೋಟಿ ಕಬ್ಬು ಬೆಳೆಗಾರರಿಗೆ ಸಹಾಯ
ಕೇಂದ್ರ ಸರ್ಕಾರದ ಈ ನಿರ್ಧಾರವು ಕಬ್ಬು ಬೆಳೆಯುವ 5 ಕೋಟಿಗೂ ಹೆಚ್ಚು ರೈತರು ಮತ್ತವರ ಕುಟುಂಬಗಳಿಗೆ ಹಾಗೂ ಸಕ್ಕರೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಲಕ್ಷಾಂತರ ಜನರಿಗೆ ಲಾಭ ತಂದು ಕೊಂಡಲಿದೆ. ಇನ್ನೂ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಎಫ್‌ಆರ್‌ಪಿಯನ್ನು ಪ್ರತಿ ಕ್ವಿಂಟಲ್‌ಗೆ 340 ರೂ.ನಂತೆ ಶೇ.10.25 ರಷ್ಟು ವಸೂಲಿ ಮಾಡಲಿವೆ.
ಬರಗಾಲಕ್ಕೆ ತತ್ತೆರಿಸಿದ್ದ ರಾಜ್ಯಗಳ ರೈತರಿಗೆ (ಕಬ್ಬು ಬೆಳೆಗಾರರಿಗೆ) ಸರ್ಕಾರ ಸಿಹಿ ಸುದ್ದಿ ನೀಡಿದೆ. ಇದರಿಂದ ತಕ್ಕ ಮಟ್ಟಿಗೆ ಈ ಕಬ್ಬು ಖರೀದಿ ಬೆಲೆ ಏರಿಕೆ ಆರ್ಥಿಕ ಸಹಾಯಕ್ಕೆ ಬರಲಿದೆ.
-
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಏರಿಕೆ: ಇಲ್ಲಿದೆ ಮಾರ್ಚ್ 26ರ ದರಪಟ್ಟಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ











Click it and Unblock the Notifications