2025 Holiday List: 2025ನೇ ಸಾಲಿನ ಸರ್ಕಾರಿ ರಜೆಗಳ ಪಟ್ಟಿ
ಬೆಂಗಳೂರು, ಸೆಪ್ಟೆಂಬರ್ 28: 2024ನೇ ವರ್ಷ ಅಂತ್ಯಗೊಳ್ಳುತ್ತಾ ಬಂದಿದೆ. 2025ನೇ ಸಾಲಿನಲ್ಲಿ ವಿವಿಧ ಕಾರ್ಯಗಳನ್ನು ಮಾಡಬೇಕು ಎಂದು ಜನರು ಯೋಜನೆ ರೂಪಿಸುತ್ತಿದ್ದಾರೆ. ಕೇಂದ್ರ ಸರ್ಕಾರ 2025ನೇ ಸಾಲಿನ ಸಾಮಾನ್ಯ ಮತ್ತು ನಿರ್ಬಂಧಿತ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವರ್ಷದ ಆರಂಭದಲ್ಲಿ ಪ್ರವಾಸ ಮಾಡುವ ಆಲೋಚನೆ ಹೊಂದಿರುವ ಕೇಂದ್ರ ಸರ್ಕಾರಿ ನೌಕರರು ರಜೆಯ ಕುರಿತು ಮಾಹಿತಿ ತಿಳಿದು ಯೋಜನೆ ರೂಪಿಸಬಹುದಾಗಿದೆ.
ಈ ಕುರಿತು ಸಿಬ್ಬಂದಿ, ಸಾರ್ವಜನಿಕ ಅಹವಾಲುಗಳು ಮತ್ತು ನಿವೃತ್ತಿವೇತನಗಳ ಸಚಿವಾಲಯ 2025ನೇ ಸಾಲಿನ ರಜಾ ಪಟ್ಟಿಯ ಕುರಿತು ಪ್ರಕಟಣೆಯನ್ನು ಹೊರಡಿಸಿದೆ. ಇವುಗಳಲ್ಲಿ 17 ಗೆಜೆಟೆಡ್ ರಜಾ ದಿನಗಳು ಮತ್ತು 34 ನಿರ್ಬಂಧಿತ ರಜಾದಿನಗಳು ಇವೆ. ಜನವರಿ 26ರ ಗಣರಾಜ್ಯೋತ್ಸವದಿಂದ ಆರಂಭಗೊಂಡು, ಡಿಸೆಂಬರ್ 25ರ ಕ್ರಿಸ್‌ಮಸ್ ತನಕ 17 ಸಾಮಾನ್ಯ ರಜೆಗಳು ಇವೆ. ಆದರೆ ರಾಜ್ಯಗಳಲ್ಲಿ ಕೆಲವು ರಜೆಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗುತ್ತದೆ.

17 ಸಾಮಾನ್ಯ ರಜೆಗಳ ಪಟ್ಟಿ
* ಜನವರಿ 26, ಭಾನುವಾರ. ಗಣರಾಜ್ಯೋತ್ಸವ
* ಫೆಬ್ರವರಿ 26, ಬುಧವಾರ. ಮಹಾಶಿವರಾತ್ರಿ
* ಮಾರ್ಚ್ 14, ಶುಕ್ರವಾರ. ಹೋಳಿ
* ಮಾರ್ಚ್ 31, ಸೋಮವಾರ. ಈದ್-ಉಲ್-ಫಿತರ್.
* ಏಪ್ರಿಲ್ 10, ಗುರುವಾರ. ಮಹಾವೀರ ಜಯಂತಿ
* ಏಪ್ರಿಲ್ 18. ಶುಕ್ರವಾರ. ಗುಡ್ ಫ್ರೈಡೇ
* ಮೇ 12, ಸೋಮವಾರ. ಬುದ್ಧ ಪೌರ್ಣಿಮಾ
* ಜೂನ್ 7, ಶನಿವಾರ. ಬಕ್ರೀದ್
* ಜುಲೈ 6, ಭಾನುವಾರ. ಮೊಹರಂ
* ಆಗಸ್ಟ್ 15, ಶುಕ್ರವಾರ. ಸ್ವಾತಂತ್ರ್ಯ ದಿನಾಚರಣೆ
* ಆಗಸ್ಟ್ 16, ಶನಿವಾರ. ಕೃಷ್ಣ ಜನ್ಮಾಷ್ಠಮಿ
* ಸೆಪ್ಟೆಂಬರ್ 5, ಶುಕ್ರವಾರ. ಈದ್-ಮಿಲಾದ್
* ಅಕ್ಟೋಬರ್ 2, ಗುರುವಾರ. ಗಾಂಧಿ ಜಯಂತಿ
* ಅಕ್ಟೋಬರ್ 2, ಗುರುವಾರ, ದಸರಾ
* ಅಕ್ಟೋಬರ್ 20, ಸೋಮವಾರ. ದೀಪಾವಳಿ
* ನವೆಂಬರ್ 5, ಬುಧವಾರ. ಗುರುನಾನಕ್ ಜಯಂತಿ
* ಡಿಸೆಂಬರ್ 25, ಗುರುವಾರ. ಕ್ರಿಸ್‌ಮಸ್
ನಿರ್ಬಂಧಿತ ರಜೆಗಳ ಪಟ್ಟಿ: ಜನವರಿ 1, ಬುಧವಾರ ಹೊಸ ವರ್ಷ. ಜನವರಿ 6, ಸೋಮವಾರ ಗುರು ಗೋವಿಂದ್ ಸಿಂಗ್ ಜಯಂತಿ. ಜನವರಿ 14, ಮಂಗಳವಾರ ಮಕರ ಸಂಕ್ರಾಂತಿ. ಫೆಬ್ರವರಿ 2, ಭಾನುವಾರ ಬಸಂತ ಪಂಚಮಿ. ಫೆಬ್ರವರಿ 12, ಬುಧವಾರ ಗುರು ರವಿದಾಸ್ ಜಯಂತಿ. ಫೆಬ್ರವರಿ 19, ಬುಧವಾರ ಶಿವಾಜಿ ಜಯಂತಿ. ಫೆಬ್ರವರಿ 23, ಭಾನುವಾರ ಸ್ವಾಮಿ ದಯಾನಂದ ಸರಸ್ವತಿ ಜಯಂತಿ.
ಮಾರ್ಚ್ 13, ಗುರುವಾರ ಹೋಲಿಕಾ ಧನ್. ಮಾರ್ಚ್ 14, ಶುಕ್ರವಾರ ದೋಲಾ ಯಾತ್ರಾ. ಏಪ್ರಿಲ್ 16, ಭಾನುವಾರ ರಾಮನವಮಿ, ಆಗಸ್ಟ್ 27, ಬುಧವಾರ ಗಣೇಶ ಚತುರ್ಥಿ. ಸೆಪ್ಟೆಂಬರ್ 5, ಶುಕ್ರವಾರ ಓಣಂ. ಸೆಪ್ಟೆಂಬರ್ 29, ಸೋಮವಾರ ದಸರಾ ಸಪ್ತಮಿ. ಸೆಪ್ಟೆಂಬರ್ 30, ಮಂಗಳವಾರ ಮಹಾ ಸಪ್ತಮಿ.
ಅಕ್ಟೋಬರ್ 1, ಬುಧವಾರ ಮಹಾ ನವಮಿ. ಅಕ್ಟೋಬರ್ 7, ಮಂಗಳವಾರ ವಾಲ್ಮೀಕಿ ಜಯಂತಿ. ಅಕ್ಟೋಬರ್ 10, ಶುಕ್ರವಾರ ಕಾರ್ವ ಚೌತ್. ಅಕ್ಟೋಬರ್ 20, ಸೋಮವಾರ ನರಕ ಚತುರ್ದಶಿ. ಅಕ್ಟೋಬರ್ 22, ಬುಧವಾರ ಗೋವರ್ಧನ ಪೂಜಾ. ಅಕ್ಟೋಬರ್ 23, ಗುರುವಾರ ಬಾಹಿ ಪೂಜಾ. ಅಕ್ಟೋಬರ್ 28, ಮಂಗಳವಾರ ಚಾತ್ ಪೂಜಾ. ನವೆಂಬರ್ 24, ಸೋಮವಾರ ಗುರು ತೇಗ್ ಬಂಡಾರ್ಕರ್ ಹುತಾತ್ಮ ದಿನ, ಡಿಸೆಂಬರ್ 24, ಬುಧವಾರ ಕ್ರಿಸ್‌ಮಸ್ ಈವ್.












Click it and Unblock the Notifications