PM-Vidyalaxmi Scheme: ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ
ನವದೆಹಲಿ, ನವೆಂಬರ್ 06: ಕೇಂದ್ರ ಬಿಜೆಪಿ ಸರ್ಕಾರವು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಅವರಿಗೆ ಆರ್ಥಿಕ ಬೆಂಬಲ ನೀಡಬಹುದಾದ ಹೊಸ ಯೋಜನೆಯೊಂದನ್ನು ಜಾರಿಗೆ ತರಲಿದೆ. ಪ್ರಧಾನಮಂತ್ರಿ-ವಿದ್ಯಾಲಕ್ಷ್ಮಿ (PM Vidyalaxmi Scheme) ಯೋಜನೆಗೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ. ಇದು ವಿದ್ಯಾರ್ಥಿಗಳಿಗೆ ಆರ್ಥಿಕ ಅಡಚಣೆಗಳನ್ನು ನಿವಾರಿಸಲಿದೆ.
ದೇಶದಲ್ಲಿನ ವಿವಿಧ ಎಲ್ಲ ಸಮುದಾಯಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಅಡಚಣೆ ಉಂಟಾಗಿ ಅವರು, ಗುಣಮಟ್ಟದ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇಂತಹವರಿಗೆ ಅಡ್ಡಿಯಾಗದಂತೆ ವಿತ್ತೀಯ ಬೆಂಬಲ ನೀಡುವ ಪ್ರಧಾನಮಂತ್ರಿ-ವಿದ್ಯಾಲಕ್ಷ್ಮಿ ಯೋಜನೆ ಅನುಷ್ಠಾನಗೊಳಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿಗಳಿಗೆ ಯೋಜನೆಯ ಲಾಭ ಹೇಗೆ?
ಪಿಎಂ ವಿದ್ಯಾಲಕ್ಷ್ಮೀ ಯೋಜನೆಯು ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ (QHEIs) ಉನ್ನತ ಶಿಕ್ಷಣ ಪಡೆಯಲು ಸಹಾಯ ಮಾಡುತ್ತದೆ. ಉನ್ನತ ಸಂಸ್ಥೆಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಆಯಾ ಕೋರ್ಸಿಗೆ ಸಂಬಂಧಿಸಿದ ಪೂರ್ಣ ಪ್ರಮಾಣದ ಬೋಧನಾ ಶುಲ್ಕ ಮತ್ತು ಇನ್ನಿತರ ವೆಚ್ಚಗಳನ್ನು ಭರಿಸಲಿದೆ. ಅಂದರೆ ಬ್ಯಾಂಕ್, ಇತರ ಹಣಕಾಸು ಸಂಸ್ಥೆಗಳಿಂದ ಖಾತರಿ-ಮುಕ್ತ ಸಾಲ ಪಡೆಯಲು ವಿದ್ಯಾರ್ಥಿಗಳ ಅರ್ಹರಾಗಿತ್ತಾರೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರುವ ದೇಶದ ಯಾವುದೇ ವಿದ್ಯಾರ್ಥಿಗಳು/ಯುವಕರು ಉನ್ನತ ಶೈಕ್ಷಣಿಕ ಅಭ್ಯಾಸ ಪಡೆಯಲು ಆರ್ಥಿಕ ಸಮಸ್ಯೆ, ಅಡಚರಣೆ ಉಂಟಾಗಬಾರದು ಎಂಬ ನಿಲುವು ತಾಳಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅವರಿಗೆ ಹಣಕಾಸಿನ ನೆರವು ಒದಗಿಸಲು ಪಿಎಂ-ವಿದ್ಯಾಲಕ್ಷ್ಮಿ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿತು ಎಂದರು.
ಎನ್‌ಐಆರ್‌ಎಫ್ ಶ್ರೇಯಾಂಕ ನಿರ್ಧರಿಸಿದಂತೆ ಉನ್ನತ ಕ್ಯೂಎಚ್‌ಇಐ ಗಳಿಗೆ ಈ ಯೋಜನೆ ಅನ್ವಯಿಸುತ್ತದೆ ಎಂದು ತಿಳಿಸಲಾಗಿದೆ. ಎಲ್ಲ ಎಚ್‌ಇಐಗಳು ಸರ್ಕಾರಿ ಮತ್ತು ಖಾಸಗಿ ಸೇರಿದಂತೆ, ಎನ್‌ಐರ್‌ಎಫ್ ನಲ್ಲಿ ಒಟ್ಟಾರೆ, ವರ್ಗ-ನಿರ್ದಿಷ್ಟ ಮತ್ತು ಡೊಮೇನ್-ನಿರ್ದಿಷ್ಟ ಶ್ರೇಯಾಂಕಗಳಲ್ಲಿ ಅಗ್ರ 100 ರೊಳಗೆ ಸ್ಥಾನ ಪಡೆಯಬೇಕು ಎಂಬಿತ್ಯಾದಿ ನಿಯಮಗಳು ಇವೆ.
Congratulations to our youth on the approval of the 'PM Vidyalakshmi' Scheme in the Union Cabinet today, removing a major obstacle on their path to success. By envisioning a guarantee-free and collateral-free educational loan scheme, Modi Ji has ensured that no student is… pic.twitter.com/T1tvXkOny9
— Amit Shah (@AmitShah) November 6, 2024
ಈ ಮೇಲಿನ ಅರ್ಹತಾ ಪಟ್ಟಿಯನ್ನು ಇತ್ತೀಚೆಗಷ್ಟೇ ಎನ್‌ಐಆರ್‌ಎಫ್ ಶ್ರೇಯಾಂಕ ಬಳಸಿಕೊಂಡು ಪ್ರತಿವರ್ಷ ರಿನಿವಲ್ ಮಾಡಲಾಗುತ್ತದೆ. 860 ಅರ್ಹತೆ (QHEI) ದೇಶದ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೋಸ್ ಪ್ರವೇಶ ಪಡೆಯಲು ಬಯಸಿದರೆ, ಪಿಎಂ-ವಿದ್ಯಾಲಕ್ಷ್ಮಿ ಪ್ರಯೋಜನಗಳನ್ನು ಸಮರ್ಥವಾಗಿ ಪಡೆಯಬಹುದಾಗಿದೆ ಎಂದು ಕೇಂದ್ರ ಸರ್ಕಾರ ತನ್ನ ಹೇಳೀಕೆಯಲ್ಲಿ ತಿಳಿಸಿದೆ ಎಂದು ವರದಿ ಆಗಿದೆ.
ಇನ್ನೂ ಈ ಕುರಿತು ಅಮಿತ್ ಶಾ ಅವರು ಯೋಜನೆ ಜಾರಿಯ ಬಗ್ಗೆ ಖಚಿತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಸಹ ಹೊಸ ಯೋಜನೆ ಕುರಿತು ಮಾಹಿತಿ ನೀಡಿದ್ದಾರೆ.












Click it and Unblock the Notifications