ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುರಕ್ಷಿತ ಪ್ರಯಾಣ: ದಂಡಂ ದಶಗುಣಂ ಎಂದ ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ಆಗಸ್ಟ್, 04: ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರಿಗೆ 10,000 ರು. ದಂಡ, ವಿಮೆ ಇಲ್ಲದೆ ವಾಹನ ಚಲಾಯಿಸಿದರೆ 2,000 ರು. ದಂಡ, 3 ತಿಂಗಳ ಜೈಲು ಅಥವಾ ಎರಡೂ ಶಿಕ್ಷೆ, ಹೆಲ್ಮೆಟ್‌ ಇಲ್ಲದೆ ಬೈಕ್‌ ಸಂಚಾರಕ್ಕೆ 1,000 ರು. ದಂಡ, 3 ತಿಂಗಳು ಲೈಸನ್ಸ್‌ ಅಮಾನತು, ಹೌದು ಇಂಥ ಕಠಿಣ ನಿಯಮಗಳನ್ನೊಳಗೊಂಡ ವಿಧೇಯಕಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ರಸ್ತೆ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಮೋಟಾರು ಕಾಯ್ದೆ (ತಿದ್ದುಪಡಿ) ಮಸೂದೆ 2016ಕ್ಕೆ ಬುಧವಾರ ಅನುಮೋದನೆ ನೀಡಿದೆ. ದಂಡದ ಹೆಸರಿನಲ್ಲಿ ಜನರಿಗೆ ರಸ್ತೆ ಸುರಕ್ಷತಾ ಜಾಗೃತಿಯನ್ನು ಮೂಡಿಸಲು ಮುಂದಾಗಿದೆ.[ನವದಂಪತಿಗೆ ಇದಕ್ಕಿಂತ ಉತ್ತಮ ಉಡುಗೊರೆ ಕೊಡಲು ಸಾಧ್ಯವಿಲ್ಲ]

Union Cabinet gives nod to new Motor Vehicle Bill, 2016

ಗುದ್ದೋಡು ಪ್ರಕರಣಕ್ಕೂ ಸಂಬಂಧಿಸಿ ಮಹತ್ವದ ತಿದ್ದುಪಡಿ ಮಾಡಲಾಗಿದೆ. ಗುದ್ದೋಡು ಪ್ರಕರಣದ ಸಂತ್ರಸ್ತರಿಗೆ 2 ಲಕ್ಷ ರು.. ಪರಿಹಾರ, ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರಿಗೆ 10 ಲಕ್ಷ ರು. ಪರಿಹಾರ ನೀಡಬೇಕು ಎಂಬ ಅಂಶಗಳು ಹೊಸ ಕಾಯಿದೆಯಲ್ಲಿವೆ.[ಹೆಲ್ಮೆಟ್ ಕಡ್ಡಾಯ: ಜನರ ಪ್ರಶ್ನೆಗೆ ಸರ್ಕಾರ ಏನು ಹೇಳುತ್ತೆ?]

ಮೋಟಾರು ಕಾಯ್ದೆ (ತಿದ್ದುಪಡಿ) ಮಸೂದೆ 2016ರ ಇತರ ಅಂಶಗಳು
* ವಾಹನ ಚಲಾವಣೆಗೆ ಶೈಕ್ಷಣಿಕ ಹಿನ್ನೆಲೆ ಕಡ್ಡಾಯ ಎಂಬ ನಿಯಮ ರದ್ದು
* ವಾಹನ ಚಲಾವಣೆಗೆ ನೀಡಿದ ಲೈಸನ್ಸ್‌ ಅವಧಿ ಹೆಚ್ಚಳ
* ವಾಹನ ತಾತ್ಕಾಲಿಕ ನೋಂದಣಿ ವ್ಯವಸ್ಥೆ ಸಂಪೂರ್ಣ ರದ್ದು
* ಅಪ್ರಾಪ್ತರು ವಾಹನ ಚಲಾಯಿಸಿ ಅಪಘಾತ ಮಾಡಿದರೆ ಅದಕ್ಕೆ ಅವರ ಪಾಲಕರೇ ನೇರ ಹೊಣೆ, ವಾಹನದ ನೋಂದಣಿ ರದ್ದು
* ಸಂಚಾರ ನಿಯಮ ಉಲ್ಲಂಘನೆಗೆ ಚಾಲ್ತಿಯಲ್ಲಿದ್ದ 100 ರು. ದಂಡದ ಬದಲಾಗಿ 500 ರು. ದಂಡ
* ಲೈಸನ್ಸ್‌ ಇಲ್ಲದೆ ವಾಹನ ಚಲಾಯಿಸಿದರೆ ಮತ್ತು ಅನಧಿಕೃತವಾಗಿ ವಾಹನ ಚಲಾಯಿಸಿದರೆ 5,000 ರು. ದಂಡ
* ವಾಹನ ಚಾಲನೆ ಮಾಡದಂತೆ ಶಿಕ್ಷೆ ವಿಧಿಸಿದ್ದರೂ ವಾಹನ ಚಲಾಯಿಸಿದರೆ ಅಂಥ ಸಂದರ್ಭ ಕನಿಷ್ಠ 10,000 ರೂ. ದಂಡ.
* ಅಪಾಯಕಾರಿ ವಾಹನ ಚಾಲನೆಗೆ ಮೊದಲಿದ್ದ 1,000 ರು. ದಂಡದ ಬದಲಾಗಿ 5,000 ರು. ದಂಡ
*ಮಿತಿ ಮೀರಿ ಸರಕು ಸಾಗಿಸುವ ವಾಹನಗಳಿಗೆ 20,000 ರು. ದಂಡ,
* ಸೀಟ್ ಬೆಲ್ಟ್ ಹಾಕಿಕೊಳ್ಳದೆ ವಾಹನ ಚಲಾಯಿಸಿದರೆ 1,000 ರು. ದಂಡ.

English summary
Government today approved the much- awaited Motor Vehicle (Amendment) Bill 2016 that proposes hefty penalties for violation of traffic norms including up to Rs 10,000 fine for drunken driving and Rs 2 lakh compensation for hit-and-run cases. The bill also has provision of up to Rs 10 lakh compensation in case of road fatality.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X