ಮಹಾನಗರಗಳ ಕಸದಿಂದ ರಸ ತೆಗೆಯಲಿದೆ ಕೇಂದ್ರ ಸರ್ಕಾರ

Subscribe to Oneindia Kannada

ನವದೆಹಲಿ, ಜನವರಿ, 21: ಮಹಾನಗರದ ಕಸ ಇನ್ನು ಮುಂದೆ ರಸವಾಗಲಿದೆ. ಕಸವನ್ನು ಗೊಬ್ಬರವನ್ನಾಗಿಸಿ ರೈತರಿಗೆ ನೀಡಬೇಕು ಎಂಬ ಮಹತ್ವದ ತೀರ್ಮಾನಕ್ಕೆ ಕೇಂದ್ರ ಸರ್ಕಾರದ ಕ್ಯಾಬಿನೆಟ್ ಅಸ್ತು ಎಂದಿದೆ.

ಸ್ವಚ್ಛ ಭಾರತ ಅಭಿಯಾನದ ಅಡಿ ಮಹಾನಗರದ ಕಸವನ್ನು ಕ್ರಮಬದ್ಧವಾಗಿ ವಿಂಗಡನೆ ಮಾಡಿ ಕಾಂಪೋಸ್ಟ್ ತಯಾರಿಕೆಗೆ ಮುಂದಾಗಿದೆ. ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕಸವನ್ನು ಗೊಬ್ಬರವನ್ನಾಗಿಸಿ ಕಡಿಮೆ ದದಲ್ಲಿ ರೈತರಿಗೆ ನೀಡುವ ಉದ್ದೇಶವನ್ನು ಹೊಂದಿದೆ. ಕೇಂದ್ರ ರಸಗೊಬ್ಬರ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆ ಜಂಟಿಯಾಗಿ ಕಾರ್ಯವನ್ನು ಕೈಗೆತ್ತಿಕೊಳ್ಳಲಿದೆ.[ನಗರ ಸ್ವಚ್ಛವಾಗಿಡಿ.. ಇಲ್ಲದಿದ್ದರೆ ಇವನಿಗಾದಂತೆ ಆದೀತು]

Union Cabinet approves policy on promotion of cities Compost

ಮಹಾನಗರಗಳು ಎದುರಿಸುತ್ತಿದ್ದ ಕಸದ ಸಮಸ್ಯೆಗೆ ಈ ಕ್ರಮ ಪರ್ಯಾಯ ಪರಿಹಾರವನ್ನು ನೀಡಲಿದೆ. ಒಂದೆಡೆ ಕಸ ಸಮಸ್ಯೆ ನಿವಾರಣೆ ಇನ್ನೊಂದೆಡೆ ರೈತರಿಗೆ ಕಡಿಮೆ ದರದಲ್ಲಿ ರಸಗೊಬ್ಬರ ದೊರೆಯಲಿದೆ. ಪ್ರಾಥಮಿಕವಾಗಿ ಒಂದು ಟನ್ ನಗರದ ಕಸಕ್ಕೆ 1500 ರು. ನಿಗದಿಪಡಿಸಲಾಗಿದ್ದು ಕಂಪನಿಗಳು ಗುತ್ತಿಗೆ ಪಡೆದುಕೊಳ್ಳಲು ಮುಂದೆ ಬರಬಹುದು ಎಂದು ರಸಗೊಬ್ಬರ ಇಲಾಖೆ ತಿಳಿಸಿದೆ.

ಕೇಂದ್ರ ಕ್ಯಾಬಿನೆಟ್ ಸಭೆಯಲ್ಲಿ ಕಸದಿಂದ ರಸ ತೆಗೆಯಲು ತೆಗೆದುಕೊಂಡ ತೀರ್ಮಾನಗಳು
* ಕಸವನ್ನು ರೈತರಿಗೆ ಗೊಬ್ಬರವನ್ನಾಗಿಸಿ ನೀಡಬೇಕು ಎಂಬ ರಸಗೊಬ್ಬರ ಇಲಾಖೆಯ ಪ್ರಸ್ತಾವನೆಗೆ ಒಪ್ಪಿಗೆ
* ನಗರದ ಕಸದಲ್ಲಿನ ಸಾರಜನಕ ಮತ್ತು ರಂಜಕದ ಅಂಶಗಳ ಬಳಕೆಗೆ ಒತ್ತು
* ಇದರಿಂದ ಮಹಾನಗರದ ಜನರಿಗೆ ಉದ್ಯೋಗ ಸೃಷ್ಟಿ[ಬಾಪೂ ಇನ್ನೂ ಸತ್ತಿಲ್ಲ, ಇಲ್ಲೊಂದು ಪತ್ರ ಬರೆದಿದ್ದಾರೆ ಓದಿ!]
* ಅಂತರ್ಜಲ ಮಟ್ಟ ಕಾಯ್ದುಕೊಳ್ಳಲು ತೀರ್ಮಾನ
* ರಾಜ್ಯಗಳ ತೋಟಗಾರಿಕಾ ಇಲಾಖೆಗಳ ನೆರವು ಪಡೆಯಲು ಚಿಂತನೆ
* ನಿರ್ದಿಷ್ಟ ಕಂಪನಿಗಳಿಗೆ ಕಸ ವಿಂಗಡನೆ ಮತ್ತು ಕಾಂಪೋಸ್ಟ್ ಆಗಿಸುವುವ ಸಂಪೂರ್ಣ ಜವಾಬ್ದಾರಿ
* ರಾಜ್ಯಗಳ ವಿವಿಧ ಭಾಗಗದಲ್ಲಿ ಕಸ ವಿಂಗಡನಾ ಘಟಕ ಸ್ಥಾಪನೆ
* ಕೃಷಿ ವಿಜ್ಞಾನ ಕೇಂದ್ರ ಮತ್ತು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಸಹಯೋಗ
* ಗೊಬ್ಬರ ತಯಾರಿಕೆ ಮತ್ತು ಮಾರಾಟದ ಜವಾಬ್ದಾರಿ ಆಯಾ ರಾಜ್ಯ ಸರ್ಕಾರಗಳಿಗೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Union Cabinet has approved the proposal of Department of Fertilisers a Policy on Promotion of City Compost. The processing and use of city waste as compost is a logical component of the "Swachh Bharat Abhiyan" campaign of Govt. of India launched by the Prime Minister Narendra Modi. The Cabinet has approved provision for Market development assistance in the form of fixed amount of Rs. 1500 per tonne of City Compost for scaling up production and consumption of the product.
Please Wait while comments are loading...