ಸಂಬಳದಾರ ವರ್ಗಕ್ಕೆ ಜೇಟ್ಲಿ ನೀಡಲಿದ್ದಾರೆ ಬಜೆಟ್ ನಲ್ಲಿ ಸಿಹಿಸುದ್ದಿ?

Posted By:
Subscribe to Oneindia Kannada

ನವದೆಹಲಿ, ಜ 4: ಇದೇ ಬರುವ ಫೆಬ್ರವರಿ ತಿಂಗಳಲ್ಲಿ ಮಂಡಿಸಲಾಗುವ 2018-19ರ ಕೇಂದ್ರ ಆಯವ್ಯಯದಲ್ಲಿ (ಬಜೆಟ್) ಸಂಬಳದಾರರು ಕೊಂಚ ನಿರಾಳವಾಗುವ ಸುದ್ದಿಯನ್ನು ಕೇಂದ್ರ ಸರಕಾರ ಪ್ರಕಟಿಸುವ ಸಾಧ್ಯತೆಯಿದೆ.

ಸೆಕ್ಷನ್ 80C ಅಡಿಯಲ್ಲಿ ಈಗ ನೀಡಲಾಗುತ್ತಿರುವ ತೆರಿಗೆ ವಿನಾಯತಿ ಗರಿಷ್ಠ ಮಿತಿಯನ್ನು ಒಂದೂವರೆ ಲಕ್ಷದಿಂದ ಎರಡು ಲಕ್ಷಕ್ಕೆ ಏರಿಕೆ ಮಾಡುವ ಸಾಧ್ಯತೆಯಿದೆ.

ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳ ಸಾಧ್ಯತೆ

ಫೆಬ್ರವರಿ ಒಂದರಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸುವ ಬಜೆಟ್ ನಲ್ಲಿ ಈ ಬಗ್ಗೆ ಘೋಷಣೆ ಮಾಡುವ ಸಾಧತೆಯಿದ್ದು, FD (ನಿಶ್ಚಿತ ಠೇವಣಿ), ಮ್ಯೂಚುವಲ್ ಫಂಡ್, ವಿಮಾ ಪ್ರೀಮಿಯಂಗಳಲ್ಲಿ ಹೂಡಿಕೆ ಮಾಡುವ ತೆರಿಗೆದಾರರಿಗೆ 80C ಅಡಿಯಲ್ಲಿ ರಿಯಾಯತಿ ಪಡೆಯುವ ಅವಕಾಶವನ್ನು ಬಜೆಟ್ ನಲ್ಲಿ ನೀಡುವ ಸಾಧ್ಯತೆಯಿದೆ ಎಂದು ಮನಿ ಕಂಟ್ರೋಲ್ ಅಂತರ್ಜಾಲ ವರದಿ ಮಾಡಿದೆ.

Budget 2018 may raise Section 80 (C) investment limit to Rs 2 lakh a year

ಆ ಮೂಲಕ, ಸಾರ್ವಜನಿಕರಿಗೆ ಉಳಿತಾಯ ಪ್ರವೃತ್ತಿಯನ್ನು ಉತ್ತೇಜಿಸುವ ಉದ್ದೇಶವನ್ನು ಕೇಂದ್ರ ಸರಕಾರ ಹೊಂದಿದೆ. 80C ಅಡಿಯಲ್ಲಿ ಕೇಂದ್ರ ಸರಕಾರ ಗರಿಷ್ಟ ಮಿತಿಯನ್ನು ಎರಡು ಲಕ್ಷ ಏರಿಸಿದರೆ, (ಉ.ದಾ) ವಾರ್ಷಿಕ ಹತ್ತು ಲಕ್ಷ ಆದಾಯವಿರುವ ವ್ಯಕ್ತಿಯ ಎಂಟು ಲಕ್ಷ ಆದಾಯದ ಮೇಲೆ ತೆರಿಗೆ ಲೆಕ್ಕಹಾಕಲಾವುದು.

ಇದಪ್ಪಾ ಸುದ್ದಿ! 100 ಕೋಟಿಗೂ ಹೆಚ್ಚು ಆದಾಯ ಇರುವ ಭಾರತೀಯ ಏಕೈಕ

2014-15ರಿಂದ 80C ಅಡಿಯಲ್ಲಿ ಈಗ ನೀಡಲಾಗುತ್ತಿರುವ ತೆರಿಗೆ ವಿನಾಯತಿ 1.5 ಲಕ್ಷದಿಂದ ಮೇಲಕ್ಕೆ ಹೋಗಿರಲಿಲ್ಲ. ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ತಮ್ಮ ಚೊಚ್ಚಲ ಬಜೆಟಿನಲ್ಲಿ ಐವತ್ತು ಸಾವಿರದಿಂದ ಒಂದೂವರೆ ಲಕ್ಷಕ್ಕೆ ಏರಿಸಿದ್ದರು.

ಬಜೆಟ್ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಯ ಹಿರಿಯ ಅಧಿಕಾರಿಗಳು 80C ಮಿತಿಯನ್ನು ಹೆಚ್ಚಿಸಲು ಅರುಣ್ ಜೇಟ್ಲಿಗೆ ಮನವಿ ಮಾಡಿದ್ದಾರೆ.

ಸದ್ಯದ 80C ಸೆಕ್ಷನ್ ಪ್ರಕಾರ ಒಂದೂವರೆ ಲಕ್ಷವನ್ನು ಪಿಎಫ್, ಎನ್ಎಸ್ಸಿ (National Saving Certificate), ಐದು ವರ್ಷದ ನಿಶ್ಚಿತ ಠೇವಣಿ, ಮಕ್ಕಳ ಟ್ಯೂಷನ್ ಫೀಸ್, ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಮೇಲೆ ತೊಡಗಿಸಿ ರಿಯಾಯತಿ ಪಡೆಯಬಹುದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian Finance minister Arun Jaitley may raise tax breaks offered on money parked in a slew of products including bank fixed deposits, insurance premium and mutual funds from Rs 150,000 to Rs 200,000 a year under the popular “Section 80C” scheme.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ