Union Budget 2026: ಕೇಂದ್ರ ಬಜೆಟ್ ಪ್ರಾರಂಭಿಸಿದ ನಿರ್ಮಲಾ ಸೀತಾರಾಮನ್
Union Budget 2026: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026 - 2027ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್ ಮೇಲಿನ ಭಾಷಣ ಪ್ರಾರಂಭವಾಗಿದೆ. ಇದು ಇತಿಹಾಸದಲ್ಲೇ ಎರಡನೇ ಬಾರಿ ಭಾನುವಾರ ಮಂಡನೆಯಾಗಿರುವ ಬಜೆಟ್ ಆಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 9ನೇ ಬಾರಿ ಕೇಂದ್ರ ಬಜೆಟ್ ಮಂಡನೆ ಮಾಡಿದ್ದು, ಹೊಸ ದಾಖಲೆ ಬರೆದಿದ್ದಾರೆ.
1999ರಂದು ಭಾನುವಾರ ಬಜೆಟ್ ಮಂಡನೆ ಮಾಡಲಾಗಿತ್ತು. ಇದು ಎರಡನೇ ಬಾರಿ ಕೇಂದ್ರ ಬಜೆಟ್ ಮಂಡನೆ ಆಗಿದೆ. ಫೆಬ್ರವರಿ 1ರ 2026ರಂದು ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಹಲವು ಕಾರಣಗಳಿಗೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಹಣದುಬ್ಬರ, ಡಾಲರ್‌ನ ಮುಂದೆ ರೂಪಾಯಿ ಮೌಲ್ಯ ಕುಸಿಯುತ್ತಿರುವುದು, ವಿವಿಧ ದೇಶಗಳ ನಡುವೆ ಸುಂಕ ಸಮರ, ಸಾಲ ಹೆಚ್ಚಳ ಸೇರಿದಂತೆ ಹಲವು ಸವಾಲುಗಳ ನಡುವೆ ನಿರ್ಮಲಾ ಸೀತಾರಾಮನ್ ಅವರು 2026 - 2027ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ.

ಮೇಘ ಪೂರ್ಣಿಮೆಯ ದಿನ ಹಾಗೂ ರವಿದಾಸ್ ಅವರ ಜಯಂತಿಯ ದಿನ ಬಜೆಟ್ ಮಂಡನೆ ಮಾಡುತ್ತಿದ್ದೇನೆ. ಎಲ್ಲ ವರ್ಗದವರನ್ನೂ ಗಮನದಲ್ಲಿ ಇರಿಸಿಕೊಂಡು ಈ ಬಜೆಟ್ ಮಂಡನೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ. ಯುವ ಶಕ್ತಿಯನ್ನು ಗಮನದಲ್ಲಿ ಇರಿಸಿಕೊಳ್ಳಲಾಗಿದೆ. ವಿಕಸಿತ ಭಾರತದ ಗುರಿ ಸಾಧಿಸುವುದು ನಮ್ಮ ಸರ್ಕಾರದ ಕರ್ತವ್ಯವಾಗಿದೆ. ಭಾರತವು ಶೇ 7 ಅಭಿವೃದ್ಧಿ ಸಾಧಿಸಿದ್ದು, ಜಾಗತಿಕ ಮಾರುಕಟ್ಟೆಗೆ ಪೈಪೋಟಿ ನೀಡಿದ್ದೇವೆ ಎಂದು ಹೇಳಿದ್ದಾರೆ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನ ಪ್ರಮುಖಾಂಶಗಳು
1. ಮೂರು ಕರ್ತವ್ಯಗಳನ್ನು ಗಮನದಲ್ಲಿ ಇರಿಸಿಕೊಂಡು ಬಜೆಟ್ ಮಂಡನೆ. ಕೇಂದ್ರ ಸರ್ಕಾರವು ಆರ್ಥಿಕ ಪ್ರಗತಿ, ಜನರ ನಿರೀಕ್ಷೆ ಈಡೇರಿಸುವುದು ಹಾಗೂ ಸಬ್‌ಕಾ ಸಾಥ್, ಸಬ್ ಕಾ ವಿಕಾಸ್ ಪರಿಕಲ್ಪನೆಯಲ್ಲಿ ಮುಂದೆ ಸಾಗುತ್ತಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.
2. ಚುನಾವಣೆ ನಡೆಯಲಿರುವ ಕೇರಳ ಹಾಗೂ ತಮಿಳುನಾಡು ರಾಜ್ಯಗಳಿಗೆ ಬಂಪರ್ ಸಿಕ್ಕಿದೆ. ಅಲ್ಲದೇ ಒಡಿಶಾ ಹಾಗೂ ಆಂಧ್ರಪ್ರದೇಶಕ್ಕೂ ಬಂಪರ್ ಸಿಕ್ಕಿದೆ.
3. ಬೆಂಗಳೂರು ಸೇರಿದಂತೆ 7 ಪ್ರಮುಖ ನಗರಗಳಿಗೆ ಹೈಸ್ಪೀಡ್ ರೈಲು ಯೋಜನೆ ಘೋಷಣೆ ಮಾಡಲಾಗಿದೆ.
4. ತೆಂಗಿನ ಕಾಯಿ ಬೆಳೆ, ಸಂಸ್ಕರಣೆ ಮತ್ತು ರಫ್ತಿಗೆ ಒತ್ತು ನೀಡಲಾಗಿದೆ. ತೆಂಗು ಕೃಷಿ ಅಭಿವೃದ್ಧಿಗೆ ನೂತನ ಯೋಜನೆ ಘೋಷಣೆ ಮಾಡಲಾಗಿದೆ.
5. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಎರಡರಷ್ಟು ಟಿಸಿಎಸ್ ಕಡಿತ ಮಾಡಲಾಗಿದೆ. ಬೈಕ್ ಅಪಘಾತ ಪರಿಹಾರ ವಿಮೆ ಹಣಕ್ಕೆ ತೆರಿಗೆ ಇಲ್ಲ.
6. ಕೇಂದ್ರ ಬಜೆಟ್‌ನಲ್ಲಿ ಮದ್ಯ ಹಾಗೂ ಸಿಗರೇಟ್ ಸೇರಿದಂತೆ ಹಲವು ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಬೀಡಿ ಹಾಗೂ ಪಾದರಕ್ಷೆಗಳ ಬೆಲೆ ಇಳಿಕೆಯಾಗಿದೆ.
7. ಸಮೃದ್ಧಿ ವಿಮಾನ ನಿರ್ಮಾಣಕ್ಕಾಗಿ ಸ್ವದೇಶಿ ನಿರ್ಮಾಣ. ವಾರಣಾಸಿ, ಪಾಟ್ನಾದಲ್ಲಿ ಹಡಗು ದುರಸ್ಥಿ ಕೇಂದ್ರ ಸ್ಥಾಪನೆ. ಇದರೊಂದಿಗೆ 20 ಜಲಮಾರ್ಗಗಳ ಅಭಿವೃದ್ಧಿಗೆ ಕೇಂದ್ರ ಕ್ರಮ.
8. ಜಿಡಿಪಿಯಲ್ಲಿ ಶೇ. 50ರಷ್ಟು ಹೆಚ್ಚಿಸಲು ಗುರಿ.
9. ಪ್ರವಾಸೋದ್ಯಮಕ್ಕೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಹಿಮಾಚಲ ಪ್ರದೇಶ, ಜಮ್ಮು ಕಾಶ್ವೀರ ಸೇರಿದಂತೆ ಉತ್ತರ ಭಾರತದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ.
10. 10 ಸಾವಿರ ಪ್ರವಾಸಿ ಗೈಡರ್‌ಗಳ ನೇಮಕಕ್ಕೆ ಕ್ರಮ, ಅವರಿಗೆ ಸೂಕ್ತ ತರಬೇತಿ ನೀಡುವ ಘೋಷಣೆ.
11. ಏಪ್ರಿಲ್ ನಿಂದ ನೂತನ ಐಟಿ ಕಾಯ್ದೆ ಜಾರಿ ಆಗಲಿದೆ. ಇನ್ನು ರಾಜ್ಯಗಳಿಗೆ 1.4 ಲಕ್ಷ ಕೊಟಿ ಹಣ ಹಂಚಿಕೆ ಮಾಡಲಾಗಿದೆ.
12. ಮಹಿಳೆಯರಿಗಾಗಿ 'ಶೀ ಮಾರ್ಟ್' ಯೋಜನೆ
13. ದಿವ್ಯಾಂಗರಿಗಾಗಿ 'ದಿವ್ಯಾಂಗ ಸಹಾರ' ಯೋಜನೆ ಘೋಷಣೆ.
14. ರಾಷ್ಟ್ರೀಯ 'ಫೈಬರ್ ಯೋಜನೆ' ಘೋಷಣೆ
15. ಪ್ರವಾಸಿಗರ ಅನುಕೂಲಕ್ಕೆ ಇ-ಬಸ್‌ಗಳ ಸೌಲಭ್ಯ.
16. ಐದು ರಾಜ್ಯಗಳ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು. ಕರ್ನಾಟಕ, ಕೇರಳ ಟ್ರಕ್ಕಿಂಗ್‌ಗೆ ವಿಶೇಷ ಯೋಜನೆ.
17. ಹೊಸ ಆದಾಯ ತೆರಿಗೆ ಏಪ್ರಿಲ್ 1 ರಿಂದ ಜಾರಿ. ಐಟಿ ರಿಟರ್ನ್ ಮಾಡಲು ಜುಲೈ 31ರವರೆಗೆ ಅವಕಾಶ.
18. ಜಿಎಸ್‌ಟಿ ಸರಳೀಕರಣಕ್ಕೆ ಕ್ರಮ.
19. ರಕ್ಷಣಾ ವಲದಯ ಬಿಡಿಭಾಗಗಳಿಗೆ ತೆರಿಗೆ ವಿನಾಯಿತಿ
20. ತೆಂಗು ಕೃಷಿ ಯೋಜನೆಗೆ ಉತ್ತೇಜನ. ಹೊಸ ತೆಂಗು ಸಸಿ ನೆಡಲು ರೈತರಿಗೆ ಉತ್ತೇಜನ.
21. ಪಶು ಪಾಲನೆ ಉತ್ತೇಜಿಸಲು ಕ್ರಮ. ಸುಲಭ ಸಾಲದ ವ್ಯವಸ್ಥೆ, ಡೈರಿಗಳ ಹೆಚಳಕ್ಕೆ ತೀರ್ಮಾನ. ಕೃಷಿ ಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವುದಕ್ಕೆ ಕ್ರಮ.
ಕೇಂದ್ರ ಬಜೆಟ್ ಲೈವ್ ಜೊತೆಗೆ ವಿಶ್ಲೇಷಣೆಯೂ ಇಲ್ಲಿದೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ (ಫೆ 1) ಸಂಸತ್ತಿನಲ್ಲಿ ಮಂಡಿಸಿದ ಬಜೆಟ್ ಭಾಷಣದ ಲೈವ್ ವಿಡಿಯೊ ಮತ್ತು ತಜ್ಞರ ವಿಶ್ಲೇಷಣೆಗಾಗಿ 'ಒನ್ ಇಂಡಿಯಾ ಕನ್ನಡ' ಯುಟ್ಯೂಬ್ ಚಾನೆಲ್‌ಗೆ ಭೇಟಿ ನೀಡಿ.












Click it and Unblock the Notifications