ಕೇಂದ್ರ ಬಜೆಟ್‌ನಲ್ಲಿ ಬಂಪರ್: ಔಷಧಿ ವಲಯಕ್ಕೆ 10,000 ಕೋಟಿ ರೂ. ಘೋಷಣೆ
ನವದೆಹಲಿ: ಭಾರತೀಯರ ಬಹುನಿರೀಕ್ಷೆಯ 2026-27 ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಭಾನುವಾರ (ಫೆ.1) ಮಂಡಿಸಿದ್ದಾರೆ. ತಮ್ಮ ಒಂಬತ್ತನೇ ಬಾರಿಯ ಬಜೆಟ್ ನಲ್ಲಿ ಅವರು ದೇಶದ ಔಷಧಿ ವಲಯಕ್ಕೆ 10,000 ಕೋಟಿ ರೂಪಾಯಿ ಘೋಷಣೆ ಮಾಡುವ ಮೂಲಕ ಫಾರ್ಮಾ (ಔಷಧ ಸಂಶೋಧನೆ, ಉತ್ಪಾದನೆ) ಕ್ಷೇತ್ರಕ್ಕೆ ಬಂಪರ್ ನೀಡಿದ್ದಾರೆ. 10 ಸಾವಿರ ಕೋಟಿ ರೂಪಾಯಿ ಇದರಲ್ಲಿ ಬಡ ಹಾಗೂ ಮಧ್ಯ ವರ್ಗದವರಿಗೆ ಔಷಧಿ ಸಿಗುವಂತೆ ಮಾಡುವ ಚಿಂತನೆ ಇದೆ.
ಕೇಂದ್ರ ಸರ್ಕಾರದಿಂದ ಔಷಧಿ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಈ ಆರ್ಥಿಕವಾಗಿ ಹೆಚ್ಚಿನ ಬೆಂಬಲ ಘೋಷಿಸಲಾಗಿದೆ. ಕ್ಯಾನ್ಸರ್, ಸಕ್ಕರೆ ಕಾಯಿಲೆ ಸೇರಿದಂತೆ ಇನ್ನಿತರ ಗಂಭೀರ ಕಾಯಿಲೆಯ ರೋಗಿಗಳಿಗೆ ಕಡಿಮೆ ಬೆಲೆಯಲ್ಲಿ ಔಷಧಿ ಪೂರೈಕೆ ಉದ್ದೇಶ ಸಹ ಹೊಂದಿದೆ. ಅದಕ್ಕಾಗಿ ಈಗಾಗಲೇ ಜನೌಷಧಿ ಕೇಂದ್ರಗಳು ದೇಶಾದ್ಯಂತ ಕಾರ್ಯ ನಿರ್ವಹಿಸುತ್ತಿವೆ.

ಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಮೂಲಕ ಆರೋಗ್ಯ ಪ್ರಗತಿಗಾಗಿ 5 ವರ್ಷಗಳ ಬಯೋಫಾರ್ಮಾ ಕಾರ್ಯತಂತ್ರವು ಭಾರತದ ಆರೋಗ್ಯ ರಕ್ಷಣೆಯಲ್ಲಿ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಔಷಧಿ ಉತ್ಪಾದನೆಗೆ ಉತ್ತೇಜನ ನೀಡಿದ್ದು ಸ್ಪಷ್ಟವಾಗಿದೆ.
ರೋಗಿಗಳಿಗೆ ಗುಡ್ ನ್ಯೂಸ್
ಔಷಧಿ ವಲಯಕ್ಕೆ ಸಂಬಂಧಿಸಿಂತೆ ಪ್ರಮುಖ ಅಪರೂಪದ ಏಳು ಔಷಧಿಗಳ ಆಮದು ಸುಂಕಕ್ಕೆ ವಿನಾಯಿತಿ ನೀಡಲಾಗಿದೆ. ಇದರೊಂದಿಗೆ ಕ್ಯಾನ್ಸರ್ ಮತ್ತು ಮಧುಮೇಹ ಕಾಯಿಲೆಗಳು ಸೇರಿ ಇತರ ಬಳಕೆಯ 17 ಔಷಧಿಗಳ ಬೆಲೆ ಇಳಿಕೆ ಮಾಡಲಾಗಿದೆ. ಇದರಿಂದ ಆ ಔಷಧಿಗಳು ಅಗ್ಗವಾಗಲಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ. ಈ ಮೂಲಕ ರೋಗಿಗಳಿಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಗುಡ್ ನ್ಯೂಸ್ ನೀಡಿದೆ. ಈ ಮೂಲಕ ಪ್ರತ್ಯೇಕವಾಗಿ ಆರೋಗ್ಯ ಕ್ಷೇತ್ರಕ್ಕೆ ಒಂದಷ್ಟು ಯೋಜನೆಗಳ, ಅನುದಾನ ಘೋಷಿಸಿರುವ ಕೇಂದ್ರ ಸರ್ಕಾರ, ಔಷಧಿ ಉತ್ಪನ್ನಗಳ ಹೆಚ್ಚಳ, ಬಳಕೆಗೆ ಉತ್ತೇಜನ ನೀಡುತ್ತಿದೆ.
ಕೇಂದ್ರ ಬಜೆಟ್ ಲೈವ್ ಜೊತೆಗೆ ವಿಶ್ಲೇಷಣೆಯೂ ಇಲ್ಲಿದೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ (ಫೆ 1) ಸಂಸತ್ತಿನಲ್ಲಿ ಮಂಡಿಸಿದ ಬಜೆಟ್ ಭಾಷಣದ ಲೈವ್ ವಿಡಿಯೊ ಮತ್ತು ತಜ್ಞರ ವಿಶ್ಲೇಷಣೆಗಾಗಿ 'ಒನ್ ಇಂಡಿಯಾ ಕನ್ನಡ' ಯುಟ್ಯೂಬ್ ಚಾನೆಲ್‌ಗೆ ಭೇಟಿ ನೀಡಿ.












Click it and Unblock the Notifications