ಕೇಂದ್ರ ಬಜೆಟ್ 2024: ಮನೆ ಇಲ್ಲದವರಿಗೆ 'ವಸತಿ ಯೋಜನೆ' ಜಾರಿ: 5 ವರ್ಷದ ಟಾರ್ಗೆಟ್, ಅಂಕಿ-ಸಂಖ್ಯೆ
ಬೆಂಗಳೂರು, ಫೆಬ್ರವರಿ 01: ಸ್ವಂತ ಸೂರಿಲ್ಲದೇ ಪರದಾಡುತ್ತಿರುವ ಭಾರತದ ಅನೇಕ ಬಡವರಿಗೆ ನಿರ್ಮಲಾ ಸೀತಾರಾಮನ್ ಅವರು 2024-25 ರ ಮಧ್ಯಂತರ ಕೇಂದ್ರ ಬಜೆಟ್‌ನಲ್ಲಿ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.
ಬಾಡಿಗೆ ಮನೆಗಳಲ್ಲಿ ವಾಸಿಸುವ ಜನರಿಗೆ ಹಾಗೂ ಕೊಳೆಗೇರಿ ಅಥವಾ ಅನಧಿಕೃತ ಕಾಲೋನಿಗಳಲ್ಲಿ ವಾಸಿಸುವವರಿಗೆ ಸ್ವಂತ ಮನೆ ಖರೀದಿಸಲು ಅಥವಾ ಸ್ವಂತ ಮನೆ ನಿರ್ಮಿಸಲು ಸರ್ಕಾರವು ವಸತಿ ಯೋಜನೆಯನ್ನು ಪ್ರಾರಂಭಿಸಲಿದೆ ಎಂದು ಅವರು ಮಾಹಿತಿ ನೀಡಿದರು.

ಗುರುವಾರದ ಘೋಷಣೆಯು ಸರ್ಕಾರದ 'ಎಲ್ಲರಿಗೂ ವಸತಿ' ಮಿಷನ್‌ಗೆ ಅನುಗುಣವಾಗಿದೆ. ಇದು ನಡೆಯುತ್ತಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ ಅಥವಾ ಗ್ರಾಮೀಣ ಯೋಜನೆಗಳನ್ನು ಒಳಗೊಂಡಿದೆ ಎಂದು ಅವರು ವಿವರಿಸಿದರು.
20 ಮಿಲಿಯನ್ ಮನೆ ನಿರ್ಮಾಣ ಗುರಿ
ಪ್ರಧಾನ್ ಮಂತ್ರಿ ಆವಾಸ್ ಯೋಜನೆ (PMAY-Rural) ಅಡಿ ಗ್ರಾಮೀಣ ಯೋಜನೆಯಡಿ 30 ಮಿಲಿಯನ್ ಮನೆಗಳನ್ನು ನಿರ್ಮಿಸಲಾಗಿದೆ. ಕುಟುಂಬಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದ ಉಂಟಾಗುವ ವಸತಿ ಬೇಡಿಕೆಯನ್ನು ಪೂರೈಸಲು ಮುಂದಿನ ಐದು ವರ್ಷಗಳಲ್ಲಿ ಇನ್ನೂ 20 ಮಿಲಿಯನ್ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು.
ಬೃಹತ್ ನಗರಗಳಲ್ಲಿ ಮತ್ತು ಕೈಗೆಟುಕುವ ವಸತಿಗಳ ಸರ್ಕಾರ ಗಮನ ಕೇಂದ್ರೀಕರಿಸಿದೆ. ಇನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆಗಾಗಿ 2023 ರ ಕೇಂದ್ರ ಬಜೆಟ್‌ನಲ್ಲಿನ ಪ್ರಸಕ್ತ ಸಾಲಿನಲ್ಲಿ ರೂಪಾಯಿ 79,000 ಕೋಟಿಗೆ ಅಂದರೆ ಶೇಕಡಾ 66 ರಷ್ಟು ಹೆಚ್ಚಳ ಮಾಡಲಾಗಿದೆ.
ಈ ಯೋಜನೆಯಡಿ 'ಎಲ್ಲರಿಗೂ ವಸತಿ' ಮಿಷನ್ ಅನ್ನು ತ್ವರಿತಗೊಳಿಸಲು ಪ್ರಧಾನ್ ಮಂತ್ರಿ ಆವಾಸ್ ಯೋಜನೆ (PMAY-Urban) ಗೆ 25,103 ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಉಳಿದ ಹಣ ಗ್ರಾಮೀಣ ಭಾಗಕ್ಕೆ ಯೋಜನೆಯ ಸಾಕಾರಕ್ಕೆ ಬಳಕೆ ಆಗಲಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.












Click it and Unblock the Notifications