ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Budget 2023: ಕೇಂದ್ರ ಬಜೆಟ್ ಪ್ರಯೋಜನಗಳನ್ನು ಜನರಿಗೆ ತಿಳಿಸಲು ಬಿಜೆಪಿಯಿಂದ 12 ದಿನಗಳ ಅಭಿಯಾನ

ಕೇಂದ್ರ ಬಜೆಟ್ ಮಂಡನೆ ಬಿಜೆಪಿ ಹನ್ನೇರಡು ದಿನಗಳ ಅಭಿಯಾನ ಆರಂಭಿಸಿದೆ. ಕಾರಣ ತಿಳಿಯಲು ಮುಂದೆ ಓದಿ.

|
Google Oneindia Kannada News

ನವದೆಹಲಿ, ಫೆಬ್ರವರಿ. 01: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್‌ನ ಪ್ರಯೋಜನಗಳನ್ನು ಸಾರ್ವಜನಿಕರನ್ನು ತಲುಪಲು ಮತ್ತು ಈ ಬಗ್ಗೆ ತಿಳಿಸಲು ಭಾರತೀಯ ಜನತಾ ಪಕ್ಷ ಬುಧವಾರ 12 ದಿನಗಳ ರಾಷ್ಟ್ರವ್ಯಾಪಿ ಪ್ರಚಾರವನ್ನು ಪ್ರಾರಂಭಿಸಲಿದೆ.

ಫೆಬ್ರುವರಿ 1ರ ಬುಧವಾರ ಆರಂಭವಾಗುವ ಕೇಂದ್ರ ಬಜೆಟ್ ಕುರಿತು ಬಿಜೆಪಿ ದೇಶಾದ್ಯಂತ ಚರ್ಚೆ ನಡೆಸಲಿದೆ ಎಂದು ಪಕ್ಷದ ಮೂಲವನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಈ ಚರ್ಚೆ ಫೆಬ್ರವರಿ 12 ರವರೆಗೆ ಮುಂದುವರಿಯುತ್ತದೆ.

ಇಂದು ಬಜೆಟ್‌ನಲ್ಲಿ ಘೋಷಿಸಲಿರುವ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಚಾರ ನಡೆಸಲು ಆಡಳಿತ ಪಕ್ಷವು ರಾಷ್ಟ್ರವ್ಯಾಪಿ ಅಭಿಯಾನವನ್ನು ನಡೆಸಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅಭಿಯಾನಕ್ಕಾಗಿ ಒಂಬತ್ತು ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ.

Union Budget 2023: BJP launched 12-day nationwide campaign to highlight Budget

"ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಮತ್ತು ರಾಜ್ಯಸಭಾ ಸಂಸದ ಸುಶೀಲ್ ಕುಮಾರ್ ಮೋದಿ ಅವರನ್ನು ಸಮಿತಿಯ ಸಂಚಾಲಕರನ್ನಾಗಿ ಮಾಡಲಾಗಿದೆ. ಫೆಬ್ರವರಿ 4 ಮತ್ತು 5 ರಂದು ಕೇಂದ್ರ ಸರ್ಕಾರದ ಸಚಿವರು, ರಾಷ್ಟ್ರೀಯ ಅಧಿಕಾರಿಗಳು ಮತ್ತು ಆರ್ಥಿಕ ತಜ್ಞರು ದೇಶದ ವಿವಿಧ ರಾಜ್ಯಗಳ ರಾಜಧಾನಿಗಳು ಸೇರಿದಂತೆ 50 ಪ್ರಮುಖ ಕೇಂದ್ರಗಳಲ್ಲಿ ಬಜೆಟ್ ಕುರಿತು ಸಮಾವೇಶಗಳನ್ನು ನಡೆಸಲಿದ್ದಾರೆ" ಎಂದು ಪಕ್ಷದ ಮೂಲಗಳು ಎಎನ್‌ಐಗೆ ತಿಳಿಸಿವೆ.

ಮುಂದಿನ ಎರಡು ವಾರಗಳ ಕಾಲ ಬಿಜೆಪಿ ಆಡಳಿತದಲ್ಲಿರುವ ರಾಜ್ಯದ ಮುಖ್ಯಮಂತ್ರಿಗಳು, ರಾಜ್ಯಾಧ್ಯಕ್ಷರು, ಸಚಿವರು, ಸಂಸದರು ಮತ್ತು ಶಾಸಕರು ದೇಶದಾದ್ಯಂತ ಸಮಾವೇಶಗಳು ಮತ್ತು ಸಾರ್ವಜನಿಕ ಸಭೆಗಳನ್ನು ನಡೆಸಿ ಬಜೆಟ್ ಮತ್ತು ಅದರ ಪ್ರಯೋಜನಗಳನ್ನು ಸಾಮಾನ್ಯ ಜನರೊಂದಿಗೆ ಚರ್ಚಿಸಲಿದ್ದಾರೆ.

Union Budget 2023: BJP launched 12-day nationwide campaign to highlight Budget

ಎಲ್ಲ ಜಿಲ್ಲೆಗಳಲ್ಲಿ ಸಮಾವೇಶಗಳನ್ನು ಆಯೋಜಿಸಿ, ಬಜೆಟ್‌ನ ಮುಖ್ಯ ವಿಷಯಗಳನ್ನು ಬ್ಲಾಕ್ ಮಟ್ಟದವರೆಗೆ ಸಾರ್ವಜನಿಕರಿಗೆ ತಲುಪಿಸಲಾಗುವುದು. ಕೇಂದ್ರ ಮಟ್ಟದಲ್ಲಿ, ಯುವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುನಿಲ್ ಬನ್ಸಾಲ್ ಮತ್ತು ಕಿಶನ್ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರು ಸೇರಿದಂತೆ ಅನೇಕ ಆರ್ಥಿಕ ತಜ್ಞರನ್ನು ಈ ಸಮಿತಿಯ ಸದಸ್ಯರನ್ನಾಗಿ ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ, ಫೆಬ್ರವರಿ 1 ರಂದು 2023 ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಈ ವರ್ಷದ ಬಜೆಟ್ 2024 ರ ಸಂಸತ್ತಿನ ಚುನಾವಣೆಯ ಮೊದಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕೊನೆಯ ಪೂರ್ಣ ಬಜೆಟ್ ಆಗಿದ್ದು ಮಹತ್ವ ಪಡೆದುಕೊಂಡಿದೆ.

English summary
Union Budget 2023: Bharatiya Janata Party (BJP) launched 12-day nationwide campaign to highlight and convey the benefits of the budget to public. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X