ಭಾರತದ ಬಜೆಟ್ ಬಗ್ಗೆ ಕುತೂಹಲಕಾರಿ ಅಂಶಗಳು
ನವದೆಹಲಿ, ಫೆಬ್ರವರಿ 1: ಇಂದು ವಿತ್ತ ಸಚಿವರು ಮಂಡಿಸುತ್ತಿರುವ ಕೇಂದ್ರ ಬಜೆಟ್‌ಗೆ ಇಡೀ ದೇಶವೇ ಕುತೂಹಲದಿಂದ ಕಾಯುತ್ತಿದೆ.
ಭಾರತದ ಬಜೆಟ್ ಬಗ್ಗೆ ಕೆಲವು ಕುತೂಹಲಕಾರಿ ಅಂಶಗಳು ಇಲ್ಲಿವೆ. ಕೋವಿಡ್ ತಂದ ಬದಲಾವಣೆ: ಕೋವಿಡ್‌ನಿಂದಾಗಿ ಈ ಬಾರಿ ಬಜೆಟ್ ಮಂಡನೆಯ ಸ್ವರೂಪದಲ್ಲಿಬದಲಾವಣೆ ಆಗಿದೆ. ಮೊತ್ತ ಮೊದಲ ಬಾರಿಗೆ ಬಜೆಟ್ ಮುದ್ರಣಗೊಳ್ಳುತ್ತಿಲ್ಲ. ಬದಲಾಗಿ, ಅದೇ ವೇಳೆಗೆ ಸರಿಯಾಗಿ ಕೇಂದ್ರ ಸರಕಾರದ 'ಯೂನಿಯನ್ ಬಜೆಟ್' ಆ್ಯಪ್‌ನಲ್ಲಿಸಂಸತ್ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಲಭ್ಯವಾಗಲಿದೆ.
ಬ್ಲ್ಯಾಕ್ ಬಜೆಟ್: 1973-74ರಲ್ಲಿಗಂಭೀರ ಆರ್ಥಿಕ ಒತ್ತಡದ ನಡುವೆ ಮಂಡನೆಯಾದ ಆಯವ್ಯಯವನ್ನು 'ಬ್ಲ್ಯಾಕ್ ಬಜೆಟ್' ಎಂದೇ ಕರೆಯಾಗುತ್ತದೆ. 1971ರಲ್ಲಿನಡೆದ ಬಾಂಗ್ಲಾಯುದ್ಧ, ಮಾನ್ಸೂನ್ ವೈಫಲ್ಯದ ಪರಿಣಾಮ ಬಜೆಟ್ ಮೇಲಾಗಿ, 550 ಕೋಟಿ ರೂ.ಗಳ ಕೊರತೆ ತೋರಿಸಿತ್ತು. ಕಲ್ಲಿದ್ದಲು ಗಣಿಗಳು ಹಾಗೂ ಜನರಲ್ ಇನ್ಸೂರೆನ್ಸ್ ಕಂಪನಿಗಳನ್ನು ರಾಷ್ಟ್ರೀಕರಣಗೊಳಿಸುವ ಪ್ರಸ್ತಾವ ಮಂಡಿಸಿತ್ತು.
Recommended Video

ಸಂಜೆ 5 ಗಂಟೆ: 2000ನೇ ಇಸವಿಯವರೆಗೆ, ಸಂಜೆ 5 ಗಂಟೆಗೆ ಬಜೆಟ್‌ನ್ನು ಮಂಡಿಸಲಾಗುತ್ತಿತ್ತು. ಭಾರತ ಹಾಗೂ ಬ್ರಿಟನ್‌ನ ಸಮಯ ವ್ಯತ್ಯಾಸ ಸರಿದೂಗಿಸಲು ಅಳವಡಿಸಿಕೊಂಡಿದ್ದ ಪದ್ಧತಿಯಿದು. ನಂತರ ಅದನ್ನು ಬೆಳಗ್ಗೆ 11 ಗಂಟೆಗೆ ನಿಗದಿಪಡಿಸಲಾಯಿತು.
ಅತ್ಯಧಿಕ ಬಜೆಟ್ ಮಂಡನೆ: ವಿತ್ತ ಮಂತ್ರಿ ಹಾಗೂ ಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿ ಅವರು ಹತ್ತು ಬಾರಿ ಬಜೆಟ್ ಮಂಡಿಸುವ ಮೂಲಕ, ಅತಿ ಹೆಚ್ಚು ಸಲ ಆಯವ್ಯಯ ಮಂಡಿಸಿದ ದಾಖಲೆ ಹೊಂದಿದ್ದಾರೆ. ತಮ್ಮ ಜನ್ಮದಿನದಂದೇ (ಫೆ.29) ಎರಡು ಬಾರಿ ಬಜೆಟ್ ಮಂಡಿಸಿದ ವಿತ್ತ ಮಂತ್ರಿಯೂ ಅವರೊಬ್ಬರೇ.
160 ನಿಮಿಷ: ಸ್ವತಂತ್ರ ಭಾರತದಲ್ಲಿಅತಿ ದೀರ್ಘ ಕಾಲ ಆಯವ್ಯಯ ಓದಿದ ದಾಖಲೆ ನಿರ್ಮಲಾ ಸೀತಾರಾಮನ್ ಅವರದು, 2020ರಲ್ಲಿ. ಇಷ್ಟು ಹೊತ್ತು ಓದಿದ ಬಳಿಕವೂ ಹಲವು ಪುಟಗಳು ಉಳಿದಿದ್ದವಾದರೂ, ಬಳಲಿಕೆಯಿಂದ ಓದು ನಿಲ್ಲಿಸಿದರು.
171.15 ಕೋಟಿ ರೂ.: ವಿತ್ತ ಸಚಿವ ಆರ್.ಕೆ.ಷಣ್ಮುಖಂ ಚೆಟ್ಟಿ ಅವರು 1947 ನವೆಂಬರ್‌ನಲ್ಲಿಮಂಡಿಸಿದ ಸ್ವತಂತ್ರ ಭಾರತದ ಮೊದಲ ಬಜೆಟ್‌ನ ಒಟ್ಟಾರೆ ಆದಾಯ 171.15 ಕೋಟಿ ರೂ. ಇತ್ತು. ವೆಚ್ಚ 197.39 ಕೋಟಿ ರೂ.ಗಳಿತ್ತು. ಕೊರತೆ ವೆಚ್ಚ ವಿಭಜನೆ ಸಂತ್ರಸ್ತರ ಮರುವಸತಿಗೆ ಸಂಬಂಧಿಸಿದ್ದಾಗಿತ್ತು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2022-23ನೇ ಹಣಕಾಸು ವರ್ಷಕ್ಕೆ ತಮ್ಮ ನಾಲ್ಕನೇ ಬಜೆಟ್ ಮಂಡಿಸುತ್ತಿದ್ದಾರೆ. 1947ರಿಂದ ಒಟ್ಟು 73 ವಾರ್ಷಿಕ ಬಜೆಟ್‌ಗಳು, 14 ಮಧ್ಯಂತರ ಬಜೆಟ್‌ಗಳು ಮತ್ತು ನಾಲ್ಕು ವಿಶೇಷ ಬಜೆಟ್‌ಗಳು ಅಥವಾ ಮಿನಿ ಬಜೆಟ್‌ಗಳನ್ನು ಮಂಡಿಸಲಾಗಿದೆ.
ಭಾರತದ ಮೊತ್ತ ಮೊದಲ ಒಕ್ಕೂಟ ಬಜೆಟ್ ಮಂಡನೆಯಾದುದು 1860ರ ಫೆ.18ರಂದು. ಬ್ರಿಟಿಷ್ ಕಂಪನಿ ಸರಕಾರದ ವೈಸರಾಯ್ ಅವರ ಎಕ್ಸಿಕ್ಯೂಟಿವ್ ಸಮಿತಿಯ ವಿತ್ತ ಸದಸ್ಯನಾಗಿದ್ದ ಜೇಮ್ಸ್ ವಿಲ್ಸನ್ ಮಂಡಿಸಿದ್ದು. ಈತ 'ದಿ ಇಕಾನಮಿಸ್ಟ್' ಪತ್ರಿಕೆಯ ಸ್ಥಾಪಕ. ಈತ ಸ್ಥಾಪಿಸಿದ ಚಾರ್ಟರ್ಡ್ ಬ್ಯಾಂಕ್ ಮುಂದೆ ಸ್ಟಾಂಡರ್ಡ್ ಬ್ಯಾಂಕ್‌ನಲ್ಲಿ ವಿಲೀನವಾಯಿತು.
ಮಾಜಿ ಹಣಕಾಸು ಸಚಿವ ಹಿರೂಭಾಯಿ ಮುಲ್ಜಿಭಾಯಿ ಪಟೇಲ್ 1977 ರಲ್ಲಿ ಕೇವಲ 800 ಪದಗಳಲ್ಲಿ ಬಜೆಟ್ ಬಾಷಣ ಮಾಡಿದರು. ಇಲ್ಲಿಯವರೆಗಿನ ಅತ್ಯಂತ ಚಿಕ್ಕ ಬಜೆಟ್ ಭಾಷಣವೆಂದು ಈ ಭಾಷಣವನ್ನು ಪರಿಗಣಿಸಲಾಗಿದೆ.
ಈವರೆಗಿನ ಸುದೀರ್ಘ ಹಾಗೂ ಚೊಕ್ಕದಾದ ಬಜೆಟ್ ಭಾಷಣ ಯಾವುದು?: ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ದೇಶದ ಇತಿಹಾಸದಲ್ಲಿ ಅತಿ ಹೆಚ್ಚು ಬಜೆಟ್‌ಗಳನ್ನು ಮಂಡಿಸಿದ ದಾಖಲೆಯನ್ನು ಹೊಂದಿದ್ದಾರೆ. 1962-69ರ ಅವಧಿಯಲ್ಲಿ ಅವರು ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ 10 ಬಜೆಟ್‌ಗಳನ್ನು ಮಂಡಿಸಿದ್ದಾರೆ. ನಂತರ ಪಿ ಚಿದಂಬರಂ 9, ಪ್ರಣಬ್ ಮುಖರ್ಜಿ 8, ಯಶವಂತ್ ಸಿನ್ಹಾ 8 ಮತ್ತು ಮನಮೋಹನ್ ಸಿಂಗ್ 6 ಬಾರಿ ಬಜೆಟ್ ಮಂಡಿಸಿದ್ದರು.












Click it and Unblock the Notifications