ದೇಶದಲ್ಲಿ ಮೊದಲ ಡಿಜಿಟಲ್ ಗಣತಿಗಾಗಿ 3,700 ಕೋಟಿ ರೂ. ಘೋಷಣೆ
ನವದೆಹಲಿ, ಫೆಬ್ರವರಿ 1: ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಯುವ ಜನಗಣತಿಯನ್ನು ಭಾರತದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಡಿಜಿಟಲ್ ಜನಗಣತಿ ನಡೆಯಲಿದೆ.
ಈ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021ನೇ ಬಜೆಟ್ ಭಾಷಣದ ವೇಳೆ ಈ ಬಗ್ಗೆ ತಿಳಿಸಿದರು. ಮುಂಬರುವ ಜನಗಣತಿಗಾಗಿ 3,768 ಕೋಟಿ ರುಪಾಯಿಗಳನ್ನು ನಿಗದಿಪಡಿಸಿದೆ, ಇದು ದೇಶದ ಮೊದಲ ಡಿಜಿಟಲ್ ಜನಗಣತಿಯಾಗಿದೆ.
2021ನೇ ಜನಗಣತಿ ಆರಂಭವಾಗಲಿದ್ದು, ಪ್ರಸಕ್ತ ಜನಗಣತಿಯಿಂದಲೇ ಡಿಜಿಟಲ್ ಜನಗಣತಿ ಒತ್ತು ನೀಡಲಾಗಿದೆ. ಇದರಿಂದ ಹೆಚ್ಚಿನ ಖರ್ಚು ಕಡಿಮೆ ಮಾಡಬಹುದು. ಮತ್ತು ಎಲ್ಲ ದಾಖಲಾತಿಗಳು ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿರಲಿವೆ. ಮಾಹಿತಿ ಸಂಗ್ರಹವೂ ಪಾರದರ್ಶಕ ಮತ್ತು ವೇಗವಾಗಿರಲಿದೆ. ಇದರಿಂದ ಸಮಯ ಉಳಿತಾಯ ಮಾಡಬಹುದು.

ಜನಗಣತಿಯಿಂದ ಪ್ರದೇಶವಾರು, ರಾಜ್ಯವಾರು ಜನಸಂಖ್ಯೆಯ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕ ಸ್ಥಾನಮಾನಗಳ ಮಾಹಿತಿ ಸಿಗಲಿದೆ. ಇದು ದೇಶದಲ್ಲಿ ಯೋಜನೆ, ಕಾನೂನು ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸಲಿವೆ. ಈ ಐತಿಹಾಸಿಕ ಡಿಜಿಟಲ್ ಜನಗಣತಿಗಾಗಿ 3,768 ಕೋಟಿ ರುಪಾಯಿ ಮೀಸಲಿಡುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದ ವೇಳೆ ಹೇಳಿದರು.












Click it and Unblock the Notifications