ಆಧಾರ್ ಮೂಲಕ ಪಾನ್ ಕಾರ್ಡ್ ವಿತರಣೆ: ಕೇಂದ್ರದ ಹೊಸ ಯೋಜನೆ
ನವದೆಹಲಿ, ಫೆಬ್ರವರಿ 1: ಪರ್ಮನೆಂಟ್ ಅಕೌಂಟ್ ನಂಬರ್ (ಪಾನ್) ಪಡೆದುಕೊಳ್ಳುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಸುಗಮಗೊಳಿಸಿದೆ. ಆಧಾರ್ ಕಾರ್ಡ್ ಇದ್ದರೆ ಪಾನ್‌ಅನ್ನು ತಕ್ಷಣವೇ ಪಡೆದುಕೊಳ್ಳುವ ವ್ಯವಸ್ಥೆಯೊಂದನ್ನು ಜಾರಿಗೊಳಿಸಲಿದೆ.
ಸಂಸತ್‌ನಲ್ಲಿ ಶನಿವಾರ ಕೇಂದ್ರ ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಮಾಹಿತಿ ನೀಡಿದರು.
ತೆರಿಗೆದಾರರು ವಿಸ್ತೃತವಾದ ಅರ್ಜಿಗಳನ್ನು ಭರ್ತಿ ಮಾಡುವ ಅಗತ್ಯವಿಲ್ಲದೆಯೇ ಹೊಸ ಪಾನ್ ಕಾರ್ಡ್‌ಅನ್ನು ಪಡೆದುಕೊಳ್ಳುವ ವ್ಯವಸ್ಥೆಯನ್ನು ಆದಾಯ ತೆರಿಗೆ ಇಲಾಖೆ ಹೊಂದಲಿದೆ. ಈ ಸೌಲಭ್ಯ ಆಧಾರ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಲಭ್ಯ.

ತೆರಿಗೆದಾರರ ಆಧಾರ್ ಆಧಾರಿತ ಪ್ರಮಾಣೀಕರಣವನ್ನು ಸಹ ಪರಿಚಯಿಸಲಾಗುವುದು. ತೆರಿಗೆದಾರರ ಅನುಕೂಲ ಮತ್ತು ಸುಗಮ ವಹಿವಾಟಿಗಾಗಿ ಹೊಸ ವ್ಯವಸ್ಥೆಯೊಂದನ್ನು ಶೀಘ್ರದಲ್ಲಿಯೇ ತರಲಾಗುತ್ತದೆ. ಯಾವುದೇ ಅರ್ಜಿಗಳನ್ನು ಭರ್ತಿ ಮಾಡದೆಯೇ ಆಧಾರ್ ಕಾರ್ಡ್ ಆಧಾರದಲ್ಲಿ ಪಾನ್ ಕಾರ್ಡ್ ನೀಡಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
ಆದಾಯ ತೆರಿಗೆ ಉದ್ದೇಶಕ್ಕಾಗಿ ಕಳೆದ ವರ್ಷ ಪಾನ್ ಮತ್ತು ಆಧಾರ್ ಕಾರ್ಡ್‌ಗಳನ್ನು ಪರಸ್ಪರ ವಿನಿಮಯ ಮಾಡಲು ಅವಕಾಶ ನೀಡಲಾಗಿತ್ತು. 2020ರ ಮಾರ್ಚ್ 31ರ ಒಳಗೆ ಆಧಾರ್ ಮತ್ತು ಪಾನ್ ಕಾರ್ಡ್ ಜೋಡಣೆ ಮಾಡುವುದು ಕಡ್ಡಾಯವಾಗಿದೆ.












Click it and Unblock the Notifications