"ದುರದೃಷ್ಟವಶಾತ್" ನಾನು ಒಬ್ಬ ಸಂಸತ್ ಸದಸ್ಯ: ರಾಹುಲ್ ಗಾಂಧಿ ಹೇಳಿಕೆ ನೀಡಿದ ವಿಡಿಯೋ ವೈರಲ್
ಲಂಡನ್ ನಲ್ಲಿ ಭಾರತೀಯ ಪ್ರಜಾಪ್ರಭುತ್ವವನ್ನು ಅವಮಾನಿಸಿದ್ದಾರೆ ಹೀಗಾಗಿ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದು, ಇದೀಗ ರಾಹುಲ್ ಗಾಂಧಿಯವರ ಮತ್ತೊಂದು ಹೇಳಿಕೆ ಕಾಂಗ್ರೆಸ್ ನ ಅಪಹಾಸ್ಯಕ್ಕೆ ಕಾರಣವಾಗಿದೆ.
ನವದೆಹಲಿ,ಮಾರ್ಚ್17: ರಾಹುಲ್ ಗಾಂಧಿ ಅವರು ಲಂಡನ್ ನಲ್ಲಿ ಭಾರತೀಯ ಪ್ರಜಾಪ್ರಭುತ್ವವನ್ನು ಅವಮಾನಿಸಿದ್ದಾರೆ ಹೀಗಾಗಿ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದು, ಇದೀಗ ಮತ್ತೊಂದು ಹೇಳಿಕೆಯಿಂದ ವಿವಾದಕ್ಕೆ ಕಾರಣವಾಗಿದೆ.
ಈ ಕುರಿತು ಗುರುವಾರ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದುರದೃಷ್ಟವಶಾತ್ ನಾನು ಒಬ್ಬ ಸಂಸತ್ ಸದಸ್ಯನಾಗಿದ್ದೇನೆ ಎಂದು ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ ತಕ್ಷಣವೇ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಅವರು ಮಧ್ಯಪ್ರವೇಶಿಸಿ ರಾಹುಲ್ ಗಾಂಧಿ ಅವರನ್ನು ತಡೆದು, "ದುರದೃಷ್ಟವಶಾತ್ ನಾನು ಸಂಸದ ಎಂದು ಹೇಳುವ ಮೂಲಕ ಅವರು ನಿಮ್ಮ ಮೇಲೆ ತಮಾಷೆ ಮಾಡುತ್ತಾರೆ. ನಿಮ್ಮ ದುರದೃಷ್ಟವಶಾತ್ ನಾನು ಸಂಸತ್ತಿನ ಸದಸ್ಯ ಎಂದು ಹೇಳಿ ಎಂದು ಕಿವಿಮಾತು ಹೇಳಿದ್ದಾರೆ. ಆದರೆ, ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಎಲ್ಲೆಡ ಅಪಹಾಸ್ಯಕ್ಕೆ ಕಾರಣವಾಗಿದೆ.

ಇನ್ನೂ ನಾನು ಸಂಸತ್ತಿನ ಸದಸ್ಯನಾಗಿದ್ದೇನೆ ಮತ್ತು ನಾಲ್ವರು ಸಚಿವರು ಸಂಸತ್ತಿನಲ್ಲಿ ಆರೋಪ ಮಾಡಿರುವುದರಿಂದ, ಮಾತನಾಡಲು ಅವಕಾಶ ಪಡೆಯುವುದು ನನ್ನ ಪ್ರಜಾಸತ್ತಾತ್ಮಕ ಹಕ್ಕು. ಭಾರತೀಯ ಪ್ರಜಾಪ್ರಭುತ್ವ ಕಾರ್ಯನಿರ್ವಹಿಸುತ್ತಿದ್ದರೆ, ನಾನು ಸಂಸತ್ತಿನಲ್ಲಿ ಮಾತನಾಡಲು ಸಾಧ್ಯವಾಗುತ್ತದೆ. ನೀವು ನೋಡುತ್ತಿರುವುದು ಭಾರತೀಯ ಪ್ರಜಾಪ್ರಭುತ್ವದ ಪರೀಕ್ಷೆಯಾಗಿದೆ ಎಂದು ಹೇಳಿದ್ದಾರೆ.
Unfortunately, we are at a loss for words... pic.twitter.com/YZVk7mrlRt
— Piyush Goyal (@PiyushGoyal) March 16, 2023
ಬಿಜೆಪಿಯ ನಾಲ್ವರು ನಾಯಕರು ಸಂಸತ್ ಸದಸ್ಯನ ಬಗ್ಗೆ ಆರೋಪ ಮಾಡಿದ ನಂತರ, ಆ ನಾಲ್ವರು ಸಚಿವರಿಗೆ ನೀಡಿದ ಜಾಗವನ್ನೇ ಸಂಸತ್ ಸದಸ್ಯರಿಗೂ ನೀಡಲಿದ್ದಾರಾ ಅಥವಾ ಮಾತನಾಡಬೇಡಿ ಎಂದು ಹೇಳುತ್ತಾರಾ ನೋಡಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇನ್ನೂ ರಾಹುಲ್ ಗಾಂಧಿ ಹೇಳಿಕೆ ಕುರಿತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ಶ್ರೀ ಗಾಂಧಿಗೆ ನೆರಳು ನೀಡಿದ್ದಾರೆ. "ದುರದೃಷ್ಟವಶಾತ್ ನಷ್ಟದಲ್ಲಿದ್ದೇವೆ ಎಂದು ಅವರು ರಾಹುಲ್ ಗಾಂಧಿಯನ್ನ ಟೀಕಿಸಿದದ್ದಾರೆ.












Click it and Unblock the Notifications