ತಿಹಾರ್ ಜೈಲಿನಿಂದ ಉಮರ್ ಖಾಲಿದ್‌ ಬಿಡುಗಡೆ

ನವದೆಹಲಿ, ಡಿಸೆಂಬರ್‌ 23: ಉಮರ್ ಖಾಲಿದ್‌ ತನ್ನ ಸಹೋದರಿಯ ಮದುವೆ ಹಾಜರಾಗಲು ಏಳು ದಿನಗಳ ಮಧ್ಯಂತರ ಜಾಮೀನನ್ನು ದೆಹಲಿ ನ್ಯಾಯಲಯವು ಶುಕ್ರವಾರ ನೀಡಿದ್ದು, ಈಗ ತಿಹಾರ್‌ ಜೈಲಿನಿಂದ ಅವರು ಬಿಡುಗಡೆಯಾಗಿದ್ದಾರೆ.

2020ರ ಡಿಸೆಂಬರ್ 12 ರಂದು ಈಶಾನ್ಯ ದೆಹಲಿ ಗಲಭೆಯ ದೊಡ್ಡ ಪಿತೂರಿ ಪ್ರಕರಣದಲ್ಲಿ ವಿದ್ಯಾರ್ಥಿ ಕಾರ್ಯಕರ್ತ ಉಮರ್ ಖಾಲಿದ್‌ಗೆ ದೆಹಲಿ ನ್ಯಾಯಾಲಯವು ಒಂದು ವಾರದ ಮಧ್ಯಂತರ ಜಾಮೀನು ನೀಡಿತು. ಕರ್ಕರ್ಡೂಮಾ ಕೋರ್ಟ್‌ನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ಅವರು ಡಿಸೆಂಬರ್ 23ರಿಂದ ಒಂದು ವಾರದ ಅವಧಿಗೆ ಖಾಲಿದ್‌ಗೆ ಜಾಮೀನು ನೀಡಿದರು.

ಡಿಸೆಂಬರ್ 28ರಂದು ತನ್ನ ಸಹೋದರಿಯ ಮದುವೆಗೆ ಹಾಜರಾಗುವುದ್ದಕ್ಕಾಗಿ ಖಾಲಿದ್‌ಗೆ ಜಾಮೀನು ನೀಡಲಾಗಿದೆ. ಅವರು ಡಿಸೆಂಬರ್ 30ರಂದು ಶರಣಾಗಬೇಕು. ಅವರು ಮದುವೆಗೆ ಹಾಜರಾಗಲು ಎರಡು ವಾರಗಳ ಮಧ್ಯಂತರ ಜಾಮೀನು ಕೋರಿದ್ದರು. ನವೆಂಬರ್ 6 ರಂದು ನಡೆದ ವಾದದ ವೇಳೆ ಖಾಲಿದ್ ಪರ ವಕೀಲ ತ್ರಿದೀಪ್ ಪೈಸ್ ಅವರು ತಮ್ಮ ಸಹೋದರಿಯ ವಿವಾಹಕ್ಕೆ ಮಧ್ಯಂತರ ಜಾಮೀನು ನೀಡಿದರೆ ಮಾಧ್ಯಮಗಳೊಂದಿಗೆ ಮಾತನಾಡುವುದಿಲ್ಲ ಅಥವಾ ಯಾವುದೇ ಸಂದರ್ಶನವನ್ನು ನೀಡುವುದಿಲ್ಲ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದ್ದರು.

Umar Khalid released from Tihar Jail on interim bail

ಅವರು ನ್ಯಾಯಾಲಯ ವಿಧಿಸುವ ಯಾವುದೇ ಷರತ್ತಿಗೆ ಬದ್ಧರಾಗಿರುತ್ತೇನೆ ಎಂದೂ ಅವರು ಹೇಳಿದ್ದಾರೆ. ಮಧ್ಯಂತರ ಜಾಮೀನಿನ ಮೇಲೆ ಖಾಲಿದ್ ಬಿಡುಗಡೆಯು ಅಶಾಂತಿಗೆ ಕಾರಣವಾಗಬಹುದು ಎಂದು ದೆಹಲಿ ಪೊಲೀಸರು ಈ ಹಿಂದೆ ಅರ್ಜಿ ಸಲ್ಲಿಸಿದ್ದರು. ಖಾಲಿದ್ ಪರವಾಗಿ ಸಲ್ಲಿಸಲಾದ ಮಧ್ಯಂತರ ಜಾಮೀನು ಅರ್ಜಿಯನ್ನು ವಿರೋಧಿಸಿ ದೆಹಲಿ ಪೊಲೀಸರು ಕಾರ್ಕರ್ಡೂಮಾ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯನ್ನು ಸಲ್ಲಿಸಿದ್ದರು.

ಹಿರಿಯ ವಕೀಲ ತ್ರಿದೀಪ್‌ ಪೈಸ್‌ ಯುಎಪಿಎ ಅಡಿಯಲ್ಲಿ ಆರೋಪಿಗಳಿಗೆ ಮಧ್ಯಂತರ ಜಾಮೀನು ನೀಡಿದ ಪ್ರಕರಣಗಳನ್ನು ಉಲ್ಲೇಖಿಸಿದರು. ಮಾಧ್ಯಮಗಳೊಂದಿಗೆ ಸಂವಹನ ನಡೆಸಬಾರದು ಎಂಬ ಷರತ್ತನ್ನು ವಿಧಿಸಿ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದ ಸಿದ್ದಿಕ್ ಕಪ್ಪನ್ ಪ್ರಕರಣವನ್ನೂ ಅವರು ಉಲ್ಲೇಖಿಸಿದರು.

ಪೈಸ್ ಅವರು, "ಸಿದ್ಧಿಕ್ ಕಪ್ಪನ್ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದ್ದು ಷರತ್ತು ವಿಧಿಸಲಾಗಿದೆ. ದಯವಿಟ್ಟು ಷರತ್ತು ಹಾಕಿರುವುದನ್ನು ನೋಡಿ ನನ್ನ ಕಕ್ಷಿದಾರರಿಗೆ ಅದೇ ಷರತ್ತನ್ನು ಹಾಕಬಹುದು. ಖಾಲಿದ್ ಭೇಟಿಯ ಸಮಯದಲ್ಲಿ ಅವರು ಯಾವುದೇ ಮಾಧ್ಯಮ ಸಂದರ್ಶನಗಳನ್ನು ನೀಡುವುದಿಲ್ಲ ಎಂದು ತಿಳಿಸಿದರು.

Umar Khalid released from Tihar Jail on interim bail

ಸಹ ಆರೋಪಿ ಇಶ್ರತ್ ಜಹಾನ್ ತನ್ನ ಸ್ವಂತ ವಿವಾಹಕ್ಕಾಗಿ 10 ದಿನಗಳ ಮಧ್ಯಂತರ ಜಾಮೀನು ಪಡೆದ ಪ್ರಕರಣವನ್ನು ಸಹ ವಕೀಲರು ಉಲ್ಲೇಖಿಸಿದ್ದಾರೆ. ಮತ್ತೊಂದೆಡೆ, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಅಮಿತ್ ಪ್ರಸಾದ್ ಜಾಮೀನು ಅರ್ಜಿಯನ್ನು ವಿರೋಧಿಸಿದ್ದರು. ಸಿದ್ದಿಕ್ ಕಪ್ಪನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಉಲ್ಲೇಖಿಸಿದ ಇತರ ತೀರ್ಪುಗಳು ಉಮರ್ ಖಾಲಿದ್ ಪ್ರಕರಣಕ್ಕೆ ಅನ್ವಯಿಸುವುದಿಲ್ಲ ಎಂದು ಅವರು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+