ಭಾರತದಲ್ಲಿ ಬ್ರಿಟನ್ ರೂಪಾಂತರ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ
ನವದೆಹಲಿ, ಜನವರಿ 13: ಭಾರತದಲ್ಲಿ ಬ್ರಿಟನ್ ಕೊರೊನಾ ರೂಪಾಂತರ ಸೋಂಕಿಗೆ ಒಳಗಾದವರ ಸಂಖ್ಯೆ ಏರಿಕೆಯಾಗಿದ್ದು, ಬುಧವಾರ ಒಟ್ಟು 102 ಪ್ರಕರಣಗಳು ದಾಖಲಾಗಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಬುಧವಾರ ದೇಶದಲ್ಲಿ ಕೊರೊನಾ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿರುವ ಸಚಿವಾಲಯ, ಬ್ರಿಟನ್ ರೂಪಾಂತರ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಆದರೆ ಸಕ್ರಿಯ ಪ್ರಕರಣಗಳು ತಗ್ಗಿದ್ದು, 2.14 ಲಕ್ಷಕ್ಕೆ ಇಳಿದಿದೆ ಎಂದು ತಿಳಿಸಿದೆ. 197 ದಿನಗಳಲ್ಲಿಯೇ ಕಡಿಮೆ ಸಕ್ರಿಯ ಪ್ರಕರಣ ಕಂಡುಬಂದಿದೆ. ಸಕ್ರಿಯ ಪ್ರಕರಣಗಳ ಪ್ರಮಾಣವು 2.04%ಗೆ ಇಳಿದಿದೆ. ಇದರೊಂದಿಗೆ 81.83% ಚೇತರಿಕೆ ಪ್ರಮಾಣ ದಾಖಲಿಸಿರುವುದಾಗಿ ತಿಳಿಸಿದೆ.
ಜನವರಿ 11ರವರೆಗೆ ದೇಶದಲ್ಲಿ ರೂಪಾಂತರ ಸೋಂಕಿತರ ಸಂಖ್ಯೆ 96 ಇದ್ದು, ಬುಧವಾರದವರೆಗೆ 102ಕ್ಕೆ ಏರಿಕೆಯಾಗಿರುವುದಾಗಿ ಮಾಹಿತಿ ನೀಡಿದೆ.

ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಗೆ ಒಳಪಡಿಸಿ ಸೂಕ್ತ ನಿಗಾ ವಹಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಡೆನ್ಮಾರ್ಕ್, ನೆದರ್ ಲ್ಯಾಂಡ್, ಆಸ್ಟ್ರೇಲಿಯಾ, ಇಟಲಿ, ಸ್ವೀಡನ್, ಫ್ರಾನ್ಸ್, ಸ್ಪೇನ್, ಸ್ವಿಡ್ಜರ್ಲೆಂಡ್, ಜರ್ಮನಿ, ಕೆನಡಾ, ಜಪಾನ್, ಲೆಬನಾನ್ ಹಾಗೂ ಸಿಂಗಪುರದಲ್ಲಿ ಬ್ರಿಟನ್ ಮೂಲದ ಹೊಸ ರೂಪಾಂತರ ಸೋಂಕು ಪತ್ತೆಯಾಗಿದೆ. ಭಾರತದಲ್ಲಿ ಈಗ ಒಟ್ಟು 102 ಪ್ರಕರಣಗಳು ದಾಖಲಾಗಿವೆ.












Click it and Unblock the Notifications