ನಕಲಿ ವಿಶ್ವವಿದ್ಯಾಲಯ ಪಟ್ಟಿ ಪ್ರಕಟ, ದೆಹಲಿಯಲ್ಲೇ ಅಧಿಕ

ನವದೆಹಲಿ, ಏಪ್ರಿಲ್ 25: ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) ದೇಶದಲ್ಲಿ 24 ನಕಲಿ/ಅನಧಿಕೃತ ವಿಶ್ವವಿದ್ಯಾನಿಲಯಗಳು ಕಾರ್ಯ ನಿರ್ವಹಿಸುತ್ತಿರುವುದನ್ನು ಪತ್ತೆ ಹಚ್ಚಿದೆ. ಈ ಪೈಕಿ 8 ವಿಶ್ವವಿದ್ಯಾನಿಲಯಗಳು ದೆಹಲಿಯಲ್ಲಿದೆ.

ದೆಹಲಿಯಲ್ಲದೆ, ಕರ್ನಾಟಕ, ಬಿಹಾರ, ಕೇರಳ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಒಡಿಶಾ ಹಾಗೂ ಪಾಂಡಿಚೇರಿಗಳಲ್ಲಿ ನಕಲಿ ವಿವಿಗಳಿವೆ. ಮಾನ್ಯತೆಯಿಲ್ಲದಿದ್ದರೂ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ಪದವಿ ನೀಡುವ ಮೂಲಕ ವಿದ್ಯಾರ್ಥಿಗಳನ್ನು ವಂಚಿಸುತ್ತಿರುವ ಕುರಿತು ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

UGC releases list of 24 fake Universities across India

ನಕಲಿ ವಿಶ್ವವಿದ್ಯಾಲಯಗಳ ಕುರಿತ ಹೆಚ್ಚಿನ ಮಾಹಿತಿ ವಿಶ್ವವಿದ್ಯಾನಿಲಯಗಳ ಅನುದಾನ ಆಯೋಗ(UGC) ದ ವೆಬ್ ಸೈಟ್ www.ugc.ac.in. ನಲ್ಲಿ ಲಭ್ಯವಿದೆ.

ಬಿಹಾರ
1) ಮೈಥಿಲಿ ಯೂನಿವರ್ಸಿಟಿ/ವಿಶ್ವವಿದ್ಯಾಲಯ, ದರ್ಭಾಂಗ, ಬಿಹಾರ.

ದೆಹಲಿ
2) ಕಮರ್ಷಿಯಲ್ ಯೂನಿವರ್ಸಿಟಿ ಲಿಮಿಟೆಡ್, ದರಿಯಾಗಂಜ್, ದೆಹಲಿ.
3) ಯುನೈಟೆಡ್ ನೇಶನ್ಸ್ ಯೂನಿವರ್ಸಿಟಿ, ದೆಹಲಿ.
4) ವೋಕೇಶನಲ್ ಯೂನಿವರ್ಸಿಟಿ, ದೆಹಲಿ.
5) ADR- ಸೆಂಟ್ರಿಕ್ ಜುರಿಡಿಕಲ್ ಯೂನಿವರ್ಸಿಟಿ, ರಾಜೇಂದ್ರ ಪ್ಲೇಸ್, ನವದೆಹಲಿ.
6) ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಇಂಜಿನಿಯರಿಂಗ್, ನವದೆಹಲಿ.
7) ವಿಶ್ವಕರ್ಮ ಓಪನ್ ಯೂನಿವರ್ಸಿಟಿ ಫಾರ್ ಸೆಲ್ಫ್ ಎಂಪ್ಲಾಯ್ ಮೆಂಟ್, ದೆಹಲಿ.

ಕರ್ನಾಟಕ
8) ಬಡಗಾನ್ವಿ ಸರ್ಕಾರ್ ವರ್ಲ್ಡ್ ಓಪನ್ ಯೂನಿವರ್ಸಿಟಿ ಎಜುಕೇಷನ್ ಸೊಸೈಟಿ, ಗೋಕಾಕ್, ಬೆಳಗಾವಿ, ಕರ್ನಾಟಕ.

ಕೇರಳ
9) ಸೇಂಟ್ ಜಾನ್ಸ್ ಯೂನಿವರ್ಸಿಟಿ, ಕಿಶನಟ್ಟಂ, ಕೇರಳ.

ಮಹಾರಾಷ್ಟ್ರ
10) ರಾಜಾ ಅರೇಬಿಕ್ ಯೂನಿವರ್ಸಿಟಿ, ನಾಗ್ಪುರ್, ಮಹಾರಾಷ್ಟ್ರ.

ಪಶ್ಚಿಮ ಬಂಗಾಳ
11) ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್, ಕೋಲ್ಕತ್ತಾ.
12) ಇನ್ ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್ ಅಂಡ್ ರೀಸರ್ಚ್, ಠಾಕೂರ್ಪುರ್ಕರ್, ಕೋಲ್ಕತ್ತಾ.

ಉತ್ತರ ಪ್ರದೇಶ
13) ವಾರಣಸೇಯ ಸಂಸ್ಕೃತ ವಿಶ್ವವಿದ್ಯಾನಿಲಯ, ವಾರಣಾಸಿ, ಉತ್ತರ ಪ್ರದೇಶ -ದೆಹಲಿ ವಿಭಾಗ.
14) ಮಹಿಳಾ ಗ್ರಾಮ್ ವಿದ್ಯಾಪೀಠ/ವಿಶ್ವವಿದ್ಯಾಲಯ, ಪ್ರಯಾಗ, ಅಲಹಾಬಾದ್, ಉತ್ತರ ಪ್ರದೇಶ.
15) ಗಾಂಧಿ ಹಿಂದಿ ವಿದ್ಯಾಪೀಠ, ಪ್ರಯಾಗ, ಅಲಹಾಬಾದ್, ಉತ್ತರ ಪ್ರದೇಶ.
16) ನ್ಯಾಷನಲ್ ಯೂನಿವರ್ಸಿಟಿ ಆಫ್ ಎಲೆಕ್ಟ್ರೋ ಕಾಂಪ್ಲೆಕ್ಸ್ ಹೋಮಿಯೋಪತಿ, ಕಾನ್ಪುರ್, ಉತ್ತರ ಪ್ರದೇಶ.
17) ನೇತಾಜಿ ಸುಭಾಶ್ ಚಂದ್ರ ಬೋಸ್ ಯೂನಿವರ್ಸಿಟಿ (ಓಪನ್ ಯೂನಿವರ್ಸಿಟಿ), ಆಲಿಘರ್, ಉತ್ತರ ಪ್ರದೇಶ.
18) ಉತ್ತರ ಪ್ರದೇಶ ವಿಶ್ವವಿದ್ಯಾಲಯ, ಕೋಸಿ ಕಲ್ಯಾಣ್, ಮಥುರಾ, ಉತ್ತರ ಪ್ರದೇಶ.
19) ಮಹಾರಾಣ ಪ್ರತಾಪ್ ಶಿಕ್ಷಾ ನಿಕೇತನ್ ವಿಶ್ವವಿದ್ಯಾಲಯ, ಪ್ರತಾಪ್ ಘರ್, ಉತ್ತರ ಪ್ರದೇಶ.
20) ಇಂದ್ರಪ್ರಸ್ಥ ಶಿಕ್ಷಾ ಪರಿಷದ್, ನೋಯ್ಡಾ, ಉತ್ತರ ಪ್ರದೇಶ.
21) ಗುರುಕುಲ್ ವಿಶ್ವವಿದ್ಯಾಲಯ, ವೃಂದಾವನ್, ಉತ್ತರ ಪ್ರದೇಶ.

ಒಡಿಶಾ
22) ನಭಭಾರತ್ ಶಿಕ್ಷಾ ಪರಿಷದ್, ಶಕ್ತಿನಗರ್, ರೂರ್ಕೆಲಾ, ಒಡಿಶಾ.
23) ನಾರ್ತ್ ಒರಿಸ್ಸಾ ಯೂನಿವರ್ಸಿಟಿ ಆಫ್ ಅಗ್ರಿಕಲ್ಚರ್ ಅಂಡ್ ಟೆಕ್ನಾಲಜಿ, ಒಡಿಶಾ.

ಪಾಂಡಿಚೇರಿ
24) ಶ್ರೀಬೋಧಿ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ಥಿಲಸ್ ಪೇಠ್, ವಳತ್ತೂರ್ ರಸ್ತೆ, ಪಾಂಡಿಚೇರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+