ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಹೆಚ್ಚಳ: ಯುಜಿಸಿ ನೆಟ್ 2021 ಪರೀಕ್ಷೆ ಮುಂದೂಡಿಕೆ

|
Google Oneindia Kannada News

ನವದೆಹಲಿ, ಏಪ್ರಿಲ್ 20: ಮುಂದಿನ ತಿಂಗಳು ನಡೆಯಬೇಕಿದ್ದ ಯುಜಿಸಿ ನೆಟ್ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್ ತಿಳಿಸಿದ್ದಾರೆ. ದೇಶಾದ್ಯಂತ ಕೋವಿಡ್ ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಮುಂದೂಡಲು ನಿರ್ಧರಿಸಲಾಗಿದೆ.

ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಪರವಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್‌ಟಿಎ) ಯುಜಿಸಿ ನೆಟ್ ಪರೀಕ್ಷೆಗಳನ್ನು ನಡೆಸುತ್ತದೆ. ವಿಶ್ವವಿದ್ಯಾಲಯಗಳ ಸಹಾಯಕ ಪ್ರೊಫೆಸರ್‌ ಹುದ್ದೆಗಳ ಅರ್ಹತೆ ಮತ್ತು ಕಿರಿಯ ಸಂಶೋಧಕ ಫೆಲೋಷಿಪ್‌ಗಳನ್ನು (ಜೆಆರ್‌ಎಫ್) ನೀಡಲು ಯುಜಿಸಿ ನೆಟ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ಬ್ರೇಕಿಂಗ್ ನ್ಯೂಸ್; 1 ರಿಂದ 9ನೇ ತರಗತಿಗೆ ಪರೀಕ್ಷೆ ಇಲ್ಲ ಬ್ರೇಕಿಂಗ್ ನ್ಯೂಸ್; 1 ರಿಂದ 9ನೇ ತರಗತಿಗೆ ಪರೀಕ್ಷೆ ಇಲ್ಲ

'ಯುಜಿಸಿ ನೆಟ್ ಪರೀಕ್ಷೆಗಳು ಮೇ 2 ರಿಂದ ಮೇ 17ರವರೆಗೂ ನಡೆಯಬೇಕಿತ್ತು. ಆದರೆ ಪ್ರಸ್ತುತದ ಕೋವಿಡ್-19 ಸಾಂಕ್ರಾಮಿಕದ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ಮತ್ತು ಅಭ್ಯರ್ಥಿಗಳು ಹಾಗೂ ಪರೀಕ್ಷಾ ಸಿಬ್ಬಂದಿಯ ಸುರಕ್ಷತೆ ಮತ್ತು ಹಿತವನ್ನು ಪರಿಗಣಿಸಿ ಯುಜಿಸಿ ನೆಟ್ ಡಿಸೆಂಬರ್ 2020 ಸೈಕಲ್ (ಮೇ 2021) ಪರೀಕ್ಷೆಯನ್ನು ಮುಂದೂಡಲು ನಿರ್ಧರಿಸಲಾಗಿದೆ' ಎಂದು ಎನ್‌ಟಿಎ ತಿಳಿಸಿದೆ.

UGC NET 2021 May Exam Postponed, New Date To Be Decided Later

ಮುಂದಿನ ಪರೀಕ್ಷೆಯ ದಿನಾಂಕವನ್ನು ಎನ್‌ಟಿಎ ಇನ್ನೂ ನಿಗದಿಪಡಿಸಿಲ್ಲ. ಮುಂದಿನ ಹೊಸ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸುವುದನ್ನು 15 ದಿನ ಮೊದಲೇ ಬಹಿರಂಗಪಡಿಸಲಾಗುವುದು ಎಂದು ಅದು ತಿಳಿಸಿದೆ. ಯುಜಿಸಿ ನೆಟ್ ಮೇ ಪರೀಕ್ಷಾ ಆಕಾಂಕ್ಷಿಗಳು nta.ac.in, ugcnet.nta.nic.in ವೆಬ್‌ಸೈಟ್‌ಗಳನ್ನು ಮಾಹಿತಿಗಾಗಿ ನಿರಂತರ ಪರಿಶೀಲಿಸುತ್ತಿರಬೇಕು ಎಂದು ಸಲಹೆ ನೀಡಲಾಗಿದೆ. ಹಾಗೆಯೇ ಅಭ್ಯರ್ಥಿಗಳು ಯಾವುದೇ ಸಂದೇಹಗಳಿದ್ದರೆ 011-40759000 ಸಂಖ್ಯೆ ಅಥವಾ [email protected] ಇಮೇಲ್ ವಿಳಾಸವನ್ನು ಸಂಪರ್ಕಿಸಬಹುದು.

English summary
NTA has announced postponement of UGC NET 2021 May exam and new date to be decided later.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X