UGC ಒಮ್ಮೆಗೆ ಎರಡು ಪದವಿ ಕೋರ್ಸ್; ಯುಜಿಸಿ ಹೊಸ ಮಾರ್ಗಸೂಚಿ ಪ್ರಕಟ

ನವದೆಹಲಿ, ಏ. 13: ಕೇಂದ್ರ ಸರಕಾರ ಜಾರಿಗೆ ತಂದಿರುವ ನೂತನ ಶಿಕ್ಷಣ ನೀತಿಯ (NEP 2020) ಭಾಗವಾಗಿ ಯುಜಿಸಿ ಇದೀಗ ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ಎರಡು ಪೂರ್ಣಾವಧಿ ಕೋರ್ಸ್ ಮಾಡುವ ಅವಕಾಶ ಮಾಡಿಕೊಟ್ಟಿದೆ. ಮೊನ್ನೆಯೇ ಇದರ ರೂಪುರೇಖೆ ಮಾಧ್ಯಮಗಳಿಗೆ ಸಿಕ್ಕರೂ ಇಂದು ಅಧಿಕೃತವಾಗಿ ಯುಜಿಸಿ ಮಾರ್ಗಸೂಚಿಗಳನ್ನ ಪ್ರಕಟಿಸಿದೆ.

ಇದೀಗ ಒಬ್ಬ ವಿದ್ಯಾರ್ಥಿ ಭೌತಿಕ ತರಗತಿಗಳನ್ನೊಳಗೊಂಡ ಎರಡು ವಿಭಿನ್ನ ಕೋರ್ಸ್‌ಗಳನ್ನ ಒಮ್ಮೆಗೆ ಓದಬಹುದು. ಉದಾಹರಣೆಗೆ ಜೈನ್ ವಿವಿಯಲ್ಲಿ ಒಂದು ಕೋರ್ಸ್, ಪಿಇಎಸ್ ವಿವಿಯಲ್ಲಿ ಒಂದು ಕೋರ್ಸ್ ಮಾಡಬಹುದು. ಅಥವಾ ಒಂದೇ ಶಿಕ್ಷಣ ಸಂಸ್ಥೆಯಲ್ಲಿ ಎರಡೆರಡು ಕೋರ್ಸ್ ಮಾಡಬಹುದು. ಅವುಗಳ ತರಗತಿ ವೇಳಾಪಟ್ಟಿ ಭಿನ್ನವಾಗಿರಬೇಕು ಅಷ್ಟೇ. ಆನ್‌ಲೈನ್ ಮೂಲಕ ಪಡೆಯುವ ಶಿಕ್ಷಣಕ್ಕೆ ತರಗತಿ ವೇಳಾಪಟ್ಟಿಯ ಷರತ್ತು ಅನ್ವಯ ಆಗುವುದಿಲ್ಲ. ವಿದ್ಯಾರ್ಥಿಗಳು ಆನ್‌ಲೈನ್ ಅಥವಾ ಕರೆಸ್ಪಾಂಡೆನ್ಸ್ ಮೂಲಕ ಎರಡು ಕೋರ್ಸ್‌ಗಳನ್ನ ಒಮ್ಮೆಲೆ ಮಾಡಬಹುದು.

ಎರಡು ಪದವಿ ಕೋರ್ಸ್ ಓದುವ ಸಂಬಂಧ ಯುಜಿಸಿ ಮಾರ್ಗಸೂಚಿಗಳಿವು:
* ಒಬ್ಬ ವಿದ್ಯಾರ್ಥಿ ಏಕಕಾಲದಲ್ಲಿ ಭೌತಿಕ ತರಗತಿಗಳನ್ನೊಳಗೊಂಡ ಎರಡು ಪೂರ್ಣಾವಧಿ ಪದವಿ ಕೋರ್ಸ್ ಓದಬಹುದು. ಆದರೆ, ಎರಡೂ ಕೋರ್ಸ್‌ಗಳ ಟೈಮಿಂಗ್ ಬೇರೆ ಬೇರೆಯಾಗಿರಬೇಕು.
* ಭೌತಿಕ ತರಗತಿಗಳನ್ನೊಳಗೊಂಡ ಒಂದು ಪೂರ್ಣಾವಧಿ ಕೋರ್ಸ್ ಜೊತೆಗೆ ಆನ್‌ಲೈನ್ ಅಥವಾ ದೂರಶಿಕ್ಷಣದಲ್ಲಿ ಮತ್ತೊಂದು ಕೋರ್ಸ್ ಮಾಡಬಹುದು.
* ದೂರಶಿಕ್ಷಣ ಅಥವಾ ಆನ್‌ಲೈನ್ ಮೂಲಕ ಎರಡು ಕೋರ್ಸ್ ಮಾಡಬಹುದು.
* ದೂರ ಶಿಕ್ಷಣ ಅಥವಾ ಆನ್‌ಲೈನ್ ಮೂಲಕ ಎರಡು ಪದವಿ ಅಥವಾ ಡಿಪ್ಲೊಮಾ ಕೋರ್ಸ್‌ಗಳನ್ನ ಮಾಡಬಹುದು. ಆದರೆ, ಈ ಕೋರ್ಸ್‌ಗಳನ್ನ ನಡೆಸಲು ಯುಜಿಸಿ ಅಥವಾ ಭಾರತ ಸರಕಾರ ಅಥವಾ ಸ್ಟ್ಯಾಟುಟರಿ ಕೌನ್ಸಿಲ್‌ನಿಂದ ಮಾನ್ಯತೆ ಪಡೆದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರ ಇದನ್ನು ಮಾಡಬಹುದು.
* ಈ ಮಾರ್ಗಸೂಚಿಗಳ ಅಡಿಯಲ್ಲಿ ಇರುವ ಪದವಿ ಅಥವಾ ಡಿಪ್ಲೊಮಾ ಕೋರ್ಸ್‌ಗಳು ಯುಜಿಸಿ ಅಥವಾ ಸಂಬಂಧಿತ ಪ್ರಾಧಿಕಾರ ಹೊರಡಿಸಿದ ನಿಬಂಧನೆಗಳಿಗೆ ಒಳಪಟ್ಟಿರುತ್ತವೆ.
* ಈ ಮಾರ್ಗಸೂಚಿಗಳು ಯುಜಿಸಿ ಹೊರಡಿಸಿದ ನೋಟಿಫಿಕೇಶನ್ ದಿನದಂದಿನಿಂದ ಅನ್ವಯಕ್ಕೆ ಬರುತ್ತವೆ. ಈ ಮಾರ್ಗಸೂಚಿ ಪ್ರಕಟಣೆಗೆ ಮುಂಚೆ ಯಾವುದೇ ವಿದ್ಯಾರ್ಥಿ ಒಮ್ಮೆಗೆ ಎರಡು ಪದವಿ ಕೋರ್ಸ್ ಮಾಡಿದ್ದರೆ ಅದು ಸಿಂಧು ಎನಿಸುವುದಿಲ್ಲ.
* ಈ ಮಾರ್ಗಸೂಚಿ ಪಿಎಚ್‌ಡಿ ವ್ಯಾಸಂಗ ಹೊರತುಪಡಿಸಿ ಇತರ ಶಿಕ್ಷಣ ಕೋರ್ಸ್‌ಗಳಿಗೆ ಮಾತ್ರ ಅನ್ವಯ ಆಗುತ್ತದೆ.
* ಈ ಮಾರ್ಗಸೂಚಿಗಳ ಆಧಾರದ ಮೇಲೆ ವಿಶ್ವವಿದ್ಯಾಲಯಗಳು ತಮ್ಮ ಪ್ರಾಧಿಕಾರಗಳ ಮೂಲಕ ನಿಯಮಾವಳಿ ರೂಪಿಸಲು ಸ್ವತಂತ್ರ ಇವೆ.

UGC Guidelines for allowing Students to study 2 full time courses

ಶಿಕ್ಷಣತಜ್ಞರು, ಪ್ರೊಫೆಸರ್‌ಗಳಿಂದ ಆಕ್ಷೇಪ:
ಏಕಕಾಲದಲ್ಲಿ ಎರಡು ಪದವಿ ಕೋರ್ಸ್‌ಗಳನ್ನ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಟ್ಟಿರುವ ಯುಜಿಸಿಯ ನಿರ್ಧಾರಕ್ಕೆ ಹಲವು ಶಿಕ್ಷಣ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯುಜಿಸಿಯ ಈ ಕ್ರಮದಿಂದ ಶಿಕ್ಷಣದ ಗುಣಮಟ್ಟವೇ ಕುಸಿಯುವ ಅಪಾಯ ಇದೆ. ಒಂದು ಪೂರ್ಣಾವಧಿ ಪದವಿ ಶಿಕ್ಷಣ ಪಡೆಯುವ ವಿದ್ಯಾರ್ಥಿಯ ಶ್ರಮ ಮತ್ತು ಗಮನ ಸಂಪೂರ್ಣ ಆ ಕೋರ್ಸ್ ಮೇಲೆಯೇ ಇರುವುದು ಅವಶ್ಯಕ. ಇಲ್ಲದಿದ್ದರೆ ಆ ಕೋರ್ಸ್‌ನಿಂದ ವಿದ್ಯಾರ್ಥಿ ಹೆಚ್ಚು ಕಲಿಯಲು ಸಾಧ್ಯವಾಗುವುದಿಲ್ಲ ಎಂದು ಕೆಲ ವಿಶ್ವವಿದ್ಯಾಲಯಗಳ ಬೋಧಕರು ಅಭಿಪ್ರಾಯಪಟ್ಟಿದ್ಧಾರೆ.

UGC Guidelines for allowing Students to study 2 full time courses

ಒಂದು ಪದವಿ ವ್ಯಾಸಂಗದಲ್ಲಿ ಹೆಚ್ಚುವರಿ ಕಲಿಯಲು ಅವಕಾಶ ಕೊಡುವುದು ಬೇರೆ, ಹೆಚ್ಚುವರಿ ಪದವಿ ಪಡೆಯುವ ಅವಕಾಶ ಕೊಡುವುದು ಬೇರೆ. ನಮ್ಮ ಪದವಿ ಕೋರ್ಸ್‌ಗಳ ಗುಣಮಟ್ಟ ನಶಿಸುತ್ತದೆ. ಪದವಿ ಶಿಕ್ಷಣಕ್ಕೆ ಯುಜಿಸಿ ಕೊಡುವ ಪ್ರಾಮುಖ್ಯತೆ ಏನು ಎಂಬುದು ಇದು ತೋರಿಸುತ್ತದೆ. ಪ್ರಪಂಚದ ಯಾವೆಡೆಯೂ ಇಂಥ ಶಿಕ್ಷಣಪದ್ಧತಿ ಇಲ್ಲ. ಪದವಿ ವ್ಯಾಸಂಗದಲ್ಲಿ ಒಂದು ಟೈಮ್ ಟೇಬಲ್ ಇರುತ್ತದೆ, ಕ್ಲಾಸ್ ರೂಮ್ ಅವಧಿಗಳಿರುತ್ತವೆ, ಸೆಲ್ಫ್ ಸ್ಟಡಿ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಅವಕಾಶ ಇರಬೇಕು ಎಂದು ಡೆಲ್ಲಿ ಯೂನಿವರ್ಸಿಟಿ ಪ್ರೊಫೆಸರ್ ಆಭಾ ದೇವ್ ಹಬೀಬ್ ಹೇಳುತ್ತಾರೆ.

UGC Guidelines for allowing Students to study 2 full time courses

ಡೆಲ್ಲಿ ವಿವಿಯ ಮತ್ತೊಬ್ಬ ಪ್ರೊಫೆಸರ್ ರಾಜೇಶ್ ಝಾ ಕೂಡ ಈ ಅಭಿಪ್ರಾಯವನ್ನು ಪುನರುಚ್ಚರಿಸುತ್ತಾರೆ. ಯುಜಿಸಿಯು ವಿದ್ಯಾರ್ಥಿಯನ್ನ ೨೪ ಗಂಟೆ ಅಧ್ಯಯನ ಮಾಡಬಲ್ಲ ಸೂಪರ್ ಹ್ಯುಮನ್ ಎಂದು ಪರಿಗಣಿಸಿದಂತಿದೆ.... ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಇದು ಇನ್ನಷ್ಟು ಗೊಂದಲ ನಿರ್ಮಿಸುತ್ತದೆ ಎಂದು ಅವರು ಹೇಳುತ್ತಾರೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+