Get Updates
Get notified of breaking news, exclusive insights, and must-see stories!

ನೈಜ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು 'ಸನಾತನ' ತಂತ್ರಕ್ಕೆ ಮೊರೆ ಹೋದ ಮೋದಿ: ಉದಯನಿಧಿ ಸ್ಟಾಲಿನ್‌ ಮತ್ತೆ ವಾಗ್ದಾಳಿ

ಚೆನ್ನೈ, ಸೆಪ್ಟೆಂಬರ್‌ 07: ಸನಾತನ ಧರ್ಮ ನಿರ್ಮೂಲನೆ ಕುರಿತು ಹೇಳಿಕೆ ನೀಡಿರುವ ಉದಯನಿಧಿ ಸ್ಟಾಲಿನ್‌ ಅವರು ಬಿಜೆಪಿ ಹಾಗೂ ಸಂಘಪರಿವಾರದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಉದಯನಿಧಿ ಅವರಿಗೆ ತಕ್ಕ ಉತ್ತರ ನೀಡಬೇಕೆಂದು ಬಿಜೆಪಿ ಸಚಿವರಿಗೆ ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಉದಯನಿಧಿ ಸ್ಟಾಲಿನ್‌ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

'ಸನಾತನ ಧರ್ಮ ನಿರ್ಮೂಲನೆ ಸಮಾವೇಶದಲ್ಲಿ ನಾನು ಹೇಳಿಕೆ ನೀಡಿದ್ದೆ. ನನ್ನ ಭಾಷಣವನ್ನು ನರಮೇಧಕ್ಕೆ ಹೋಲಿಸಿ ಬಿಜೆಪಿ ನಾಯಕರು ಪ್ರಚೋದನೆ ನೀಡುತ್ತಿದ್ದಾರೆ. ನನ್ನ ಹೇಳಿಕೆಗಳನ್ನು ತಿರುಚಿದ್ದಾರೆ. ಅಚ್ಚರಿಯ ಸಂಗತಿ ಎಂದರೆ, ಅಮಿತ್ ಶಾ ಅವರಂತಹ ಕೇಂದ್ರ ಸರ್ಕಾರದ ಸಚಿವರು ನಕಲಿ ಸುದ್ದಿಗಳ ಆಧಾರದ ಮೇಲೆ ಕ್ರಮಕ್ಕೆ ನನ್ನ ಮೇಲೆ ಒತ್ತಾಯಿಸುತ್ತಿದ್ದಾರೆ' ಎಂದು ಉದಯನಿಧಿ ಹೇಳಿದ್ದಾರೆ.

Udhayanidhi Stalin attacks Narendra Modi amid Sanatan row: Demonetizes money, changes names

ಮೋದಿ ಸರ್ಕಾರ ವಿರುದ್ಧ ಕಿಡಿಕಾರಿರುವ ಉದಯನಿಧಿ ಸ್ಟಾಲಿನ್‌ ನಾಲ್ಕು ಪುಟಗಳ ಸುದೀರ್ಘ ಹೇಳಿಕೆಯನ್ನು ಸಾಮಾಜಿಕ ಮಾದ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ನನ್ನ ಹೇಳಿಕೆ ತಿರುಚಿದ್ದಕ್ಕಾಗಿ ಬಿಜೆಪಿ ನಾಯಕರ ವಿರುದ್ಧ ಯಾವುದೇ ದೂರು ದಾಖಲಿಸುವುದಿಲ್ಲ. ಅಪಪ್ರಚಾರ ಮಾಡುವುದು ಅವರ ಜೀವನ ಕ್ರಮವಾಗಿದೆ. ಹಾಗೇ ನೋಡಿದರೆ ನಾನು ಸಹ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳ ದಾಖಲಿಸಬೇಕು. ಆದರೆ, ನಾನು ಹಾಗೆ ಮಾಡುವುದಿಲ್ಲ. ಇದು ನನ್ನ ಬದುಕಿನ ವಿಧಾನ ಎಂದು ಉದಯನಿಧಿ ಹೇಳಿದ್ದಾರೆ.

ನನ್ನ ಹಾಗೂ ಡಿಎಂಕೆ ಪಕ್ಷದ ಹೇಳಿಕೆಗಳು ಯಾವುದೇ ಧರ್ಮಕ್ಕೆ ವಿರುದ್ಧವಾಗಿಲ್ಲ ಎಂದು ಉದಯನಿಧಿ ಪ್ರತಿಪಾದಿಸಿದ್ದಾರೆ. ಒಂದು ವೇಳೆ, ಯಾವುದೇ ಧರ್ಮವು ಜನರನ್ನು ಸಮಾನತೆಯತ್ತ ಕೊಂಡೊಯ್ಯಿದರೆ ಅದನ್ನು ನಾನು ಒಪ್ಪಲು ಸಿದ್ದವೆಂದು ಹೇಳಿದ್ದಾರೆ.

Udhayanidhi Stalin attacks Narendra Modi amid Sanatan row: Demonetizes money, changes names

'ನಾನು ಡಿಎಂಕೆ ಸಂಸ್ಥಾಪಕ ಅಣ್ಣಾ ದೊರೈ ಅವರ ರಾಜಕೀಯ ವಾರಸುದಾರರಲ್ಲಿ ಒಬ್ಬ. ನಾವು ಯಾವ ಧರ್ಮದ ಶತ್ರುಗಳಲ್ಲ ಎಂಬುದು ಎಲ್ಲರಿಗೂ ಗೊತ್ತು. ಧರ್ಮದ ಬಗ್ಗೆ ಅಣ್ಣಾ ನೀಡಿರುವ ಹೇಳಿಕೆಗಳನ್ನು ನಾನು ಉಲ್ಲೇಖಿಸಲು ಬಯಸುತ್ತೇನೆ' ಎಂದು ಉದಯನಿಧಿ ತಿಳಿಸಿದ್ದಾರೆ.

'ಒಂದು ಧರ್ಮವು ಜನರನ್ನು ಸಮಾನತೆಯ ಕಡೆಗೆ ಕೊಂಡೊಯ್ಯುತ್ತದೆ. ಅವರಿಗೆ ಭ್ರಾತೃತ್ವವನ್ನು ಕಲಿಸುತ್ತದೆ. ಒಂದು ಧರ್ಮವು ಜಾತಿಯ ಹೆಸರಿನಲ್ಲಿ ಜನರನ್ನು ವಿಭಜಿಸಿದರೆ, ಅದು ಅವರಿಗೆ ಅಸ್ಪೃಶ್ಯತೆ ಮತ್ತು ಗುಲಾಮಗಿರಿಯನ್ನು ಕಲಿಸಿದರೆ, ಅಂತಹ ಧರ್ಮವನ್ನು ವಿರೋಧಿಸುವ ಮೊದಲ ವ್ಯಕ್ತಿ ನಾನು ಎಂದು ಅಣ್ಣಾ ಹೇಳಿದ್ದಾರೆ' ಎಂಬುದಾಗಿ ಉದಯನಿಧಿ ಬರೆದುಕೊಂಡಿದ್ದಾರೆ.

ಧರ್ಮಗಳು ಮನುಷ್ಯರನ್ನು ಸಮಾನವಾಗಿ ಕಂಡಾಗ ಮಾತ್ರ ಧರ್ಮವಾಗುತ್ತವೆ. ಎಲ್ಲಾ ಧರ್ಮಗಳನ್ನು ನಾವು ಗೌರವಿಸುತ್ತೇವೆ. ಆದರೆ, ಪ್ರಧಾನಿ ಮೋದಿ ಅವರು ಚುನಾವಣೆಗೋಸ್ಕರ ಧರ್ಮವನ್ನು ಬಳಸಿಕೊಳ್ಳುತ್ತಿದ್ದಾರೆ. ನೈಜ ನೈಜ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಸನಾತನ ಧರ್ಮದ ತಂತ್ರಕ್ಕೆ ಮೋದಿ ಮೊರೆ ಹೋಗಿದ್ದಾರೆ ಎಂದು ಉದಯನಿಧಿ ಸ್ಟಾಲಿನ್‌ ವಾಗ್ದಾಳಿ ನಡೆಸಿದ್ದಾರೆ.

ಕಳೆದ 9 ವರ್ಷಗಳಿಂದ ಮೋದಿ ಉತ್ತಮವಾಗಿರುವುದನ್ನು ಏನೂ ಮಾಡುತ್ತಿಲ್ಲ. ಹಣದ ಅಮಾನ್ಯೀಕರಣವನ್ನು ಮಾಡಿದ್ದಾರೆ. ಗುಡಿಸಲುಗಳನ್ನು ಮರೆಮಾಡಲು ಗೋಡೆಯನ್ನು ನಿರ್ಮಿಸಿದ್ದಾರೆ. ಹೊಸ ಸಂಸತ್ತಿನ ಕಟ್ಟಡದಲ್ಲಿ ಸೆಂಗೋಲ್ ಅನ್ನು ಇಟ್ಟಿದ್ದಾರೆ. ದೇಶದ ಹೆಸರನ್ನು ಬದಲಾಯಿಸುತ್ತಾರೆ. ಇದಷ್ಟೇ ಮೋದಿ ಕೆಲಸವೆಂದು ಉದಯನಿಧಿ ಸ್ಟಾಲಿನ್‌ ಹರಿಹಾಯ್ದಿದ್ದಾರೆ.

'ನಿಶಸ್ತ್ರ ಫ್ಯಾಸಿಸ್ಟ್ ಬಿಜೆಪಿ ಸರ್ಕಾರವನ್ನು ಇಡೀ ದೇಶವೇ ಪ್ರಶ್ನಿಸುತ್ತಿದೆ ಎಂದಿರುವ ಅವರು, 'ಕಳೆದ 9 ವರ್ಷಗಳಿಂದ ಬಿಜೆಪಿ ನೀಡಿರುವ ಭರವಸೆಗಳೆಲ್ಲವೂ ಪೊಳ್ಳು ಭರವಸೆಗಳಾಗಿವೆ. ಜನರ ಕಲ್ಯಾಣಕ್ಕಾಗಿ ನೀವು ನಿಖರವಾಗಿ ಏನು ಮಾಡಿದ್ದೀರಿ?' ಎಂದು ಪ್ರಧಾನಿ ಮೋದಿಯನ್ನು ತಮಿಳುನಾಡು ಸಿಎಂ ಪುತ್ರ ಉದಯನಿಧಿ ಸ್ಟಾಲಿನ್‌ ಪ್ರಶ್ನಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+