ಬಿಜೆಪಿ ಸೇರಿದ ಶಾಸಕರಿಂದ ಮಮತಾ ಬ್ಯಾನರ್ಜಿಗೆ ಆಘಾತದ ಸುದ್ದಿ!

ನವದೆಹಲಿ, ಮೇ 28: ಲೋಕಸಭೆ ಚುನಾವಣೆಯ ಫಲಿತಾಂಶದ ನಂತರ ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಬದಲಾವಣೆಯ ಗಾಳಿ ಬೀಸಿದೆ.

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ನ ಇಬ್ಬರು ಮತ್ತು ಸಿಪಿಎಂ ನ ಓರ್ವ ಶಾಸಕ ಬಿಜೆಪಿ ಸೇರಿದ್ದಾರೆ. ಇಂದು ಬಿಜೆಪಿ ಮುಖಂಡರ ನೇತೃತ್ವದಲ್ಲಿ ಅವರು ಪಕ್ಷಕ್ಕೆ ಸೇರಿದರು. ಟಿಎಂಸಿಯಿಂದ ಅಮಾನತುಗೊಂಡ ಸುಬ್ರಂಗ್ಶು ರಾಯ್(ಮುಕುಲ್ ರಾಯ್ ಪುತ್ರ),ತುಷಾರಕ್ರಾಂತಿ ಭಟ್ಟಾಚಾರ್ಜಿ, ಸಿಪಿಎಂನ ದೇವೇಂದ್ರ ರಾಯ್ ಬಿಜೆಪಿ ಸೇರಿದ್ದಾರೆ. ಈ ಸಂದರ್ಭದಲ್ಲಿ ಟಿಎಂಸಿಯ 60 ಕ್ಕೂ ಹೆಚ್ಚು ಕಾರ್ಯಕರ್ತರು ಸಹ ಬಿಜೆಪಿ ಸೇರಿದರು. ಬಿಜೆಪಿ ಸೇರಿದ ನಂತರ ಶಾಸಕರು 'ಜೈ ಶ್ರೀರಾಮ್' ಘೋಷಣೆ ಕೂಗಿದ್ದು ವಿಶೇಷವಾಗಿತ್ತು.

Two TMC MLAs and one CPM MLA from West Bengal join BJP

ಪಕ್ಷಕ್ಕೆ ಸೇರಿದ ನಂತರ ಬಿಜೆಪಿ ಮುಖಂಡರೊಂದಿಗೆ ಮಾತುಕತೆ ನಡೆಸಿದ ಮೂವರು ಶಾಸಕರೂ, 'ಲೋಕಸಭೆ ಚುನಾವಣೆ ಬೇರೆ ಬೇರೆ ಹಂತಗಳಲ್ಲಿ ನಡೆದಂತೆಯೇ ಇನ್ನೂ ಹಲವರು ಬಿಜೆಪಿ ಸೇರಲಿದ್ದಾರೆ. ಇದು ಹಂತ ಹಂತವಾಗಿ ನಡೆಯಲಿದೆ. ಇದು ಮೊದಲ ಹಂತ ಅಷ್ಟೇ' ಎಂದು ಶಾಸಕರು ಹೇಳಿದ್ದು, ಮಮತಾ ಬ್ಯಾನರ್ಜಿಗೆ ಈ ಸುದ್ದಿ ಆಘಾತವನ್ನುಂಟು ಮಾಡಿದೆ. ಬಿಜೆಪಿಯೂ ಶಾಸಕರ ಮಾತನ್ನೇ ಮುನರುಚ್ಚರಿಸಿದ್ದು, ಇನ್ನೂ ಹಲವರು ಶಾಸಕರು ಬಿಜೆಪಿ ಸೇರಲಿದ್ದಾರೆ ಎಂಬ ಸೂಚನೆಯನ್ನು ನೀಡಿದೆ.

2017 ರಲ್ಲಿ ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಮುಕುಲ್ ರಾಯ್ ಅವರ ನೇತೃತ್ವದಲ್ಲಿ ಶಾಸಕರು ಬಿಜೆಪಿ ಸೇರಿದ್ದು, ಮೂವರೂ ಬಾರಾಕ್ಪೋರ್ ಲೋಕಸಭೆ ಕ್ಷೇತ್ರದ ಅಡಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳ ಸದಸ್ಯರಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+