ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ ಶಿಕ್ಷೆ
ಪ್ರಸಿದ್ಧ ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ಬಂದಿದೆ. 11 ವರ್ಷಗಳ ನಂತರ ಪುಣೆ ಸಿಬಿಐ ವಿಶೇಷ ನ್ಯಾಯಾಲಯ ಪ್ರಕರಣದ ಇಬ್ಬರು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿದ್ದು ಜೀವಾವಧಿ ಶಿಕ್ಷೆ ವಿಧಿಸಿದೆ. ಇನ್ನು ಪ್ರಕರಣದ ಮಾಸ್ಟರ್ ಮೈಂಡ್ ಮೈಂಡ್ ಡಾ.ವಿನೋದ್ ತಾವ್ಡೆ ಅವರನ್ನು ಖುಲಾಸೆಗೊಳಿಸಿರುವುದು ದೊಡ್ಡ ವಿಷಯವಾಗಿದೆ.
ಪ್ರಕರಣದ ವಿಚಾರಣೆ ನಡೆಸಿದ ಪುಣೆ ಸಿಬಿಐ ವಿಶೇಷ ನ್ಯಾಯಾಲಯ ವಿಕ್ರಮ್ ಭಾವೆ ಮತ್ತು ಸಂಜೀವ್ ಪುನಾಲ್ಕರ್ ಅವರನ್ನೂ ಸಾಕ್ಷ್ಯಾಧಾರಗಳ ಕೊರತೆಯಿಂದ ಬಿಡುಗಡೆ ಮಾಡಿದೆ. ಜೀವಾವಧಿ ಶಿಕ್ಷೆಗೆ ಶರದ್ ಕಲಾಸ್ಕರ್ ಮತ್ತು ಸಚಿನ್ ಗುರಿಯಾಗಿದ್ದಾರೆ. ಇಬ್ಬರಿಗೂ ತಲಾ 5 ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗಿದೆ.

ನರೇಂದ್ರ ದಾಭೋಲ್ಕರ್ ಹತ್ಯೆ ನಡೆದಿದ್ದು ಯಾವಾಗ?
20 ಆಗಸ್ಟ್ 2013 ರಂದು ಬೆಳಿಗ್ಗೆ ಪುಣೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ನರೇಂದ್ರ ದಾಭೋಲ್ಕರ್ ಅವರನ್ನು ಪುಣೆಯಲ್ಲಿ ಇಬ್ಬರು ಮೋಟಾರ್ ಸೈಕಲ್ ಸವಾರಿ ದಾಳಿಕೋರರು ಕೊಂದರು. ದಾಭೋಲ್ಕರ್ ಮೇಲೆ ಐದು ಗುಂಡುಗಳನ್ನು ಹಾರಿಸಲಾಯಿತು. ಎರಡು ಗುಂಡುಗಳು ತಪ್ಪಾಗಿ ಹಾರಿದವು, ಆದರೆ ಎರಡು ಗುಂಡುಗಳು ದಾಭೋಲ್ಕರ್ ಅವರ ತಲೆಗೆ ಮತ್ತು ಒಂದು ಎದೆಗೆ ಬಿದ್ದವು. ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದರು. ಇವರು ಮಹಾರಾಷ್ಟ್ರ ಅಂಧಶ್ರಾದ್ಧ ನಿರ್ಮೂಲನ ಸಮಿತಿಯ ಸಂಸ್ಥಾಪಕರು.
ಈ ಪ್ರಕರಣವನ್ನು ಪುಣೆ ಪೊಲೀಸರು ಆರಂಭದಲ್ಲಿ ನಡೆಸು, ಬಳಿಕ ಸಿಬಿಸಿಐಗೆ ಹಸ್ತಾಂತರಿಸಿದರು. ಸಿಬಿಐ 2016ರಲ್ಲಿ ದೋಷಾರೋಪ ಪಟ್ಟಿಯಲ್ಲಿ ಸಲ್ಲಿಸಿತ್ತು. 8 ವರ್ಷಗಳ ವಿಚಾರಣೆ, ಸಾಕ್ಷ್ಯ, ವಾದ-ಪ್ರತಿವಾದಗಳ ನಂತರ ಇಂದು ತೀರ್ಪು ಪ್ರಕಟಿಸಲಾಗಿದೆ.
ಹತ್ಯೆಗೆ ಕಾರಣ ಏನು?
ಮಹಾರಾಷ್ಟ್ರ ಅಂಧಶ್ರದ್ಧ ನಿರ್ಮೂಲನಾ ಸಮಿತಿ ಮತ್ತು ಸನಾತನ ಸಂಸ್ಥೆ ನಡುವಿನ ಸಂಘರ್ಷವೇ ದಾಭೋಲ್ಕರ್ ಹತ್ಯೆಗೆ ಪ್ರಮುಖ ಕಾರಣ ಎಂದು ಸಿಬಿಐ ನಂಬಿದೆ. ಈ ಪ್ರಕರಣದಲ್ಲಿ ಬಂಧಿತರಾದ ವೀರೇಂದ್ರ ತಾವ್ಡೆ ಅವರು ಸನಾತನ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದರು.












Click it and Unblock the Notifications