ತಾಜ್ ಮಹಲ್ ಗೆ ಬೆದರಿಕೆ ಬೆನ್ನಲ್ಲೇ ಆಗ್ರಾದಲ್ಲಿ ಎರಡು ಕಡೆ ಸ್ಫೋಟ
ಶನಿವಾರದಂದು ಆಗ್ರಾದ ಎರಡು ಸ್ಥಳದಲ್ಲಿ ಕಡಿಮೆ ತೀವ್ರತೆಯ ಬಾಂಬ್ ಸ್ಫೋಟಗೊಂಡಿರುವ ಘಟನೆ ನಡೆದಿದೆ. ಕಂಟೋನ್ ಮೆಂಟ್ ರೈಲ್ವೆ ನಿಲ್ದಾಣದ ಬಳಿ ಹಾಗೂ ಮನೆಯೊಂದರ ತಾರಸಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ.
ಲಕ್ನೋ, ಮಾರ್ಚ್ 18:ಐತಿಹಾಸಿಕ ಸ್ಮಾರಕ ತಾಜ್ ಮಹಲ್ ಸ್ಫೋಟಕ್ಕೆ ಉಗ್ರರು ಸಂಚು ರೂಪಿಸಿರುವ ಸುದ್ದಿ ಬಂದಿರುವ ಬೆನ್ನಲ್ಲೆ ಶನಿವಾರದಂದು ಆಗ್ರಾದ ಎರಡು ಸ್ಥಳದಲ್ಲಿ ಕಡಿಮೆ ತೀವ್ರತೆಯ ಬಾಂಬ್ ಸ್ಫೋಟಗೊಂಡಿರುವ ಘಟನೆ ನಡೆದಿದೆ. ಕಂಟೋನ್ ಮೆಂಟ್ ರೈಲ್ವೆ ನಿಲ್ದಾಣದ ಬಳಿ ಹಾಗೂ ಮನೆಯೊಂದರ ತಾರಸಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ.
ಶನಿವಾರ ಮುಂಜಾನೆ 5 ಗಂಟೆ ಸುಮಾರಿಗೆ ಮೊದಲ ಬಾಂಬ್ ಸ್ಫೋಟಗೊಂಡಿದೆ. ದಂಡು ಪ್ರದೇಶದ ರೈಲ್ವೆ ಸ್ಟೇಷನ್ ಸಮೀಪವಿರುವ ಪ್ಲಂಬರ್ ಕೆಲಸಗಾರ ಅಶೋಕ ಎಂಬುವವರ ಮನೆ ಪಕ್ಕ ಬಾಂಬ್ ಸ್ಫೋಟಗೊಂಡಿದೆ.[ಇಸ್ಲಾಮಿಕ್ ಸ್ಟೇಟ್ ನ ಮುಂದಿನ ಗುರಿ ತಾಜ್ ಮಹಲ್!]

ಇದಾದ 45 ನಿಮಿಷದ ಬಳಿಕ ರೈಲ್ವೆ ನಿಲ್ದಾಣ ಬಳಿ ಮತ್ತೊಂದು ಬಾಂಬ್ ಸ್ಫೋಟಗೊಂಡಿದೆ. ಅನ್ವರ್ ಉಸ್ಮಾನಿ ಎಂಬುವವರ ಮನೆಯ ಮೇಲೆ ಈ ಬಾಂಬ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ.
ಅವಳಿ ಬಾಂಬ್ ಸ್ಫೋಟದ ಸುದ್ದಿ ತಿಳಿದ ತಕ್ಷಣ ಪೊಲೀಸರು, ಬಾಂಬ್ ನಿಷ್ಕ್ರಿಯ ದಳದವರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಡಿಜಿಪಿ ಮಹೇಶ್ ಕುಮಾರ್ ಅವರು ಘಟನಾ ಸ್ಥಳಕ್ಕೆ ಆಗಮ್ಸಿ, ಪರಿಸ್ಥಿತಿ ಅವಲೋಕನ ಮಾಡುತ್ತಿದ್ದಾರೆ.(ಐಎಎನ್ಎಸ್)












Click it and Unblock the Notifications