ದೇಶದ ಮೊದಲ ಬುಲೆಟ್‌ ರೈಲು ಸುರಂಗ ನಿರ್ಮಿಸಲು ಎರಡು ಸಂಸ್ಥೆಗಳ ಸ್ಪರ್ಧೆ

ಬುಲೆಟ್‌ ರೈಲು ಯೋಜನೆಯು ಮುಂಬೈನಿಂದ ಅಹಮದಾಬಾದ್‌ಗೆ ಸಂಪರ್ಕ ಕಲ್ಪಿಸುತ್ತದೆ. ಫೆಬ್ರವರಿ 9 ರಂದು 21 ಕಿಲೋಮೀಟರ್‌ ಬೂ ಸುರಂಗ ಮಾರ್ಗ ಕೊರೆಯಲು ಭಾರತದ ರಾಷ್ಟ್ರೀಯ ಹೈ ಸ್ಪೀಡ್ ರೈಲ್ ಕಾರ್ಪೊರೇಶನ್‌ನ (NHSRCL) ತಾಂತ್ರಿಕ ಟೆಂಡರ್‌ಗೆ ಸ್ಪರ್ಧೆ ನಡೆಸಿವೆ

ಮುಂಬೈ, ಫೆಬ್ರವರಿ 17: ದೇಶದ ಮೊದಲ ಬುಲೆಟ್‌ ರೈಲು ಯೋಜನೆಯು ಮುಂಬೈನಲ್ಲಿ ಅನುಷ್ಠಾನವಾಗುತ್ತಿದ್ದು, ಇದರ ಸುರಂಗ ಮಾರ್ಗ ನಿರ್ಮಿಸಲು ಎರಡು ಕಂಪೆನಿಗಳು ಪೈಪೋಟಿಗೆ ಇಳಿದಿವೆ.

ಪ್ರಸ್ತಾವಿತ ಬುಲೆಟ್‌ ರೈಲು ಯೋಜನೆಯು ಮುಂಬೈನಿಂದ ಅಹಮದಾಬಾದ್‌ಗೆ ಸಂಪರ್ಕ ಕಲ್ಪಿಸುತ್ತದೆ. ಫೆಬ್ರವರಿ 9 ರಂದು 21 ಕಿಲೋಮೀಟರ್‌ ಬೂ ಸುರಂಗ ಮಾರ್ಗ ಕೊರೆಯಲು ಭಾರತದ ರಾಷ್ಟ್ರೀಯ ಹೈ ಸ್ಪೀಡ್ ರೈಲ್ ಕಾರ್ಪೊರೇಶನ್‌ನ (NHSRCL) ತಾಂತ್ರಿಕ ಟೆಂಡರ್‌ಗೆ ಲಾರ್ಸೆನ್ ಮತ್ತು ಟೂಬ್ರೊ ಮತ್ತು ಅಫ್ಕಾನ್ಸ್ ಇನ್ಫ್ರಾಸ್ಟ್ರಕ್ಚರ್ ಎಂಬ ಎರಡು ಕಂಪೆನಿಗಳು ಸ್ಪರ್ಧೆ ನಡೆಸಿವೆ ಎಂದು ವರದಿಗಳು ತಿಳಿಸಿವೆ.

ಯೋಜನೆಯು ಎರಡು ರೈಲ್ವೆ ಟ್ರ್ಯಾಕ್‌ಗಳನ್ನು ಸೇರಿದಂತೆ ಸಾಕಷ್ಟು ಅಗಲವಾದ ಏಕ ಟ್ಯೂಬ್ ಸುರಂಗವನ್ನು ನಿರ್ಮಿಸುವುದನ್ನು ಒಳಗೊಂಡಿರುತ್ತದೆ. ಈ ಸುರಂಗ ಮಾರ್ಗವು ಮುಂಬೈನ ಸಮುದ್ರದ ಮುಂಭಾಗದಲ್ಲಿರುವ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಿಂದ ಪೂರ್ವಕ್ಕೆ ಇರುವ ಕಲ್ಯಾಣ್ ಶಿಲ್ಪಾಟಾದವರೆಗೆ ಸುರಂಗವು ಇರುತ್ತದೆ.

ಮುಂಬೈ ಮತ್ತು ನವಿ ಮುಂಬೈನ ಯೋಜಿತ ನಗರವನ್ನು ಬೇರ್ಪಡಿಸುವ ಅರಬ್ಬಿ ಸಮುದ್ರದ ಒಳಹರಿವಿನ ಥಾಣೆ ಕ್ರೀಕ್ ಅಡಿಯಲ್ಲಿ 7 ಕಿಮೀ ವಿಸ್ತಾರವು ಹಾದುಹೋಗುತ್ತದೆ. ಸಾಮಾನ್ಯವಾಗಿ ಈ ಸುರಂಗದ ಅಗಲವು 13.1 ಮೀಟರ್‌ನಷ್ಟು ಇರುತ್ತದೆ. ಇದು ಸಾಮಾನ್ಯವಾಗಿ ಬಳಸುವ ಟನ್ನಲ್‌ ಬೋರಿಂಗ್‌ ಮಿಷಿನ್‌ (ಟಿಬಿಎಂ) ಸುರಂಗ ಕೊರೆಯುವ ಯಂತ್ರದ ಎರಡು ಪಟ್ಟು ದೊಡ್ಡದಾಗಿದೆ.

ರಾಷ್ಟ್ರೀಯ ಹೈ ಸ್ಪೀಡ್ ರೈಲ್ ಕಾರ್ಪೊರೇಶನ್‌ನ ಪ್ರಕಾರ, ಸುಮಾರು 16 ಕಿಮೀ ಸುರಂಗವನ್ನು ಮಾಡಲು ಮೂರು ಟಿಬಿಎಂಗಳನ್ನು ಬಳಸಲಾಗುವುದು. ಉಳಿದ 5 ಕಿಮೀ ಹೊಸ ಆಸ್ಟ್ರಿಯನ್ ಸುರಂಗ ವಿಧಾನವನ್ನು ಬಳಸುತ್ತದೆ. ಈ ವೇಳೆ ಸುರಂಗವು ಶಿಲ್ಪಾಟಾ ಬಳಿಯ ಪಾರ್ಸಿಕ್ ಬೆಟ್ಟದ ಕೆಳಗೆ 114 ಮೀಟರ್ ಆಳವನ್ನು ತಲುಪುತ್ತದೆ ಎನ್ನಲಾಗಿದೆ.

12 ನಿಲ್ದಾಣಗಳೊಂದಿಗೆ ಮುಂಬೈ ಅಹಮದಾಬಾದ್ ನಡುವಿನ ಬುಲೆಟ್‌ ರೈಲು ಮಾರ್ಗವು ಗಂಟೆಗೆ ಗರಿಷ್ಠ 350 ಕಿಮೀ ವೇಗದಲ್ಲಿ ಬುಲೆಟ್ ರೈಲು 508 ಕಿಮೀ ಚಲಿಸುತ್ತದೆ. ಇದು 10.6 ಬಿಲಿಯನ್‌ ಡಾಲರ್‌ ರಿಯಾಯಿತಿಯ ಸಾಲದೊಂದಿಗೆ ಜಪಾನ್‌ನಿಂದ ಹಣಕಾಸು ಸಹಾಯ ಪಡೆಯುತ್ತಿದೆ. ಇದು 2026ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

24 ಮೀಟರ್ ಕೆಳಗೆ ಸುರಂಗ

24 ಮೀಟರ್ ಕೆಳಗೆ ಸುರಂಗ

ಭಾರತೀಯ ರೈಲ್ವೆಯ ಮಹತ್ವಾಕಾಂಕ್ಷೆಯ ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಯೋಜನೆ ನಿರ್ಮಾಣ ಕಾರ್ಯವು ವೇಗವಾಗಿ ನಡೆಯುತ್ತಿದೆ. ವಿಕ್ರೋಲಿಯಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಪ್ರಾಜೆಕ್ಟ್ ಮ್ಯಾನೇಜರ್ ಯುಪಿ ಸಿಂಗ್ ಇತ್ತೀಚೆಗೆ ತಿಳಿಸಿದ್ದಾರೆ. "ನಾವು ಗ್ರೌಂಡ್‌ ಲೆವೆಲ್‌ನಿಂದ 24 ಮೀಟರ್ ಕೆಳಗೆ ಆರು ರೈಲ್ವೆ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಲಿದ್ದೇವೆ. ಈ ನಿಲ್ದಾಣಗಳು ಪ್ರತಿ ಹಂತದಲ್ಲೂ ನಿಲ್ದಾಣದ ಸೌಲಭ್ಯಗಳು, ಪ್ರಯಾಣಿಕರ ಸೌಕರ್ಯಗಳು ಮತ್ತು ಪ್ಲಾಟ್‌ಫಾರ್ಮ್ ಸೇರಿದಂತೆ ಮೂರು ಹಂತಗಳನ್ನು ಹೊಂದಿವೆ ಎಂದು ತಿಳಿಸಿದ್ದಾರೆ.

ಹೈಸ್ಪೀಡ್ ರೈಲು ಯೋಜನೆಯ ಕೆಲಸ

ಹೈಸ್ಪೀಡ್ ರೈಲು ಯೋಜನೆಯ ಕೆಲಸ

ಸದ್ಯ ಮುಂಬೈ ಮತ್ತು ಅಹಮದಾಬಾದ್ ನಡುವೆ ಬುಲೆಟ್ ರೈಲು ಮಾರ್ಗದ ಹೈಸ್ಪೀಡ್ ರೈಲು ಯೋಜನೆಯ ಕೆಲಸಗಳು ಶುರುವಾಗಿವೆ. ಇದು ಕೆಲವು ಭೂಸ್ವಾಧೀನ ಪ್ರಕ್ರಿಯೆಯಿಂದ ತಡವಾಗಿತ್ತು. ಈಗ ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲ್ ಕಾರಿಡಾರ್‌ನ ಭಾಗವಾಗಿ ಮಹಾರಾಷ್ಟ್ರದ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಮತ್ತು ಶಿಲ್ಪಾಟಾ ನಡುವಿನ ಡಬಲ್ ಲೈನ್‌ಗೆ ಸುರಂಗದ ನಿರ್ಮಾಣವನ್ನು ಪ್ರಾರಂಭಿಸಲಾಗಿದೆ.

ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ನಿಲ್ದಾಣ

ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ನಿಲ್ದಾಣ

ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡಿಲಾಗಿದೆ. ಮುಂಬೈ ಅಹಮದಾಬಾದ್ ಹೈಸ್ಪೀಡ್ ರೈಲು ಮಾರ್ಗದ ಏಕೈಕ ಭೂಗತ ನಿಲ್ದಾಣವಾಗಿದೆ. ಮುಂಬೈ-ಅಹಮದಾಬಾದ್ ಹೈಸ್ಪೀಡ್ ಬುಲೆಟ್‌ ರೈಲು ಯೋಜನೆಯ ಪ್ರಕಾರ, ಒಟ್ಟು 508.17 ಕಿಮೀ ರೈಲು ಹಳಿಗಳಲ್ಲಿ 21 ಕಿಮೀ ಮಾರ್ಗವನ್ನು ಭೂಗತಗೊಳಿಸಲು ಯೋಜಿಸಲಾಗಿದೆ, ಉಳಿದವುಗಳನ್ನು ಭೂಮಿ ಮೇಲಿನ ಮಾರ್ಗವನ್ನು ನೀಡಲಾಗಿದೆ.

ಪಕ್ಷಿಧಾಮ ಮತ್ತು ಮ್ಯಾಂಗ್ರೋವ್‌ ಕಾಡುಗಳ ರಕ್ಷಣೆ

ಪಕ್ಷಿಧಾಮ ಮತ್ತು ಮ್ಯಾಂಗ್ರೋವ್‌ ಕಾಡುಗಳ ರಕ್ಷಣೆ

ಈ ಸುರಂಗವು ಥಾಣೆ ಸುತ್ತಲಿನ ಪಕ್ಷಿಧಾಮ ಮತ್ತು ಮ್ಯಾಂಗ್ರೋವ್‌ ಕಾಡುಗಳ ರಕ್ಷಣೆಗೆ ಆದ್ಯತೆ ನೀಡುತ್ತದೆ. ಈ ನಿಲ್ದಾಣವನ್ನು ನೈಸರ್ಗಿಕ ಬೆಳಕಿನಲ್ಲಿ ಇರಿಸಲು ಮೀಸಲಾದ ಸ್ಕೈಲೈಟ್ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಥಾಣೆ ಕ್ರೀಕ್‌ನಲ್ಲಿರುವ ಏಳು ಕಿಮೀ ಸಮುದ್ರದೊಳಗಿನ ಸುರಂಗವು ದೇಶದಲ್ಲೇ ಮೊದಲ ಬಾರಿಗೆ ಒಂದೇ ಟ್ಯೂಬ್ ಸುರಂಗ ಮಾರ್ಗವಾಗಿದ್ದು, ಮೇಲಕ್ಕೆ ಮತ್ತು ಕೆಳಕ್ಕೆ ಹಳಿಗಳೆರಡಕ್ಕೂ ಹಳಿ ಹೊಂದಲು ಅನುಕೂಲವಾಗಲಿದೆ ಎಂದು ಇಲ್ಲಿ ರೈಲ್ವೆ ಹೇಳಿದೆ.

25ರಿಂದ 65 ಮೀಟರ್ ಆಳ

25ರಿಂದ 65 ಮೀಟರ್ ಆಳ

ಈ ಸುರಂಗವು ನೆಲಮಟ್ಟದಿಂದ ಸುಮಾರು 25ರಿಂದ 65 ಮೀಟರ್ ಆಳದಲ್ಲಿರುತ್ತದೆ. ಮಹಾರಾಷ್ಟ್ರದ ಶಿಲ್ಪಾಟಾ ಬಳಿಯ ಪಾರ್ಸಿಕ್ ಬೆಟ್ಟದ ಕೆಳಗೆ 114 ಮೀಟರ್ ಆಳದ ನಿರ್ಮಾಣ ಸ್ಥಳವಾಗಿದೆ. ಈ ಸುರಂಗವನ್ನು ನಿರ್ಮಿಸಲು ಭಾರತವು ಹೊಸ ಆಸ್ಟ್ರಿಯನ್ ಸುರಂಗ ವಿಧಾನದಂತಹ ವಿಶ್ವದ ಇತ್ತೀಚಿನ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ ಇದಕ್ಕಾಗಿ 2022ರ ಸೆಪ್ಟೆಂಬರ್ 23 ರಂದು ಟೆಂಡರ್ ಅನ್ನು ಆಹ್ವಾನಿಸಲಾಗಿತ್ತು. ಅಂತಿಮವಾಗಿ ಫೆಬ್ರವರಿ 9ರಂದು ಬಿಡ್‌ಗೆ ತೆರೆಯಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+