ವಿಶ್ವಸಂಸ್ಥೆಯಲ್ಲಿ ಪಾಕ್ ವಿರುದ್ದ ಸುಷ್ಮಾ ಡೆಡ್ಲಿ ಸ್ಪೀಚ್: ಟ್ವಿಟ್ಟಿಗರ ಕರತಾಡನ
ವಿಶ್ವಸಂಸ್ಥೆಯ ಸಾಮಾನ್ಯ ಶೃಂಗಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಖಾತೆಯ ಸಚಿವ ಸುಷ್ಮಾ ಸ್ವರಾಜ್, ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡ ಪರಿ ವ್ಯಾಪಕ ಪ್ರಶಂಸೆಗೊಳಗಾಗಿದೆ. ವಿಶ್ವಸಂಸ್ಥೆಯಲ್ಲಿ ಪಾಕ್ ಬೆಂಡೆತ್ತಿದ ಸುಷ್ಮಾಗೆ ಟ್ವಿಟ್ಟಿಗರ ಉಘೇ.
ವಿಶ್ವಸಂಸ್ಥೆಯ ಸಾಮಾನ್ಯ ಶೃಂಗಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಖಾತೆಯ ಸಚಿವೆ ಸುಷ್ಮಾ ಸ್ವರಾಜ್, ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡ ಪರಿ ವ್ಯಾಪಕ ಪ್ರಶಂಸೆಗೊಳಗಾಗಿದೆ.
ಶನಿವಾರ (ಸೆ 23) ನಡೆದ ಸಭೆಯಲ್ಲಿ ಅಕ್ಷರಸಃ ಪಾಕ್ ವಿರುದ್ದ ಹರಿಹಾಯ್ದ ಸುಷ್ಮಾ, ನಾವು ವೈದರು, ಇಂಜಿನಿಯರ್ , ಐಐಟಿ, ಐಐಎಂಗಳನ್ನು ಸೃಷ್ಟಿಸುತ್ತಿದ್ದರೆ, ಪಾಕಿಸ್ತಾನ ಎಲ್ಇಟಿ ಮುಂತಾದ ಉಗ್ರ ಸಂಘಟನೆಗಳನ್ನು ಹುಟ್ಟುಹಾಕುತ್ತಿದೆ ಎಂದು ಸುಷ್ಮಾ ವಾಗ್ದಾಳಿ ನಡೆಸಿದ್ದರು.
ವಿಶ್ವಸಂಸ್ಥೆಯ ಸಭೆಯಲ್ಲಿ ಹಿಂದಿಯಲ್ಲಿ ಮಾತನಾಡಿ ಸೈ ಎನಿಸಿಕೊಂಡ ಸುಷ್ಮಾ, ತಮ್ಮ 35 ನಿಮಿಷದ ಭಾಷಣದಲ್ಲಿ ದೇಶದಲ್ಲಿನ ಬಡತನ ನಿರ್ಮೂಲಕ್ಕೆ ಮೋದಿ ಸರಕಾರ ತೆಗೆದುಕೊಂಡಿರುವ ಕ್ರಮದ ಬಗ್ಗೆ ವಿವರಿಸಿದರು.
ನಿರುದ್ಯೋಗ, ಮಹಿಳಾ ಸಬಲೀಕರಣ, ಮುದ್ರಾ ಯೋಜನೆ, ಉಜ್ವಲ ಯೋಜನೆಯಡಿ ಮಹಿಳೆಯರಿಗೆ ಫ್ರೀ ಎಲ್ಪಿಜಿ ಸಂಪರ್ಕ, ಜಿಎಸ್ಟಿ ಮುಂತಾದ ಮೋದಿ ಸರಕಾರದ ಜನಪರ ಕಾರ್ಯಕ್ರಮದ ಬಗ್ಗೆ ಸಭೆಯಲ್ಲಿ ಸುಷ್ಮಾ ಹೇಳಿಕೆ ನೀಡಿದರು.
ಭಯೋತ್ಪಾದನೆ ವಿಶ್ವಕ್ಕೆ ಭಾರೀ ದೊಡ್ಡ ಕಂಟಕ, ಉಗ್ರರನ್ನು ಸದೆಬಡೆಯಲು ಎಲ್ಲರೂ ಕೈಜೋಡಿಸಬೇಕು ಎಂದು ವಿಶ್ವಸಂಸ್ಥೆಯ ಸಭೆಯಲ್ಲಿ ಸುಷ್ಮಾ ವಿವರಿಸಿದ್ದಾರೆ. ಸುಷ್ಮಾ ಮಾಡಿದ ಭಾಷಣ ಅತ್ಯುತ್ತಮವಾಗಿತ್ತು ಎಂದು ಪ್ರಧಾನಿ ಮೋದಿ, ಸುಷ್ಮಾ ಭಾಷಣವನ್ನು ಮನಸಾರೆ ಹೊಗಳಿದ್ದಾರೆ. ವಿಶ್ವಸಂಸ್ಥೆಯಲ್ಲಿ ಪಾಕ್ ಬೆಂಡೆತ್ತಿದ ಸುಷ್ಮಾಗೆ ಟ್ವಿಟ್ಟಿಗರ ಉಘೇ..ಉಘೇ..

ವಿಶ್ವಸಂಸ್ಥೆಯ ಸಭೆಯಲ್ಲಿ ಸುಷ್ಮಾ ಭಾಷಣ
ಎರಡು ದಿನದ ಹಿಂದೆ ಇದೇ ಸಭೆಯಲ್ಲಿ ಪಾಕ್ ನಮ್ಮ ದೇಶದ ವಿರುದ್ದ ಹೇಳಿಕೆಯನ್ನು ನೀಡಿತ್ತು. ತನ್ನ ನೆಲದಿಂದ ಉಗ್ರರನ್ನು ಪೋಷಿಸಿ, ನೂರಾರು ಮುಗ್ದರನ್ನು ಬಲಿತೆಗೆದುಕೊಳ್ಳುವ ಪಾಕಿಸ್ತಾನ ನಮಗೆ ಮಾನವೀಯತೆ ಪಾಠ ಮಾಡಲು ಬರುತ್ತಿರುವುದು ಹಾಸ್ಯಾಸ್ಪದ. ಭಾರತ ಮತ್ತು ಪಾಕಿಸ್ತಾನಕ್ಕೆ ಒಂದೇ ದಿನ ಸ್ವಾತಂತ್ರ್ಯ ಬಂದಿದ್ದು, ಇಂದು ಭಾರತೀಯರು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದರೆ, ಪಾಕಿಸ್ತಾನ ಉಗ್ರ ಚಟುವಟಿಕೆಗೆ ಹೆಸರುವಾಸಿಯಾಗಿದೆ ಎಂದು ಸುಷ್ಮಾ ವಿಶ್ವಸಂಸ್ಥೆಯ ಸಭೆಯಲ್ಲಿ ಟೀಕಿಸಿದರು.

ಇದಕ್ಕೇ ಮಹಿಳಾ ಸಬಲೀಕರಣ ಎನ್ನುವುದು
ಇದಕ್ಕೇ ಮಹಿಳಾ ಸಬಲೀಕರಣ ಎನ್ನುವುದು. ಸುಷ್ಮಾ ಸ್ವರಾಜ್ ಭಾಷಣದಿಂದ ಕಾಂಗ್ರೆಸ್ ಬಹಳಷ್ಟು ಕಲಿಯಬೇಕಿದೆ ಎನ್ನುವ ಟ್ವೀಟುಗಳು

ರಾಹುಲ್ ಗಾಂಧಿ ತಾನು ಇನ್ನೂ ಪಳಗಿಲ್ಲ
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ತಾನು ಇನ್ನೂ ಪಳಗಿಲ್ಲ ಎಂದು ತೋರಿಸಿದ್ದಾರೆ. ಐಐಎಂ, ಐಐಟಿ ಭಾರತದ್ದು ಕಾಂಗ್ರೆಸ್ಸಿಗರದ್ದು ಅಲ್ಲ. ಸುಷ್ಮಾ, ದೇಶವನ್ನು ಪ್ರತಿನಿಧಿಸಿ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ್ದೇ ಹೊರತು, ಬಿಜೆಪಿಯನ್ನು ಪ್ರತಿನಿಧಿಸಿ ಅಲ್ಲ.

ಸುಷ್ಮಾ ಅವರದ್ದು ಅತ್ಯುತ್ತಮ ಭಾಷಣ ಎಂದ ಪ್ರಧಾನಿ
ಸುಷ್ಮಾ ಅವರದ್ದು ಅತ್ಯುತ್ತಮ ಭಾಷಣ ಎಂದು ಮೋದಿ ಹೊಗಳಿದ್ದಾರೆ. ಇದೇ ಕಾಂಗ್ರೆಸ್ಸಿಗರು ಈ ಹಿಂದೆ ಸುಷ್ಮಾ ಅವರ ರಾಜೀನಾಮೆಗೆ ಆಂಗೀಕರಿಸಿದ್ದರು.
|
ನಮಗೆ ನಿಮ್ಮ ಬಗ್ಗೆ ಹೆಮ್ಮೆಯಿದೆ ಮೇಡಂ
ಸುಷ್ಮಾ ಸ್ವರಾಜ್ ಅವರ ಡೆಡ್ಲಿ ಸ್ಪೀಚ್, ನಮಗೆ ನಿಮ್ಮ ಬಗ್ಗೆ ಹೆಮ್ಮೆಯಿದೆ ಮೇಡಂ ಎನ್ನುವ ಟ್ವೀಟ್












Click it and Unblock the Notifications