ಕನ್ಹಯ್ಯಗೆ ಭಗತ್ ಸಿಂಗ್ ಎಂದ ತರೂರ್‌ಗೆ ಟ್ವಿಟ್ಟರ್ ಮಂಗಳಾರತಿ

Subscribe to Oneindia Kannada

ನವದೆಹಲಿ, ಮಾರ್ಚ್, 21: ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಶಶಿ ತರೂರ್ ಬಿಜೆಪಿಯಿಂದ, ಟ್ವಿಟರ್ ನಲ್ಲಿ ಸಾರ್ವಜನಿಕರಿಂದ ತರಾಟೆಗೆ ಒಳಗಾಗಿದ್ದಾರೆ. ವಿವಾದಾತ್ಮಕ ಹೇಳಿಗೆ ನೀಡಿದ್ದ ತರೂರ್ ನಾಗರಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್ ಯು)ದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ನನ್ನು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರಿಗೆ ಹೋಲಿಕೆ ಮಾಡಿ ಹೇಳಿಕೆ ನೀಡದ್ದ ಕಾಂಗ್ರೆಸ್ ನಾಯಕ ಶಶಿ ತರೂರ್ ದೇಶದ ಕ್ಷಮೆಯಾಚಿಸಬೇಕು ಬಿಜೆಪಿ ಆಗ್ರಹಿಸಿದೆ.[ಎಬಿವಿಪಿ ತೊರೆದವರು ದೆಹಲಿಯಲ್ಲಿ ಮನುಸ್ಮೃತಿ ಸುಟ್ಟರು]

shashi

ದೇಶ ವಿರೋಧಿ ಘೋಷಣೆ ಕೂಗಿದ ವ್ಯಕ್ತಿಯನ್ನು ಒಬ್ಬ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರನಿಗೆ ಹೋಲಿಕೆ ಮಾಡಿದ್ದು ಸರಿಯೆ? ಎಂದು ಕೈಲಾಶ್ ವಿಜಯವರ್ಗಿಯಾ ಪ್ರಶ್ನೆ ಮಾಡಿದ್ದಾರೆ.

ಜೆಎನ್ ಯುನಲ್ಲಿ ಆಯೋಜಿಸಿದ್ದ ಜೆಎನ್ ಯು ಹಾಗೂ ರಾಷ್ಟ್ರೀಯತೆ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ಶಶಿತರೂರ್ ಕನ್ಹಯ್ಯ ಕುಮಾರ್ ನನ್ನು ಭಗತ್ ಸಿಂಗ್ ಅವರಿಗೆ ಹೋಲಿಕೆ ಮಾಡಿದ್ದು ವಿವಾದ ಎಚ್ಚಿಸಿತ್ತು.[ಮೋದಿ ಬಗ್ಗೆ ಜೈಲಿನಿಂದ ಬಿಡುಗಡೆಯಾದ ಕನ್ಹಯ್ಯಾ ಹೇಳಿದ್ದೇನು?]

ಶಶಿ ತೂರೂರ್ ಅವರ ಹೇಳಿಕೆಯನ್ನು ಕಂಡ ಸ್ವಾತಂತ್ರ್ಯ ಹೋರಾಟಗಾರರ ಆತ್ಮ ಮೇಲಿನಿಂದಲೇ ನೊಂದುಕೊಂಡಿತು. ಕಾಂಗ್ರೆಸ್ ಮೊದಲು ಭಗತ್ ಸಿಂಗ್ ಅವರನ್ನು ದೇಶ ವಿರೋಧಿ ಅಂತ ಹೇಳಿತು. ಈಗ ದೇಶ ವಿರೋಧಿ ಘೋಷಣೆ ಕೂಗಿದವನನ್ನು ದೇಶ ಪ್ರೇಮಿ ಅಂದಿದ್ದಲ್ಲದೇ ಭಗತ್ ಸಿಂಗ್ ಅವರಿಗೆ ಹೋಲಿಕೆ ಮಾಡಿದೆ ಎಂದು ಬಗೆಯಾಗಿ ಟ್ವಿಟರ್ ನಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Congress leader Shashi Tharoor on Monday came under sharp criticism over Twitter after he compared controversial JNUSU president Kanhaiya Kumar with freedom fighter Bhagat Singh. Taking a dig at ruling BJP over its stand on the JNU row, the former minister Tharoor on Monday said nationalism is now decided by whether one can say 'Bharat Mata Ki Jai' or not.
Please Wait while comments are loading...