ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಚೀನಾ ಭೇಟಿ ಬಗ್ಗೆ ಟ್ವಿಟ್ಟಗರ ಪ್ರತಿಕ್ರಿಯೆ ಹೀಗಿದೆ ನೋಡಿ

By Manjunatha
|
Google Oneindia Kannada News

ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ (ಏಪ್ರಿಲ್ 27) ಚೀನಾದ ವುಹಾನ್‌ ನಗರದಲ್ಲಿ 2 ದಿನಗಳ ಕಾಲ ನಡೆಯಲಿರುವ ಅನೌಪಚಾರಿಕ ಶೃಂಗಸಭೆ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಸಭೆಯಲ್ಲಿ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರೊಂದಿಗೆ ಅನೌಪಚಾರಿಕವಾಗಿಯೇ ಮಾತುಕತೆ ನಡೆಸಲಿದ್ದಾರೆ. ಈಗಾಗಲೇ ದೋಕ್ಲಾಂ ಸೇರಿದಂತೆ ಹಲವು ವಿವಾದಗಳು ಎರಡೂ ದೇಶಗಳ ನಡುವೆ ಇದ್ದು. ಉಭಯ ನಾಯಕರ ಈ ಭೇಟಿ ಮಹತ್ವದ್ದು ಎನಿಸಿದೆ.

ಪ್ರಧಾನಿ ಮೋದಿ ಬಗ್ಗೆ ಭಾರತೀಯರು ಹೆಮ್ಮೆ ಪಡುತ್ತಾರಂತೆ ಪ್ರಧಾನಿ ಮೋದಿ ಬಗ್ಗೆ ಭಾರತೀಯರು ಹೆಮ್ಮೆ ಪಡುತ್ತಾರಂತೆ

ಮೋದಿ ಅವರು ಏಪ್ರಿಲ್ 26 ರಂದೇ ಚೀನಾಕ್ಕೆ ತಲುಪಿದ್ದು, ಎರಡು ದಿನಗಳ ಕಾಲ ಚೀನಾದಲ್ಲಿ ವಿವಿಧ ಕಾರ್ಯಕ್ರಮ ಮತ್ತು ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಇದೊಂದು ಅನೌಪಚಾರಿಕ ಭೇಟಿ ಆಗಿರುವ ಎರಡೂ ರಾಷ್ಟ್ರಗಳೂ ಯಾವುದೇ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿವೆ ಆದರೂ ರಾಜಕಾರಣದ ದೃಷ್ಠಿಯಿಂದ ಮತ್ತು ಗಡಿ ಶಾಂತಿ ದೃಷ್ಠಿಯಿಂದ ಈ ಭೇಟಿ ಮಹತ್ವದ್ದೇ ಆಗಿದೆ.

'ಟೀಕೆಯೇ ನನ್ನ ಆರೋಗ್ಯದ ಗುಟ್ಟು': ಮೋದಿ ಸಂವಾದದ ಪ್ರಮುಖಾಂಶ'ಟೀಕೆಯೇ ನನ್ನ ಆರೋಗ್ಯದ ಗುಟ್ಟು': ಮೋದಿ ಸಂವಾದದ ಪ್ರಮುಖಾಂಶ

ಮೋದಿ ಅವರ ಪ್ರತಿ ಕದಲಿಕೆಯೂ ಚರ್ಚೆ ಆಗುವ ಟ್ವಿಟ್ಟರ್‌ನಲ್ಲಿ ಇಂತಹಾ ಮಹತ್ವದ ಭೇಟಿ ಚರ್ಚೆ ಆಗದೇ ಇರಲು ಸಾಧ್ಯವೆ. ಮೋದಿ ಅವರ ಚೀನಾ ಭೇಟಿಯ ಬಗ್ಗೆಯೂ ಪರ ವಿರೋಧ ಚರ್ಚೆಗಳು, ಕಾಲೆಳೆತಗಳು, ಹೊಗಳಿಕೆಗಳು ಬಂದಿವೆ.

'ಗಾಬರಿಯಾಗದೆ ಮಾತನಾಡಿ ನಾವಿದ್ದೇವೆ'

ಮೋದಿ ಅವರ ಚೀನಾ ಭೇಟಿ ಬಗ್ಗೆ ರಾಹುಲ್ ಅವರು ಒಂದು ರೀತಿಯ ಬೆಂಬಲವನ್ನೇ ಸೂಚಿಸಿದ್ದಾರೆ. ಮೋದಿ ಅವರಿಗೆ ಟ್ವೀಟ್ ಮಾಡಿರುವ ಅವರು, 'ನೀವು ಸ್ವಲ್ಪ ಗೊಂದಲಗೊಂಡತೆ ಕಾಣುತ್ತಿದ್ದೀರಿ, ಭಯಪಡಬೇಡಿ, ದೋಕಲಾ ಮತ್ತು ಚೈನಾ-ಪಾಕ್ ಕಾರಿಡಾರ್ ಕುರಿತು ನಿರ್ಭೀತಿಯಿಂದ ಮಾತನಾಡಿ, ನಿಮ್ಮ ಜೊತೆ ನಾವಿದ್ದೇವೆ' ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ಇದೊಂದು ಧ್ಯೇಯ ರಹಿತ ಭೇಟಿ ಎಂದೂ ಟೀಕಿಸಿದ್ದಾರೆ.

'ಭಾರತದ ಹಿತಕ್ಕೆ ಅನುಗುಣವಾದ ಪ್ರಶ್ನೆಗಳನ್ನು ಕೇಳಿ'

ಎಐಸಿಸಿ ಮುಖ್ಯಕಾರ್ಯದರ್ಶಿ ರಂದೀಪ್ ಸುರ್ಜೇವಾಲಾ ಅವರು ಮೋದಿ ಅವರ ಚೀನಾ ಭೇಟಿ ಬಗ್ಗೆ ಸರಣಿ ಟ್ವೀಟ್ ಮಾಡಿದ್ದು, ಮೋದಿ ಅವರು ಚೀನಾದಲ್ಲಿಎತ್ತಬೇಕಿರುವ ಪ್ರಶ್ನೆಗಳ ಮಾಹಿತಿ ನೀಡಿದ್ದಾರೆ. ಮೋದಿ ಅವರ ಚೀನಾ ಭೇಟಿ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರನ್ನು ಅಪ್ಪಿಕೊಳ್ಳುವುದಕ್ಕೆ ಮಾತ್ರವೆ ಕೊನೆಯಾಗದೆ ಭಾರತದ ಹಿತಾಸಕ್ತಿ ಕುರಿತ ಪ್ರಶ್ನೆಗಳನ್ನು ಅವರು ಕೇಳಬೇಕಿದೆ ಎಂದಿ ಟ್ವೀಟ್ ಮಾಡಿದ್ದಾರೆ.

ರಾಹುಲ್ ದೋಕಲಾ ವಿಷಯ ಚರ್ಚಿಸಿದ್ದರಾ?

ರಾಹುಲ್ ಗಾಂಧಿ ಚೀನಾ ಅಧಿಕಾರಿಗಳನ್ನು ಭೇಟಿ ಮಾಡಿದ್ದಾಗ, ದೋಕಲಾ ಬಗ್ಗೆ ಮಾತನಾಡಿದ್ದರಾ?, ಪಿಓಕೆ ಬಗ್ಗೆ ಚರ್ಚಿಸಿದ್ದರಾ ಎಂದು ಅಬು ಎನ್ನುವವರು ಟ್ವೀಟ್ ಮಾಡಿದ್ದಾರೆ. ರಾಹುಲ್ ಗಾಂಧಿ ಗುಪ್ತವಾಗಿ ಚೀನಾ ರಾಯಭಾರಿಯನ್ನು ಭೇಟಿ ಆಗಿದ್ದಾರೆ ಎಂಬ ಸುದ್ದಿ ಈ ಹಿಂದೆ ಹರಿದಾಡಿತ್ತು.

ಚೀನಾ ಅಧ್ಯಕ್ಷನನ್ನು ಏನೆನ್ನಬೇಕು

ಚೀನಾ ಅಧ್ಯಕ್ಷ ಷೀ ಜಿನ್‌ಪಿಂಗ್‌ ಅವರ ಹೆಸರನ್ನು ಹೇಗೆ ಕರೆಯಬೇಕೆಂಬ ಗೊಂದಲಕ್ಕೆ ಬಿದ್ದರಂತೆ. ಏಕೆಂದರೆ ಇಂಗ್ಲಿಷ್‌ನಲ್ಲಿ ಅವರ ಹೆಸರಿನ ಷೀ ಅಕ್ಷರಗಳನ್ನು (XI) ರೋಮನ್‌ ಅಂಕಿಗಳಂತೆ ಇರುವ ಕಾರಣ ಚೀನಾ ಅಧ್ಯಕ್ಷರನ್ನು 'ಇಲೆವೆನ್ ಜಿನ್‌ಪಿಂಗ್‌' ಎಂದರಂತೆ ಮೋದಿ.

ಇಬ್ಬರ ಭೇಟಿಯ ಉದ್ದೇಶ ಬೇರೆ ಬೇರೆ

ರಾಹುಲ್ ಗಾಂಧಿ ಅವರು ಚೀನಾಕ್ಕೆ ಭೇಟಿ ಇತ್ತಿದ್ದು ಕಮ್ಯೂನಿಸ್ಟ್‌ ಪಕ್ಷವನ್ನು ಬಲಪಡಿಸಲು ಆದರೆ ಮೋದಿ ಚೀನಾಕ್ಕೆ ಹೋಗಿರುವುದು ಭಾರತವನ್ನು ಬಲಪಡಿಸಲು ಎಂದು ಟ್ವೀಟ್ ಮಾಡಿದ್ದಾರೆ ಮೋದಿ ಅವರ ಭಕ್ತ ರಮನ್.

ಚೀನಾ-ಭಾರತ ನೋಡಿ ಕಲಿಯಿರಿ

ಇತ್ತ ಮೋದಿ-ಷೀ ಜಿಂಗ್‌ಪಿಂಗ್ ಭೇಟಿ ಮಾಡುವ ಸಮಯದಲ್ಲೇ ಉತ್ತರ ಮತ್ತು ದ.ಕೋರಿಯಾ ರಾಜ್ಯಗಳ ನಾಯಕರು ಐತಿಹಾಸಿಕ ಭೇಟಿ ಮಾಡುತ್ತಿದ್ದಾರೆ. ಇದನ್ನೇ ಇಟ್ಟುಕೊಂಡು ಮೋದಿ-ಷೀ ಜಿನ್‌ಪಿಂಗ್‌ ಅವರುಗಳು ಒಂದು ದಿನದಲ್ಲಿ 6 ಬಾರಿ ಭೇಟಿ ಮಾಡುತ್ತಿದ್ದಾರೆ. ಉತ್ತರ ಮತ್ತು ದಕ್ಷಿಣ ಕೊರಿಯಾ ನಾಯಕರು ಇವರನ್ನು ನೋಡಿ ಪ್ರೀತಿಸುವುದನ್ನು ನೋಡಿ ಕಲಿಯಬೇಕು ಎಂದಿದ್ದಾರೆ ರಾಹುಲ್ ಜಗ್ತಿಯಾನಿ.

ಅವರನ್ನು ಹೊಗಳಲು ಹೋಗಿದ್ದಾ

ಮೋದಿ ಅವರು ಅನೌಪಚಾರಿಕ ಶೃಂಗಸಭೆಯಲ್ಲಿ ಕೇವಲ ಷಿ ಜಿನ್‌ಪಿಂಗ್‌ ಅವರ ನಾಯಕತ್ವವನ್ನು ಹೊಗಳಿದ್ದು ಬಿಟ್ಟರೆ ಇನ್ನೇನು ಮಾತಾಡಿಲ್ಲ. ಬಹುಷಃ ಅವರು ತಮ್ಮ ಕೊನೆಯ ವಿದೇಶ ಪ್ರಯಾಣದ ಖುಷಿಯಲ್ಲಿದ್ದಾರೆ. ಅವರು ವಾಪಾಸ್ಸು ಬರುವಾಗ ಗುಜರಾತಿನ ಮುಖ್ಯಮಂತ್ರಿ ಆಗಿ ಬರುತ್ತಾರೆ ಎಂದು ಕಾಲೆಳಿದಿದ್ದಾರೆ ಜೈವೀರ್ ಶೇರ್‌ಗಿಲ್‌.

ಭರ್ಜರಿ ಕಾಲೆಳೆತ

ಚೀನಾಕ್ಕೆ ನಮ್ಮ ಕೋಪದ ಪರಿಚಯ ಮಾಡಬೇಕಿದೆ. ಅವರಿಗೆ 'ಲಾಲಾ ಆಂಕ್' ಕೆಂಗಣ್ಣು ಮಾಡಿಕೊಂಡು ಅವರಿಗೆ ಪ್ರತಿಕ್ರಿಯಿಸಬೇಕಿದೆ ಎಂದು ಪ್ರಧಾನಿ ಅವರು ಒಮ್ಮೆ ಹೋಗಿದ್ದರು. ಅದರ ಬಗ್ಗೆ ಟ್ವಿಟ್ಟಿಗರು ಚೆನ್ನಾಗಿ ಕಾಲೆಳೆದಿದ್ದಾರೆ. ಮೋದಿ ಅವರ ಕೆಂಗಣ್ಣು ಬೀರುತ್ತಿರುವ ತಿದ್ದಿದ ಚಿತ್ರ ಹಂಚಿಕೊಂಡು ತಮಾಷೆ ಮಾಡಿದ್ದಾರೆ.

English summary
Narendra Modi visits china to participate in un official Summit. Modi meeting China president Xi jinping also. Twitter has so much to say about this Modi- Xi jinping meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X