• search

ಮಾಮೂಲಿ ಟ್ರೈನೇ ಸುರಕ್ಷಿತವಾಗಿಲ್ಲ, ಬುಲೆಟ್ ಟ್ರೈನ್ ಬಿಡ್ತಾರಂತೆ!

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಆಗಸ್ಟ್ 05: ಮಧ್ಯಪ್ರದೇಶದ ಹಾರ್ದ ಸಮೀಪ ಸಂಭವಿಸಿದ ಅವಳಿ ರೈಲು ದುರಂತ ಸರ್ಕಾರಕ್ಕೆ ಪಾಠವಾಗಬೇಕಿದೆ. ಮೂಲ ಸೌಕರ್ಯ ಒದಗಿಸದ, ಸರಿಯಾದ ಹಳಿ ಪರೀಕ್ಷೆ ಮಾಡದ ಸರ್ಕಾರ ಬುಲೆಟ್ ಟ್ರೈನ್ ಬಿಡುತ್ತಾರೆ ಎಂದರೆ ಭಯವಾಗುತ್ತದೆ ಎಂದು ಸಾರ್ವಜನಿಕರು ಟ್ವೀಟ್ ಮಾಡಿದ್ದಾರೆ.

  ಎರಡು ರೈಲುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 10 ಮಹಿಳೆಯರು, 5 ಮಕ್ಕಳು ಸೇರಿದಂತೆ 30 ಮಂದಿ ಸಾವನ್ನಪ್ಪಿ 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ಲೆಕ್ಕ ಕೊಡುತ್ತಿದ್ದಾರೆ. ಅದರೆ, ಸರಿಯಾದ ಲೆಕ್ಕವನ್ನು ಮುಚ್ಚಿಡಲಾಗುತ್ತಿದೆ. ಸಾವಿನ ಸಂಖ್ಯೆ ಇನ್ನೂ ಅಧಿಕವಾಗಿದೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. [ಮಧ್ಯಪ್ರದೇಶ : ಅವಳಿ ರೈಲು ದುರಂತ ಅಪ್ಡೇಟ್ಸ್]

  ಮಳೆ ಕಾರಣ ಎನ್ನಬೇಡಿ: ಈ ಋತುವಿನಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಮಳೆ ಸುರಿಯುತ್ತಿದ್ದರೂ ಈ ಬಗ್ಗೆ ಮೊದಲೇ ಇಲಾಖೆಗೆ ಅರಿವಿರಬೇಕಿತ್ತು. ಮಳೆಯಿಂದ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿರಬಹುದು. ಆದರೆ, ಅಪಘಾತಕ್ಕೆ ಮಳೆಯೇ ಕಾರಣ ಎನ್ನುವುದು ಮೂರ್ಖತನದ ಮಾತು ಎಂದು ವಿಪಕ್ಷಗಳು ಸೇರಿದಂತೆ ಸಾರ್ವಜನಿಕರು ಕಿಡಿಕಾರಿದ್ದಾರೆ. ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಬಂದಿರುವ ಪ್ರತಿಕ್ರಿಯೆಗಳನ್ನು ಗಮನಿಸಿ... [ಅವಳಿ ರೈಲು ದುರಂತದ ಚಿತ್ರಗಳನ್ನು ನೋಡಿ]

  ರಕ್ಷಣಾ ಕಾರ್ಯಕ್ಕೆ ಭಾರಿ ಮಳೆ ಅಡ್ಡಿ

  ರಕ್ಷಣಾ ಕಾರ್ಯಕ್ಕೆ ಭಾರಿ ಮಳೆ ಅಡ್ಡಿ

  ಘಟನಾ ಸುದ್ದಿ ತಿಳಿಯುತ್ತಿದ್ದಂತೆಯೇ ಕಳೆದ ರಾತ್ರಿಯೇ ಎನ್‌ಡಿಆರ್‌ಎಫ್, ಆರ್‌ಪಿಎಫ್, ಸ್ಥಳೀಯ ಪೊಲೀಸರು ಕಾರ್ಯಾಚರಣೆಗೆ ಆಗಮಿಸಿದರು. ಆದರೆ ಭಾರೀ ಮಳೆ ಸುರಿಯುತ್ತಿದ್ದ ಪರಿಣಾಮ ಪರಿಹಾರ ಕಾರ್ಯಕ್ಕೆ ಅಡಚಣೆ ಉಂಟಾಯಿತು. ಬೆಳಗ್ಗೆ 5 ಗಂಟೆಯಿಂದ 10 ಗಂಟೆಯವರೆಗೂ ಕಾರ್ಯಾಚರಣೆ ನಡೆಸಿ ನೀರಿನಲ್ಲಿ ಬಿದ್ದಿದ್ದ ಬೋಗಿಗಳನ್ನು ಹೊರ ತೆಗೆಯಲಾಗಿದೆ.

  ಸಚಿವ ಸುರೇಶ್ ಪ್ರಭು ಅವರಿಂದ ಟ್ವೀಟ್

  ಸಚಿವ ಸುರೇಶ್ ಪ್ರಭು ಅವರಿಂದ ಟ್ವೀಟ್

  ಮಾಮೂಲಿ ಟ್ರೈನೇ ಸುರಕ್ಷಿತವಾಗಿಲ್ಲ

  ಮಾಮೂಲಿ ಟ್ರೈನೇ ಸುರಕ್ಷಿತವಾಗಿಲ್ಲ, ಬುಲೆಟ್ ಟ್ರೈನ್ ಬಿಡ್ತಾರಂತೆ, ಪ್ರಾಯೋಗಿಕವಾಗಿ ಸಾಧ್ಯವೇ ಮೊದಲು ಯೋಚಿಸಿ.

  ಈ ಅಪಘಾತಕ್ಕೆ ಏನು ಕಾರಣ?

  ಈ ಅಪಘಾತಕ್ಕೆ ಏನು ಕಾರಣ?, ಸುಮ್ಮನೆ ಕೆಸೆರೆರಚಾಟ ಬಿಡಿ, ಪರಿಹಾರದ ಬಗ್ಗೆ

  ಬೆಲೆ ಏರಿಕೆ ಜಾಸ್ತಿ ಮಾಡ್ತಾರೆ ಬಿಟ್ರೆ ಸೇವೆ ಏನಿಲ್ಲ

  ಮೋದಿ ಅವರು ರೈಲು ಪ್ರಯಾಣ ದರ ಏರಿಕೆ ಜಾಸ್ತಿ ಮಾಡ್ತಾರೆ, ರೈಲು ನಿಲ್ದಾಣಗಳಲ್ಲಿ ಮೂಲ ಸೌಕರ್ಯವೇ ಇಲ್ಲ, ಕುಡಿಯುವ ನೀರನ್ನು ದುಡ್ಡು ಕೊಟ್ಟು ಪಡೆಯುವಂತೆ ಒತ್ತಡ ಹೇರಲಾಗುತ್ತಿದೆ.

  ಅಪಘಾತಗಳ ದುರಂತ ಚಿತ್ರಣ

  ಅಪಘಾತಗಳ ದುರಂತ ಚಿತ್ರಣ, ಪರಿಣಾಮ ಸರಿಯಾಗಿ ಜನರಿಗೆ ತಲುಪುವುದೇ ಇಲ್ಲ, ಸಾವಿನ ಸಂಖ್ಯೆ, ಪರಿಹಾರ ಎಲ್ಲವೂ ಸರಿಯಾಗಿ ಬಹಿರಂಗವಾಗುವುದಿಲ್ಲ.

  ಮಧ್ಯಪ್ರದೇಶ ದುರಂತದ ಸಹಾಯವಾಣಿ

  ಮಧ್ಯಪ್ರದೇಶ ದುರಂತದ ಸಹಾಯವಾಣಿ ಸಂಖ್ಯೆಗಳನ್ನು ಟ್ವೀಟ್ ಮಾಡಿದ ಸಾರ್ವಜನಿಕರು.

  ಕೇಂದ್ರ ವಿಭಾಗದ ರೈಲ್ವೆ ಇಂದ ಮಾಹಿತಿ

  ಕೇಂದ್ರ ವಿಭಾಗದ ರೈಲ್ವೆಯಿಂದ ಮಾರ್ಗ ಬದಲಾವಣೆ ಹಾಗೂ ಇನ್ನಿತರ ಉಪಯುಕ್ತ ಮಾಹಿತಿ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Twitter reaction to Madhya Pradesh Express train tragedy. Varanasi-bound Kamayani Express and Mumbai-bound Janata Express derailed while crossing a bridge on the Machak River between Khirkiya and Harda Stations in Madhya Pradesh.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more