ನಿರ್ಭಯ ಆತ್ಮಕ್ಕೆ ಈಗ ಶಾಂತಿ ಸಿಕ್ಕಿದೆ : ಟ್ವೀಟ್ಸ್
ನವದೆಹಲಿ, ಸೆ.13: ಪ್ಯಾರ ಮೆಡಿಕಲ್ ವಿದ್ಯಾರ್ಥಿನಿ ನಿರ್ಭಯಾ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಪ್ರಕಟಗೊಳ್ಳುತ್ತಿದ್ದಂತೆ ಸಂತ್ರಸ್ತೆಯ ತಂದೆ ಹರ್ಷೋದ್ಗಾರ ವ್ಯಕ್ತಪಡಿಸಿದ್ದಾರೆ. 'ನಾನು ತುಂಬಾ ಸಂತೋಷಗೊಂಡಿದ್ದೇನೆ. ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ' ಎಂದು ಪ್ರತಿಕ್ರಿಯಿಸಿದ್ದಾರೆ.
ಅಪರಾಧಿಗಳಿಗೆ ಜೀವಿಸುವ ಯಾವ ಹಕ್ಕು ಇಲ್ಲ. ಅವರನ್ನು ತಕ್ಷಣವೇ ನೇಣಿಗೆ ಹಾಕಿ ಎಂದು ನಿರ್ಭಯಾ ತಂದೆ ಸೇರಿದಂತೆ ಅನೇಕರು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಆಗ್ರಹಿಸಿದ್ದರು. ಅದರಂತೆ, ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಯೋಗೀಶ್ ಖನ್ನಾ ಅವರು ತೀರ್ಪು ನೀಡಿದ್ದಾರೆ.
23 ವರ್ಷದ ವಿದ್ಯಾರ್ಥಿನಿ ಮೇಲೆ 6 ಮಂದಿ ದುಷ್ಟರು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದರು. ಘಟನೆಯ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಬಾಧಿತೆ ನಿರ್ಭಯಾ/ದಾಮಿನಿ ಸಿಂಗಾಪುರದಲ್ಲಿ ಮೃತಪಟ್ಟಿದ್ದರು. ದೆಹಲಿ ಪೊಲೀಸರು ಒಟ್ಟು ಆರು ಮಂದಿ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. ಆರು ಜನರಲ್ಲಿ ರಾಮ್ ಸಿಂಗ್ ಎಂಬಾತ ಜೈಲಿನಲ್ಲಿ ಮೃತಪಟ್ಟಿದ್ದರೆ, ಮತ್ತೊಬ್ಬ ಬಾಲಾಪರಾಧಿ ಎಂದು ಪರಿಗಣಿಸಲಾಗಿದೆ. [ದೋಷಿಗಳ ಪರಿಚಯ ಇಲ್ಲಿದೆ]
ಸಾಮೂಹಿಕ ಅತ್ಯಾಚಾರಗೈದು ಅಮಾನುಷವಾಗಿ ಹತ್ಯೆ ಮಾಡಿದ ನಾಲ್ಕು ಮಂದಿ ಆರೋಪಿಗಳಿಗೆ ಅಜೀವ ಕಾರಾಗೃಹ ಶಿಕ್ಷೆ ನೀಡಬೇಕೇ ಅಥವಾ ಗಲ್ಲು ಶಿಕ್ಷೆ ನೀಡಬೇಕೇ ಎನ್ನುವ ಬಗ್ಗೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಚರ್ಚೆ ನಡೆದಿತ್ತು. ಟ್ವಿಟ್ಟರ್ ನಲ್ಲಿ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ತೀರ್ಪಿಗೆ ಸಂಬಂಧಿಸಿದಂತೆ ಬಂದಿರುವ ಪ್ರತಿಕ್ರಿಯೆಗಳ ಅಸಮಗ್ರ ಸಂಗ್ರಹ ಇಲ್ಲಿದೆ ನೋಡಿ.

ಶಿಕ್ಷೆ ಪಡೆದ ಅಪರಾಧಿಗಳು
ದೆಹಲಿಯಲ್ಲಿ ಪೈಶಾಚಿಕ ಕೃತ್ಯ ಎಸಗಿದ ತಪ್ಪಿತಸ್ಥರಾದ ರಾಮ್ ಸಿಂಗ್ (ಮೃತಪಟ್ಟಿದ್ದಾನೆ), ಮುಕೇಶ್ ಸಿಂಗ್, ವಿಜಯ್ ಶರ್ಮ, ಅಕ್ಷಯ್ ಠಾಕೂರ್, ಪವನ್ ಗುಪ್ತಾ ತಪ್ಪಿತಸ್ಥರಾಗಿದ್ದಾರೆ. ಮತ್ತೊಬ್ಬ ಬಾಲಾಪರಾಧಿಯಾಗಿದ್ದು ಆತ ಕೂಡಾ ತಪ್ಪಿತಸ್ಥ ಎಂದು ಕೋರ್ಟ್ ಘೋಷಿಸಿತ್ತು. ಇಂದು ನಾಲ್ವರಿಗೂ ಗಲ್ಲು ಶಿಕ್ಷೆ ಪ್ರಕಟಿಸಲಾಗಿದೆ.
|
ನವೀನ್ ಜಿಂದಾಲ್ ಟ್ವೀಟ್
ನಿರ್ಭಯಾಗೆ ಇಂದು ನ್ಯಾಯ ಸಿಕ್ಕಿದೆ ಎಂದ ಕಾಂಗ್ರೆಸ್ಸಿಗ ನವೀನ್ ಜಿಂದಾಲ್

ಪ್ರಧಾನಿ ಸಚಿವಾಲಯ
ನೋ ಟ್ವೀಟ್ಸ್; ಇಡೀ ದೇಶವೇ ಹತಭಾಗ್ಯೆ ನಿರ್ಭಯಾ ಪರವಾಗಿ ಟ್ವೀಟ್ ಮಾಡುತ್ತಿದ್ದಾರೆ. ಪ್ರಧಾನಿ ಸಚಿವಾಲಯದಿಂದ ಯಾವುದೇ ಟ್ವೀಟ್ ಈ ಸಮಯಕ್ಕೆ (3.21) ಬಂದಿಲ್ಲ. ಕೊನೆ ಟ್ವೀಟ್ ಇಂದಿರಾಗಾಂಧಿ ಸದ್ಭಾವನಾ ಪ್ರಶಸ್ತಿ ನೀಡಿಕೆ ಬಗ್ಗೆ ಹಾಕಲಾಗಿತ್ತು.
|
ಗೃಹಸಚಿವರ ಹೇಳಿಕೆ
ನಿರ್ಭಯಾ ಕೇಸಿನ ತೀರ್ಪು ಹೊರ ಬಂದ ಮೇಲೆ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಪ್ರತಿಕ್ರಿಯೆ ಇಲ್ಲಿದೆ
|
ಡಿಫೆನ್ಸ್ ಲಾಯರ್ ವಿರುದ್ಧ
ಡಿಫೆನ್ಸ್ ಲಾಯರ್ ವಿರುದ್ಧ ಸಾರ್ವಜನಿಕರು ಹರಿಹಾಯ್ದಿದ್ದಾರೆ.
|
ಪೂನಂ ಪಾಂಡೆ ಟ್ವೀಟ್
ಬಾಲಿವುಡ್ ಬೆಡಗಿ ಪೂನಂ ಪಾಂಡೆ ಅವರು ಸರಣಿ ಟ್ವೀಟ್ ಮಾಡಿ... ಅಪರಾಧಿಗಳಿಗೆ ಸಂತ್ರಸ್ತೆ ಪಟ್ಟ ನೋವಿನ ಅರಿವಾಗಬೇಕು, ಗಲ್ಲುಶಿಕ್ಷೆ ಸಾಲದು ಎಂದಿದ್ದಾರೆ. 9 ತಿಂಗಳು ಕಾಲ ನ್ಯಾಯ ವಿಳಂಬವಾಗಿದೆ, ಯಮರಾಜ ಕಾದಿದ್ದಾನೆ ಎಂದು ಟ್ವೀಟ್ ಮಾಡಿದ್ದಾರೆ.

ಡಿಫೆನ್ಸ್ ಲಾಯರ್ ಎಪಿ ಸಿಂಗ್ ಹೇಳಿಕೆ
ನನ್ನ ಮಗಳು ಏನಾದರೂ ಮದುವೆಗೆ ಮುಂಚೆ ರಾತ್ರಿ ವೇಳೆ ಗೆಳೆಯನೊಡನೆ ಸುತ್ತಾಡಿದ್ದರೆ ಅವಳನ್ನು ಸುಟ್ಟು ಹಾಕುತ್ತಿದ್ದೆ ಎಂದು ಹೇಳಿಕೆ ನೀಡಿರುವುದು ಖಂಡನೆಗೆ ಗುರಿಯಾಗಿದೆ.
|
ನಟಿ ಮಾಳವಿಕ ಅವಿನಾಶ್
ನಟಿ ಮಾಳವಿಕ ಅವಿನಾಶ್ ಅವರು ಟ್ವೀಟ್ ಮಾಡಿ ನಮಗೆ ಕೊನೆಗೂ ಜಯ ಸಿಕ್ಕಿದೆ ಎಂದು ಜಡ್ಜ್ ಖನ್ನಾಗೆ ಥ್ಯಾಂಕ್ಸ್ ಹೇಳಿದ್ದಾರೆ.
|
ಸುಚೇತಾ ದಲಾಲ್ ಟ್ವೀಟ್ಸ್
ದಯವಿಟ್ಟು ಇನ್ನು ವಿಳಂಬ ಮಾಡದೇ ಅಪರಾಧಿಗಳನ್ನು ತಕ್ಷಣವೇ ಗಲ್ಲಿಗೇರಿಸಿ
|
ಬೇರೆ ಕೇಸ್ ಕಥೆಯೇನು?
ದೇಶದಲ್ಲಿ ವಿಳಂಬಗೊಂಡಿರುವ ಇತರೆ ಅತ್ಯಾಚಾರ ಪ್ರಕರಣಗಳನ್ನು ಆದಷ್ಟು ಬೇಗೆ ಇತ್ಯರ್ಥಗೊಳಿಸಿ
|
ಸೀತಾರಾಮ್ ಟ್ವೀಟ್ಸ್
ದೆಹಲಿ ಅತ್ಯಾಚಾರ ಪ್ರಕರಣದ ತೀರ್ಪು ಜಗತ್ತಿಗೆ ದೊಡ್ಡ ಸಂದೇಶ ನೀಡಿದೆ.
|
ಮೋದಿ ಭಜನೆ
ಸೆ.13 ಅನೇಕ ಪ್ರಮುಖ ಸುದ್ದಿಗಳು ಘಟಿಸುತ್ತಿರುವುದರಿಂದ ಅತ್ಯಾಚಾರ ಪ್ರಕರಣದ ತೀರ್ಪು ಸ್ವಾಗತಿಸಿದ ಮೋದಿ ಅಭಿಮಾನಿಗಳಿಂದ ಬಂದ ಟ್ವೀಟ್
|
ಡಿಫೆನ್ಸ್ ಲಾಯರ್ ಬಗ್ಗೆ
ಡಿಫೆನ್ಸ್ ಲಾಯರ್ ಎಪಿ ಸಿಂಗ್ ಅವರನ್ನು ಬಿಗ್ ಬಾಸ್ 7 ಗೆ ಕಳಿಸಿ
|
RGV ಟ್ವೀಟ್ ಗೆ ಉತ್ತರ
ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿ ಎಂದು RGV ಟ್ವೀಟ್ ಮಾಡಿದ್ದಕ್ಕೆ ಉತ್ತರವಾಗಿ ಬಂದ ಟ್ವೀಟ್
|
ಡಿಫೆನ್ಸ್ ಲಾಯರ್ ಬಗ್ಗೆ
ಡಿಫೆನ್ಸ್ ಲಾಯರ್ ಎಪಿ ಸಿಂಗ್ ಬಗ್ಗೆ ಬಂದಿರುವ ಅಸಹನೀಯ ಟ್ವೀಟ್
|
ರಮೇಶ್ ಅರವಿಂದ್ ಟ್ವೀಟ್
ನಟ ರಮೇಶ್ ಅರವಿಂದ್ ಅವರು ಟ್ವೀಟ್ ಮಾಡಿದ್ದು ಹೀಗೆ











Click it and Unblock the Notifications