ದೆಹಲಿ ಗ್ಯಾಂಗ್ ರೇಪ್ ದೋಷಿಗಳ ಪರಿಚಯ

ಬೆಂಗಳೂರು, ಸೆ.10: 23 ವರ್ಷದ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಚಲಿಸುತ್ತಿದ್ದ ಬಸ್ಸಿನಲ್ಲಿ ಡಿಸೆಂಬರ್ 16ರಂದು ಅತ್ಯಾಚಾರ ಎಸಗಿದ್ದ ಆರೋಪಿಗಳು ದೋಷಿಗಳು ಎಂದು ದೆಹಲಿ ಕೋರ್ಟ್ ಘೋಷಿಸಿದೆ.

6 ಮಂದಿ ದುಷ್ಟರು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದರು. ಘಟನೆಯ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಬಾಧಿತೆ ನಿರ್ಭಯಾ/ದಾಮಿನಿ ಸಿಂಗಾಪುರದಲ್ಲಿ ಮೃತಪಟ್ಟಿದ್ದರು. ದೆಹಲಿ ಪೊಲೀಸರು ಒಟ್ಟು ಆರು ಮಂದಿಯ ವಿರುದ್ಧ ಸದರಿ ವಿದ್ಯಾರ್ಥಿನಿಯ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಸಂಬಂಧ ಫೆ. 2ರಂದು ಆರೋಪಪಟ್ಟಿ ದಾಖಲಿಸಿದ್ದರು.

ಈ ಪೈಕಿ ನಾಲ್ವರು ಆರೋಪಿಗಳು ತಪ್ಪಿತಸ್ಥರು ಎಂದು ಹೈಕೋರ್ಟ್ ಪ್ರಕಟಿಸಿದ್ದು, ಪೂರ್ಣ ಪ್ರಮಾಣದ ಶಿಕ್ಷೆ ಬುಧವಾರ(ಸೆ.12) ತಿಳಿಯಲಿದೆ. ಹೆಚ್ಚಿನ ವಿವರ ಇಲ್ಲಿ ಓದಿ..

ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ಇಡೀ ದೇಶವನ್ನು ಒಗ್ಗೂಡಿಸಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಖಂಡಿಸುವಂತೆ ಮಾಡಿತ್ತು. ದೆಹಲಿಯಲ್ಲಿ ಪೈಶಾಚಿಕ ಕೃತ್ಯ ಎಸಗಿದ ತಪ್ಪಿತಸ್ಥರಾದ ರಾಮ್ ಸಿಂಗ್, ಮುಕೇಶ್ ಸಿಂಗ್, ವಿಜಯ್ ಶರ್ಮ, ಅಕ್ಷಯ್ ಠಾಕೂರ್, ಪವನ್ ಗುಪ್ತಾ ಅವರ ಸಂಕ್ಷಿಪ್ತ ಪರಿಚಯ ಇಲ್ಲಿದೆ...

ರಾಮ್ ಸಿಂಗ್

ರಾಮ್ ಸಿಂಗ್

ಈ ಪ್ರಕರಣದಲ್ಲಿ ಮೊದಲು ಸಿಕ್ಕಬಿದ್ದವ ರಾಮ್ ತಿಹಾರ್ ಜೈಲಿನಲ್ಲಿದ್ದ. ರಾಮ್ ಸಿಂಗ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಕೀಲರು ಇದು ಕೊಲೆ ಎಂದು ವಾದಿಸುತ್ತಲೇ ಇದ್ದಾರೆ.

33 ವರ್ಷದ ವಿದುರನಾಗಿದ್ದ ರಾಮ್, ರಾವಿ ಡಾಸ್ ನ ಸ್ಲಂ ಕಾಲೋನಿಯವನು. ಘಟನೆ ನಡೆದಾಗ ಬಸ್ ಓಡಿಸಿದ್ದು ಇದೇ ರಾಮ್ ಸಿಂಗ್ ಎನ್ನಲಾಗಿದೆ. ಕುಡುಕನಾಗಿದ್ದ ರಾಮ್ ಅಕ್ಕಪಕ್ಕದ ಮನೆ ಜತೆ ಸದಾ ಜಗಳ ಕಾಯುತ್ತಿದ್ದ.

ಈತನ ಕುಟುಂಬ ರಾಜಸ್ಥಾನದಿಂದ ದೆಹಲಿಗೆ ಉದ್ಯೋಗ ಅರಸಿ ವಲಸೆ ಬಂದು 20 ವರ್ಷ ಕಳೆದಿದೆ. ಪ್ರೈಮರಿ ಸ್ಕೂಲ್ ಓದಿದ್ದ ರಾಮ್ ಗೆ ಸಂಗೀತ , ಹಾಡುಗಾರಿಕೆ ಇಷ್ಟವಾಗುತ್ತಿತ್ತು. 2009ರಲ್ಲಿ ಒಂದು ಕೈ ಊನ ಮಾಡಿಕೊಂಡಿದ್ದ ರಾಮ್ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಆತನ ಅಪ್ಪ ಮಂಗೆಲಾಲ್ ಹೇಳಿದ್ದಾರೆ.

ಮುಕೇಶ್ ಸಿಂಗ್

ಮುಕೇಶ್ ಸಿಂಗ್

ರಾಮ್ ಸಿಂಗ್ ತಮ್ಮನಾದ ಮುಕೇಶ್ ಗೆ ಇನ್ನೂ 20ರ ಹರೆಯ. ಅಣ್ಣನ ಜತೆ ಕ್ಲೀನರ್ ಆಗಿ ಬಸ್ ನಲ್ಲೇ ಇರುತ್ತಿದ್ದ. ಘಟನೆ ಸಂದರ್ಭದಲ್ಲಿ ರಾಮ್ ಹಾಗೂ ಮುಕೇಶ್ ಇಬ್ಬರು ಡ್ರೈವರ್ ಗಳಾಗಿ ಬಸ್ ಚಲಿಸಿದ್ದಾರೆ. ನಂತರ ಕಬ್ಬಿಣದ ರಾಡ್ ನಿಂದ ವಿದ್ಯಾರ್ಥಿನಿ ಗೆಳೆಯನ ಮೇಲೆ ದಾಳಿ ನಡೆಸಿದ್ದಾನೆ.

ವಿನಯ್ ಶರ್ಮ

ವಿನಯ್ ಶರ್ಮ

20 ವರ್ಷದ ಜಿಮ್ ಸಹಾಯಕ ಹಾಗೂ ಫಿಟ್ನೆಸ್ ತರಬೇತುದಾರ ಈತ ಕೂಡಾ ರಾಮ್ ಇದ್ದ ಸ್ಲಮ್ ನಿವಾಸಿ. ವಿಶ್ವವಿದ್ಯಾಲಯದ ಪ್ರಥಮ ವರ್ಷದ ಪರೀಕ್ಷೆ ಬರೆಯಲು ಅನುಮತಿ ಕೂಡಾ ಕೋರಿದ್ದ. ಆದರೆ, ಜೈಲಿನಲ್ಲೇ ಕುಳಿತು ಪರೀಕ್ಷೆ ಬರೆಯುವಂತೆ ಜಡ್ಜ್ ಆದೇಶಿಸಿದ್ದರು.

ಘಟನೆ ನಡೆದಾಗ ಬಸ್ ನಲ್ಲಿರಲಿಲ್ಲ ನಾನು ಸಹ ಆರೋಪಿ ಪವನ್ ಗುಪ್ತಾ ಜತೆ ಸಂಗೀತ ಕಾರ್ಯಕ್ರಮಕ್ಕೆ ಹೋಗಿದ್ದೆ ಎಂದು ಕೋರ್ಟಿನಲ್ಲಿ ವಿನಯ್ ಹೇಳಿಕೆ ನೀಡಿದ್ದಾನೆ.

ಅಕ್ಷಯ್ ಠಾಕೂರ್

ಅಕ್ಷಯ್ ಠಾಕೂರ್

28 ವರ್ಷದ ಅಕ್ಷಯ್ ಠಾಕೂರ್ ಬಸ್ ನಲ್ಲಿ ಹೆಲ್ಪರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಬಿಹಾರ ಮೂಲದ ಅಕ್ಷಯ್ ನನ್ನು ಡಿಸೆಂಬರ್ 21 ರಂದು ಬಂಧಿಸಲಾಗಿತ್ತು.
ಲಭ್ಯ ಮಾಹಿತಿ ಪ್ರಕಾರ ಕಳೆದ ವರ್ಷ ದೆಹಲಿಗೆ ಶಿಫ್ಟ್ ಆದ ಅಕ್ಷಯ್ ಗೆ ಮದುವೆಯಾಗಿ ಒಂದು ಗಂಡು ಕೂಸಿದೆ. ಈತನ ಕುಟುಂಬ ಬಿಹಾರದಲ್ಲಿದೆ.

ಘಟನೆ ನಡೆದ ಸಂದರ್ಭದಲ್ಲಿ ನಾನು ನನ್ನ ಹಳ್ಳಿಗೆ ಹೋಗಿದ್ದೆ ಎಂದು ವಾದಿಸಿದ್ದಾನೆ.

ಪವನ್ ಗುಪ್ತಾ

ಪವನ್ ಗುಪ್ತಾ

19 ವರ್ಷದ ಪವನ್ ಗುಪ್ತಾ ಹಣ್ಣು ವ್ಯಾಪಾರಿಯಾಗಿದ್ದಾನೆ. ಘಟನೆ ನಡೆದ ಸಂದರ್ಭದಲ್ಲಿ ನಾನು ಬಸ್ ನಲ್ಲಿರಲಿಲ್ಲ. ವಿನಯ್ ಶರ್ಮ ಜತೆ ಸಂಗೀತ ಕಾರ್ಯಕ್ರಮಕ್ಕೆ ಹೋಗಿದ್ದೆ ಎಂದು ಕೋರ್ಟಿನಲ್ಲಿ ಹೇಳಿದ್ದಾನೆ.

ಇವನ ತಂದೆ ಹೀರಾ ಲಾಲ್ ಕೋರ್ಟಿನಲ್ಲಿ ಸಾಕ್ಷಿ ಹೇಳಲು ಬಂದು ನನ್ನ ಮಗ ಅಮಾಯಕ ಎಂದಿದ್ದರು.

ಘಟನೆ ನಡೆದ ದಿನ ವ್ಯಾಪಾರ ಮುಗಿಸಿ ಮನೆ ಕಡೆಗೆ ತೆರಳಿದೆ ದಾರಿಯಲ್ಲಿ ಆಲ್ಕೋಹಾಲ್ ಸೇವಿಸಿ ಚಿಕನ್ ತಿಂದೆ. ನಂತರ ಪಾರ್ಕಿನಲ್ಲಿ ಮ್ಯೂಸಿಕ್ ಪೋಗ್ರಾಂಗೆ ವಿನಯ್ ಶರ್ಮ ಜತೆಗೆ ಹೋಗಿದ್ದೆ ಎಂದು ಹೇಳಿಕೆ ನೀಡಿದ್ದ

ಆಪ್ರಾಪ್ತ ತಪ್ಪಿತಸ್ಥ

ಆಪ್ರಾಪ್ತ ತಪ್ಪಿತಸ್ಥ

ಆರನೇ ಆರೋಪಿಯ ಹೆಸರನ್ನು ಹೆಸರಿಸಲು ಕಾನೂನಿನ ತೊಡಗಿದೆ. ಘಟನೆ ನಡೆದ ಸಂದರ್ಭದಲ್ಲಿ ಆತನಿಗೆ 17 ವರ್ಷ ವಯಸ್ಸಾಗಿತ್ತು. ಉತ್ತರ ಪ್ರದೇಶ ಮೂಲದ ಈತ 11ನೇ ವರ್ಷಕ್ಕೆ ಹಳ್ಳಿ ಬಿಟ್ಟು ದಿಲ್ಲಿ ಕಡೆಗೆ ಬಂದಿದ್ದ.

ಆರು ಮಕ್ಕಳಲ್ಲಿ ಈತನೇ ದೊಡ್ಡವನು. ದೆಹಲಿ ತಲುಪಿದ ಮೇಲೆ ಕುಟುಂಬದ ಜತೆ ಸಂಪರ್ಕ ಇಟ್ಟುಕೊಂಡಿಲ್ಲ ಎನ್ನಲಾಗಿದೆ. ಈತನ ತಂದೆ ಮಾನಸಿಕ ಅಸ್ವಸ್ಥರಾಗಿದ್ದಾರೆ. ಮನೆಗೆ ಹಣ ಕಳಿಸುತ್ತಿದ್ದ ಈತ ಇತ್ತೀಚೆಗೆ ನಿಲ್ಲಿಸಿಬಿಟ್ಟಿದ್ದ

ರಸ್ತೆ ಬದಿ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ ಈತ ಬಸ್ ಟ್ರಾವೆಲ್ಸ್ ಕಂಪನಿ ಜತೆ ಕೆಲ್ಸ ಮಾಡಲು ಶುರುಮಾಡಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+