Tirupati May Tickets: ತಿರುಪತಿ ತಿರುಮಲ ಶ್ರೀವಾರಿ ಸೇವಾ ಟಿಕೆಟ್; ಮೇ ತಿಂಗಳ ಕೋಟಾ ಬಿಡುಗಡೆ
ತಿರುಮಲ, ಫೆಬ್ರವರಿ.18: ತಿರುಮಲ ಶ್ರೀವಾರಿ ಆರ್ಜಿತ ಸೇವಾ ಟಿಕೆಟ್‌ಗಾಗಿ ಮೇ ತಿಂಗಳ ಕೋಟಾವನ್ನು ಫೆಬ್ರವರಿ 19 ರಂದು ಬೆಳಗ್ಗೆ 10 ಗಂಟೆಗೆ (ತಿರುಮಲ ತಿರುಪತಿ ದೇವಸ್ಥಾನಂ) ಟಿಟಿಡಿ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಿದೆ. ಭಕ್ತರು ಈ ಸೇವಾ ಟಿಕೆಟ್‌ಗಳ ಎಲೆಕ್ಟ್ರಾನಿಕ್ ಆನ್‌ಲೈನ್ ನೋಂದಣಿಯನ್ನು ಫೆಬ್ರವರಿ 21ರ ಬೆಳಗ್ಗೆ 10 ಗಂಟೆಯವರೆಗೆ ಮಾಡಬಹುದು.
ಫೆಬ್ರವರಿ 21ರ ಅದೇ ದಿನ ಮಧ್ಯಾಹ್ನ 12 ಗಂಟೆಗೆ ಲಕ್ಕಿಡಿಪ್‌ನಲ್ಲಿ ತಿರುಮಲ ಶ್ರೀವಾರಿ ಆರ್ಜಿತ ಸೇವಾ ಟಿಕೆಟ್ ಹಂಚಿಕೆ ಮಾಡಲಾಗುತ್ತದೆ. ಈ ಟಿಕೆಟ್ ಪಡೆದವರು ಹಣ ಪಾವತಿಸಿ ತಮ್ಮ ಬುಕ್ಕಿಂಗ್ ಅಂತಿಮಗೊಳಿಸಬೇಕು. ಫೆಬ್ರವರಿ 22 ರಂದು ವರ್ಚುವಲ್ ಸೇವೆಗಳ ಕೋಟಾ ಬಿಡುಗಡೆಯಾಗಲಿದೆ.

ಕಲ್ಯಾಣೋತ್ಸವ, ಉಂಜಲ್ ಸೇವೆ, ಆರ್ಜಿತ ಬ್ರಹ್ಮೋತ್ಸವಂ, ಸಹಸ್ರದೀಪಾಲಂಕರ ಸೇವಾ ಟಿಕೆಟ್‌ಗಳನ್ನು ಫೆಬ್ರವರಿ 22 ರಂದು ಬೆಳಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಫೆಬ್ರವರಿ 22 ರಂದು ಮಧ್ಯಾಹ್ನ 3 ಗಂಟೆಗೆ ವರ್ಚುವಲ್ ಸೇವೆಗಳಿಗಾಗಿ ಮೇ ಕೋಟಾ ಮತ್ತು ಅವುಗಳ ವೀಕ್ಷಣೆಯ ಸ್ಲಾಟ್‌ಗಳನ್ನು ಟಿಟಿಡಿ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡುತ್ತದೆ.
ಶ್ರೀವಾಣಿ ಟಿಕೆಟ್ ಆನ್‌ಲೈನ್ ಕೋಟಾ: ಮೇ ತಿಂಗಳಿನ ಶ್ರೀವಾಣಿ ಟ್ರಸ್ಟ್ ಟಿಕೆಟ್‌ಗಾಗಿ ಟಿಟಿಡಿ ಆನ್‌ಲೈನ್ ಕೋಟಾವನ್ನು ಫೆಬ್ರವರಿ 23 ರಂದು ಬೆಳಗ್ಗೆ 11 ಗಂಟೆಗೆ ಬಿಡುಗಡೆ ಮಾಡಲಿದೆ.
ಫೆಬ್ರವರಿ 23 ರಂದು ಅಂಗಪ್ರದಕ್ಷಿಣಂ ಟೋಕನ್‌ಗಳು: ಟಿಟಿಡಿ ಮೇ ತಿಂಗಳ ಅಂಗಪ್ರದಕ್ಷಿಣಂ ಟೋಕನ್‌ಗಳ ಕೋಟಾವನ್ನು ಫೆಬ್ರವರಿ 23 ರಂದು ಬೆಳಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡುತ್ತದೆ.

ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ
ಹಿರಿಯ ನಾಗರಿಕರು, ಅಂಗವಿಕಲರು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ತಿರುಮಲ ಶ್ರೀವರ ದರ್ಶನಕ್ಕೆ ಅನುವು ಮಾಡಿಕೊಡಲು ಟಿಟಿಡಿ ಮೇ ತಿಂಗಳ ಉಚಿತ ವಿಶೇಷ ದರ್ಶನಂ ಟೋಕನ್‌ಗಳ ನೀಡಲಿದೆ. ಈ ಕೋಟಾವನ್ನು ಫೆಬ್ರವರಿ 23 ರಂದು ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಿದೆ.
ಫೆಬ್ರವರಿ 24 ರಂದು ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳ ಕೋಟಾ ಬಿಡುಗಡೆ. ಮೇ ತಿಂಗಳ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳ ಕೋಟಾವನ್ನು ಫೆಬ್ರವರಿ 24 ರಂದು ಬೆಳಗ್ಗೆ 10 ಗಂಟೆಗೆ ಟಿಟಿಡಿ ಬಿಡುಗಡೆ ಮಾಡಲಿದೆ.
ತಿರುಮಲ ಮತ್ತು ತಿರುಪತಿಯಲ್ಲಿ ಕೊಠಡಿಗಳ ಕೋಟಾ ಬಿಡುಗಡೆ: ತಿರುಪತಿಯ ಮುಖ್ಯ ಬಸ್ ನಿಲ್ದಾಣದ ಬಳಿ ಶ್ರೀನಿವಾಸಂ ಮತ್ತು ರೈಲ್ವೆ ನಿಲ್ದಾಣದ ಎದುರು ವಿಷ್ಣುವಾಸಂ ವಸತಿ ಕಟ್ಟಡಗಳು ಇದ್ದು ಭಕ್ತರು ತಮಗಾಗಿ ಕೊಠಡಿಗಳನ್ನು ಕಾಯ್ದಿರಿಸಬಹುದಾಗಿದೆ. ತಿರುಮಲ ಮತ್ತು ತಿರುಪತಿಯಲ್ಲಿ ಮೇ ತಿಂಗಳ ಕೊಠಡಿಗಳ ಕೋಟಾವನ್ನು ಫೆಬ್ರವರಿ 24 ರಂದು ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಫೆಬ್ರವರಿ 27 ರಂದು ಶ್ರೀವಾರಿ ಸೇವಾ ಕೋಟಾ ಬಿಡುಗಡೆ: ಫೆಬ್ರವರಿ 27 ರಂದು ಬೆಳಗ್ಗೆ 11 ಗಂಟೆಗೆ ಶ್ರೀವಾರಿ ಸೇವೆ, 12 ಗಂಟೆಗೆ ನವನೀತ ಸೇವೆ ಮತ್ತು 2 ಗಂಟೆಗೆ ಪರಕಾಮಣಿ ಸೇವಾ ಕೋಟಾವನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಈ ಕೋಟಾಗಳನ್ನು ಭಕ್ತರು ಗಮನಿಸಿ ತಮ್ಮ ಟಿಕೆಟ್‌ಗಳನ್ನು ಬುಕ್ ಮಾಡಬೇಕಾಗಿ ಟಿಟಿಡಿ ವಿನಂತಿ ಮಾಡಿದೆ.












Click it and Unblock the Notifications