TTD: ತಿಮ್ಮಪ್ಪನ ಭಕ್ತರ ಗಮನಕ್ಕೆ: ಪಂಚಮಿ ತೀರ್ಥಂ ಆಯೋಜನೆ
ತಿರುಪತಿ, ನವೆಂಬರ್ 14: ಈ ವಾರ ತಿರುಪತಿ ತಿಮ್ಮಪ್ಪನ ದರ್ಶನಕ್ಕೆಂದು ತೆರಳುವವರಿಗೆ ಸಿಹಿ ಸುದ್ದಿಯೊಂದು ಲಭಿಸಿದೆ. ಅದೇನೆಂದರೆ ತಿರುಮಲ ತಿರುಪತಿ ದೇವಸ್ಥಾನ (TTD) ಆಡಳಿತ ಮಂಡಳಿಯು 'ಪಂಚಮಿ ತೀರ್ಥಂ ಉತ್ಸವ'ವನ್ನು ಹಮ್ಮಿಕೊಂಡಿದೆ. ತಿರುಮಲ ದರ್ಶನದ ಜೊತೆಗೆ ಭಕ್ತಾಧಿಕಾರಿಗಳು ಈ ಉತ್ಸವ ಕಣ್ತುಂಬಿಕೊಳ್ಳಬಹುದು.
ತಿರುಮಲ ತಿರುಪತಿ ದೇವಸ್ಥಾನವಯ (TTD) ತಿರುಚನೂರಿನ ಪದ್ಮಾವತಿ ದೇವಿ ಅಮ್ಮನವರ ದೇವಸ್ಥಾನದಲ್ಲಿ ನವೆಂಬರ್ 18 ರಂದು ವಾರ್ಷಿಕ 'ಕಾರ್ತಿಕ ಬ್ರಹ್ಮೋತ್ಸವ'ದ ಸಮಾರೋಪ ಸಮಾರಂಭವಾದ 'ಪಂಚಮಿ ತೀರ್ಥಂ ಉತ್ಸವ'ವನ್ನು ಸುಗಮವಾಗಿ ನಡೆಸಲು ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಂಡಿದೆ.

ಟಿಟಿಡಿ ಜಂಟಿ ಕಾರ್ಯನಿರ್ವಾಹಕ ಅಧಿಕಾರಿ (ಜೆಇಒ) ವಿ.ವೀರಬ್ರಹ್ಮಮ್ ಸೋಮವಾರ 'ಪಂಚಮಿ ತೀರ್ಥಂ' ಉತ್ಸವ ಸಿದ್ಧತೆಗಳನ್ನು ಖುದ್ದು ಪರಿಶೀಲನೆ ಮಾಡಿದರು. ಪುಷ್ಕರಿಣಿ ದ್ವಾರಗಳು ಮತ್ತು ಮಂಟಪಗಳಿಗೆ ಭೇಟಿ ನೀಡಿ ವೀಕ್ಷಿಸಿದರು. ಭಕ್ತರಿಗೆ ಸುಗಮ ಪ್ರವೇಶ ಮತ್ತು ನಿರ್ಗಮನವನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಭಕ್ತಾಧಿಗಳಿಗಾಗಿ ಅಗತ್ಯ ವ್ಯವಸ್ಥೆ
ಜನಸಂದಣಿಯನ್ನು ನಿಯಂತ್ರಿಸಲು ಪುಷ್ಕರಿಣಿಯಲ್ಲಿ ಸರತಿ ಸಾಲುಗಳು, ಬ್ಯಾರಿಕೇಡ್‌ಗಳನ್ನು ಆಯೋಜಿಸಲು ಮತ್ತು ಭಕ್ತರಿಗೆ ತೊಂದರೆಯಿಲ್ಲದ ದರ್ಶನದ ಅನುಭವವನ್ನು ಖಚಿತಪಡಿಸಿಕೊಳ್ಳಲು ಹೆಚ್ಚುವರಿ ಅನ್ನಪ್ರಸಾದ ಕೌಂಟರ್‌ಗಳು ಮತ್ತು ಮೊಬೈಲ್ ಶೌಚಾಲಯಗಳನ್ನು ಸ್ಥಾಪಿಸಲು ಅವರು ಸಿಬ್ಬಂದಿಗೆ ಸೂಚನೆ ನೀಡಿದರು.
ಇದಕ್ಕೂ ಮುನ್ನ ಜೆಇಒ ಜಿಲ್ಲಾ ಪಂಚಾಯತ್ ಸ್ಕೂಲ್, ನವಜೀವನ ಕಣ್ಣಿನ ಆಸ್ಪತ್ರೆ, ಪುಡಿ ರಸ್ತೆ ಜಂಕ್ಷನ್ ಬಳಿ ನಿರ್ಮಾಣಗೊಳ್ಲೂತ್ತಿರುವ ಜರ್ಮನ್ ಶೆಡ್‌ಗಳನ್ನು ಪರಿಶೀಲಿಸಿದರು. ಈ ಶೆಡ್‌ಗಳು ಉತ್ಸವಕ್ಕೆ ಬರುವ ಭಕ್ತರಿಗೆ ಅನುಕೂಲ ಒದಗಿಸಲಿದೆ. ಹೆಚ್ಚು ವಿಶ್ರಾಂತಿ ಪಡೆಯಲು ಭಕ್ತರಿಗೆ ಇಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಟಿಟಿಡಿ ತಿಳಿಸಿದೆ.












Click it and Unblock the Notifications