ಟಿಆರ್‌ಪಿ ಹಗರಣ: ಟಿವಿ ಚಾನೆಲ್‌ಗಳ 32 ಕೋಟಿ ರೂ ಆಸ್ತಿ ಜಪ್ತಿ
ನವದೆಹಲಿ, ಮಾರ್ಚ್ 18: ಟಿಆರ್‌ಪಿ ತಿರುಚಿದ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ), ಮಹಾರಾಷ್ಟ್ರ ಮೂಲದ ಕೆಲವು ಟಿವಿ ವಾಹಿನಿಗಳ ಸುಮಾರು 32 ಕೋಟಿ ಮೌಲ್ಯದ ಸಂಪತ್ತನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಫಕ್ತ್ ಮರಾಠಿ, ಬಾಕ್ಸ್ ಸಿನಿಮಾ ಮತ್ತು ಮಹಾ ಮೂವಿ ಚಾನೆಲ್‌ಗಳಂತಹ ಕೆಲವು ವಾಹಿನಿಗಳಿಗೆ ಸೇರಿದ ಆಸ್ತಿಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಮುಂಬೈ, ಇಂದೋರ್, ದೆಹಲಿ ಮತ್ತು ಗುರುಗಾಂವ್‌ಗಳಲ್ಲಿನ ವಾಣಿಜ್ಯ ಹಾಗೂ ನಿವಾಸಿ ಘಟಕಗಳು ಮತ್ತು ಭೂಮಿ , ಕೆಲವು ಬ್ಯಾಂಕ್ ಠೇವಣಿಗಳು ಸೇರಿವೆ ಎಂದು ಇ.ಡಿ ಹೇಳಿಕೆ ತಿಳಿಸಿದೆ.
'ಈ ಚಾನೆಲ್‌ಗಳಲ್ಲಿ ಎರಡು ವಾಹಿನಿಗಳ ಒಟ್ಟಾರೆ ಟಿಆರ್‌ಪಿಯು ಕೇವಲ ಐದು ಮನೆಗಳಿಂದ ಮುಂಬೈನ ಒಟ್ಟುಎ ಶೇ 25ರಷ್ಟು ವೀವರ್‌ಶಿಪ್ ತೋರಿಸುತ್ತಿತ್ತು. ಮೂರನೇ ವಾಹಿನಿಯಲ್ಲಿ ಐದು ನಿಗದಿತ ಮನೆಗಳಿಂದ ನಿರ್ದಿಷ್ಟ ಅವಧಿಯಲ್ಲಿ ಶೇ 12ರಷ್ಟು ವೀವರ್‌ಶಿಪ್ ಮುಂಬೈನಲ್ಲಿ ತೋರಿಸಲಾಗುತ್ತಿತ್ತು' ಎಂದು ಸಂಸ್ಥೆ ತಿಳಿಸಿದೆ.

ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (ಟಿಆರ್‌ಪಿ) ಅನ್ನು ತಿರುಚಿದ ಪ್ರಕರಣದಲ್ಲಿ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡ ಬಳಿಕ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿತ್ತು.
'ಫಕ್ತ್ ಮರಾಠಿ, ಬಾಕ್ಸ್ ಸಿನಿಮಾ ಮತ್ತು ಮಹಾ ಮೂವೀಯಂತಹ ಚಾನೆಲ್‌ಗಳು ತಪ್ಪು ಮಾರ್ಗದ ಮೂಲಕ ಟಿಆರ್‌ಪಿಯನ್ನು ತಿರುಚಲು ವಂಚನೆ, ನಂಬಿಕೆ ದ್ರೋಹದ ಅಪರಾಧಗಳನ್ನು ಎಸಗಿವೆ ಮತ್ತು ಮೋಸ ಮಾಡುವ ಅಪರಾಧ ಸಂಚಿನಲ್ಲಿ ಭಾಗಿಯಾಗಿವೆ. ಟಿಆರ್‌ಪಿ ರೇಟಿಂಗ್‌ಗಳನ್ನು ಮೋಸದಿಂದ ಹೆಚ್ಚಿಸಿಕೊಳ್ಳುವ ಮೂಲಕ ಈ ಚಾನೆಲ್‌ಗಳು ಹೆಚ್ಚಿನ ಜಾಹೀರಾತು ಆದಾಯವನ್ನು ಪಡೆದುಕೊಳ್ಳುತ್ತಿದ್ದವು' ಎಂದು ಇ.ಡಿ ವಿವರಿಸಿದೆ.
-
Bengaluru Mumbai Vande Bharat: ಬೆಂಗಳೂರು ಹೊಸ ವಂದೇ ಭಾರತ್ ಸ್ಲೀಪರ್ ರೈಲು: ನನ್ನ ಮನವಿಗೆ ಸ್ಪಂದನೆ: ಪ್ರಹ್ಲಾದ ಜೋಶಿ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ












Click it and Unblock the Notifications