ತ್ರಿಪುರದ ಗೆಲುವು ಐತಿಹಾಸಿಕ: ಪ್ರಧಾನಿ ಮೋದಿ ಬಣ್ಣನೆ

Posted By:
Subscribe to Oneindia Kannada

ಅಗರ್ತಲ, ಮಾರ್ಚ್ 09: ಭಾರತದ ಇತಿಹಾಸದಲ್ಲಿ ಕೆಲವು ಚುನಾವಣೆಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕು ಎನ್ನಿಸುತ್ತೆ. ಅಂಥ ಚುನಾವಣೆಗಳಲ್ಲಿ 2018 ರ ತ್ರಿಪುರ ಚುನಾವಣೆಯೂ ಒಂದು ಎಂದು ಪ್ರಧಾನಿ ನರೇಂದ್ರ ಮೋದಿ ಹೆಮ್ಮೆಯಿಂದ ಹೇಳಿದರು.

ತ್ರಿಪುರದಲ್ಲಿ ಇಂದು(ಮಾ.09) ನೂತನ ಮುಖ್ಯಮಂತ್ರಿ ವಿಪ್ಲವ್ ದೇವ್ ಅವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಮಾತನಾಡುತ್ತಿದ್ದರು.

ತ್ರಿಪುರ ಮುಖ್ಯಮಂತ್ರಿಯಾಗಿ ವಿಪ್ಲವ್ ದೇವ್ ಪ್ರಮಾಣ ವಚನ

ತ್ರಿಪುರದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಸರ್ಕಾರ ರಚನೆಯಾಗಿದೆ. ಇದೊಂದು ಐತಿಹಾಸಿಕ ವಿಜಯ. ಈ ಗೆಲುವಿನ ಕುರಿತು ಭವಿಷ್ಯದ ಜನತೆ ಚರ್ಚಿಸುತ್ತಲೇ ಇರುತ್ತದೆ ಎಂದು ಮೋದಿ ಹೇಳಿದರು.

ಫೆ.18 ರಂದು ನಡೆದಿದ್ದ ತ್ರಿಪುರ ವಿಧಾನಸಭೆ ಚುನಾವಣೆಯ ಫಲಿತಾಂಶ ಮಾ.03 ರಂದು ಹೊರಬಿದ್ದಿತ್ತು. ಚುನಾವಣೆಯಲ್ಲಿ ಬಿಜೆಪಿ 43 ಸ್ಥಾನ ಗಳಿಸಿದ್ದರೆ, ಸಿಪಿಎಂ 16 ಸ್ಥಾನಗಳಿಸಿತ್ತು. 25 ವರ್ಷಗಳಿಂದ ಎಡಪಕ್ಷದ ಆಡಳಿತವಿದ್ದ ತ್ರಿಪುರದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಸರ್ಕಾರ ನಡೆಸುತ್ತಿದೆ. ಇಂದು ಮುಖ್ಯಮಂತ್ರಿ ವಿಪ್ಲವ್ ದೇವ್ ಅವರೊಂದಿಗೆ, ಉಪಮುಖ್ಯಮಂತ್ರಿಯಾಗಿ ಜಿಷ್ಣು ದೇವ್ ವರ್ಮನ್ ಸಹ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In the history of India, there are some elections that will always be discussed. The 2018 Tripura elections will be one such example. People will continue to discuss these polls: PM Narendra Modi in Agartala.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ