ವಿಡಿಯೋ:ಪೊಲೀಸ್ ಠಾಣೆಯಲ್ಲಿ ವ್ಯಕ್ತಿಗೆ ಹೊಡೆದ ತ್ರಿಪುರ ಕಾಂಗ್ರೆಸ್ ಅಧ್ಯಕ್ಷ

ಅಗರ್ತಲಾ, ಏಪ್ರಿಲ್ 19: ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸ್ ಸಿಬ್ಬಂದಿ ಎದುರಲ್ಲೆ ತ್ರಿಪುರಾದ ಕಾಂಗ್ರೆಸ್ ಅಧ್ಯಕ್ಷ ವ್ಯಕ್ತಿಯೊಬ್ಬನಿಗೆ ಕಪಾಳಕ್ಕೆ ಹೊಡೆದು ಬೆದರಿದ ಘಟನೆ ನಡೆದಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ತ್ರಿಪುರ ಕಾಂಗ್ರೆಸ್ ಅಧ್ಯಕ್ಷ ಪ್ರಾದ್ಯೋತ್ ಕಿಶೋರ್ ದೇಬ್ ಬರ್ಮನ್ ಅವರು ನಿನ್ನೆ ಕೋವಾಯ್ ಠಾಣೆಗೆ ಬೆಂಬಲಿಗರೊಂದಿಗೆ ನುಗ್ಗಿ, ತಮ್ಮ ತಂಗಿಯ ವಾಹನದ ಮೇಲೆ ಕಲ್ಲು ತೂರಿದ ವ್ಯಕ್ತಿಯ ಕಪಾಳಕ್ಕೆ ಹೊಡೆದಿದ್ದಾರೆ.

ಪ್ರಾದ್ಯೋತ್ ಕಿಶೋರ್ ದೇಬ್ ಬರ್ಮನ್ ಅವರ ತಂಗಿ ಪ್ರಜ್ಞಾ ದೇವ್ ಬರ್ಮನ್ ಅವರು ಪೂರ್ವ ತ್ರಿಪುರಾ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಪರವಾಗಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರು ನಿನ್ನೆ ಕಾರಿನಲ್ಲಿ ರೋಡ್ ಶೋ ನಡೆಸಬೇಕಾದರೆ ವ್ಯಕ್ತಿಯೊಬ್ಬ ಕಲ್ಲು ತೂರಿದ್ದ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು, ಈಗ ಆತನ ಮೇಲೆಯೇ ಹಲ್ಲೆ ಆಗಿದೆ.

Tripura congress president slaps a man inside the police station

ಆ ವ್ಯಕ್ತಿಯು ಐಪಿಎಫ್‌ಟಿ ಪಕ್ಷಕ್ಕೆ ಸೇರಿದವನನು ಎನ್ನಲಾಗಿದೆ. ಆತ ಮತ್ತು ಕೆಲವು ಸಂಗಡಿಗರು ಪ್ರಜ್ಞಾ ದೇವ್ ಬರ್ಮನ್ ಅವರ ಕಾರಿನ ಮೇಲೆ ಕಲ್ಲು ಎಸೆದಿದ್ದರು.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿಯ ಮುಖಂಡ ರತನ್ ಲಾಲ್ ನಾತ್, ವಿಡಿಯೋ ನೋಡಿದರೆ ಅರ್ಥವಾಗುತ್ತದೆ, ಪ್ರಾದ್ಯೋತ್ ಕಿಶೋರ್ ದೇವ್ ಬರ್ಮನ್ ಅವರು ತಮ್ಮ ರಾಜಕೀಯ ವಿರೋಧಿಗಳನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂದು, ಪೊಲೀಸ್ ಠಾಣೆಗೆ ನುಗ್ಗಿ ಒಬ್ಬ ವ್ಯಕ್ತಿಯನ್ನು ಹೊಡೆಯಬಲ್ಲವರಾದರೆ, ಅವರು ಎಲ್ಲಿ ಬೇಕಾದರೂ, ಯಾರನ್ನು ಬೇಕಾದರು ಕೊಲ್ಲಬಲ್ಲರು, ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ವ್ಯಕ್ತಿಯ ಮೇಲೆ ಠಾಣೆ ಒಳಗೆ ಹಲ್ಲೆ ಮಾಡಿರುವ ಪ್ರಾದ್ಯೋತ್ ಕಿಶೋರ್ ದೇವ್ ಬರ್ಮನ್ ಅವರ ಮೇಲೆ ಪ್ರಕರಣ ದಾಖಲಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+