ಲೋಕಸಭಾ ಚುನಾವಣೆ: 42 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರು ಘೋಷಿಸಿದ ಟಿಎಂಸಿ; ಯೂಸುಫ್ ಪಠಾಣ್ ಸ್ಫರ್ಧೆ
ಮುಂಬರುವ ಲೋಕಸಭೆ ಚುನಾವಣೆ 2024 ಕ್ಕೆ ತೃಣಮೂಲ ಕಾಂಗ್ರೆಸ್ ಎಲ್ಲಾ 42 ಲೋಕಸಭಾ ಸ್ಥಾನಗಳಿಗೆ ಹೆಸರುಗಳನ್ನು ಭಾನುವಾರ ಪ್ರಕಟಿಸಿದೆ. ಇಂಡಿಯಾ ಒಕ್ಕೂಟದಲ್ಲಿ ಕಾಂಗ್ರೆಸ್ ಜೊತೆ ಸೀಟು ಹಂಚಿಕೆ ಮಾತುಕತೆ ನಡುವೆ ಟಿಎಂಸಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.
ಬ್ರೀಗ್ರೇಡ್ ಗ್ರೌಂಡ್‌ನಲ್ಲಿ ನಡೆದ ಸಭೆಯಲ್ಲಿ ಡೈಮಂಡ್ ಹಾರ್ಬರ್ ಕ್ಷೇತ್ರದಿಂದ ಸ್ಪರ್ಧಿಸಲಿರುವ ಅಭಿಷೇಕ್ ಬ್ಯಾನರ್ಜಿ ಅವರು ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದರು. ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರು ಬಹರಂಪುರದಿಂದ ತೃಣಮೂಲ ಅಭ್ಯರ್ಥಿಯಾಗಿ ಅಧೀರ್ ರಂಜನ್ ಚೌಧರಿ ವಿರುದ್ಧ ಸ್ಪರ್ಧಿಸಲಿದ್ದಾರೆ. ಟಿಎಂಸಿ ಪಟ್ಟಿಯಿಂದ ಹಾಲಿ ಸಂಸದ ನಟ ನುಸ್ರತ್ ಜಹಾನ್ (ಸಂದೇಶ್‌ಖಾಲಿ ಕ್ಷೇತ್ರ) ಅವರನ್ನು 2024 ರ ಪಟ್ಟಿಯಿಂದ ಕೈಬಿಡಲಾಗಿದೆ.

ಕೃಷ್ಣನಗರದಿಂದ ಮಹುವಾ ಮೊಯಿತ್ರಾ ಸ್ಪರ್ಧೆ
ಪ್ರಶ್ನೆಗಾಗಿ ಲಂಚ ಪಡೆದ ಹಗರಣದಲ್ಲಿ ಲೋಕಸಭೆಯಿಂದ ಉಚ್ಛಾಟಿತರಾಗಿರುವ ಮಹುವಾ ಮೊಯಿತ್ರಾ ಅವರನ್ನು 2019 ರಲ್ಲಿ ಲೋಕಸಭೆಗೆ ಕಳುಹಿಸಿದ ಕ್ಷೇತ್ರವಾದ ಕೃಷ್ಣನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಸಂದೇಶಖಾಲಿ ಗದ್ದಲದ ನಂತರದ ಹಾಲಿ ಸಂಸದ ನುಸ್ರತ್ ಜಹಾನ್ ಅವರು ಈ ಬಾರಿ ಟಿಕೆಟ್ ಕಳೆದುಕೊಂಡಿದ್ದಾರೆ. ಹಾಜಿ ನೂರುಲ್ ಇಸ್ಲಾಂ ಬಸಿರ್‌ಹತ್‌ನಿಂದ ಸ್ಪರ್ಧಿಸಲಿದ್ದಾರೆ. ಸಂದೇಶಖಾಲಿ ಬಸಿರ್ಹತ್ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.
ಯೂಸುಫ್ ಪಠಾಣ್ ವಿರುದ್ಧ ಅಧೀರ್ ರಂಜನ್ ಚೌಧರಿ?
ತೃಣಮೂಲ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರ ಹೆಸರನ್ನು ಬಹರಂಪುರ ಅಭ್ಯರ್ಥಿಯಾಗಿ ಘೋಷಿಸಿದೆ. ಬಹರಂಪುರ ಕ್ಷೇತ್ರವು ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ ಮತ್ತು ಅಧೀರ್ ರಾಜನ್ ಚೌಧರಿ 1999 ರಿಂದ ಅದನ್ನು ಪ್ರತಿನಿಧಿಸುತ್ತಿದ್ದಾರೆ.
ಕಾಂಗ್ರೆಸ್-ಟಿಎಂಸಿ ಸೀಟು ಹಂಚಿಕೆಯ ಮಾತುಕತೆಗೆ ಮಮತಾ ಬ್ಯಾನರ್ಜಿ ಏನೂ ಬೆಲೆ ಕೊಟ್ಟಿಲ್ಲ. ಏಕೆಂದರೆ ಮಮತಾ ಈ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಬಯಸಲಿಲ್ಲ.
ತೃಣಮೂಲ ಕಾಂಗ್ರೆಸ್‌ನ 42 ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ
ಕೂಚ್ ಬೆಹರ್ - ಜಗದೀಶ್ ಚಂದ್ರ ಬಸುನಿಯಾ
ಅಲಿಪುರ್ದೂರ್ - ಪ್ರಕಾಶ್ ಚಿಕ್ ಬರೈಕ್ (ರಾಜ್ಯಸಭಾ ಸದಸ್ಯ)
ಜಲ್ಪೈಗುರಿ - ನಿರ್ಮಲ್ ಚಂದ್ರ ರೈ (ಶಾಸಕ)
ಡಾರ್ಜಿಲಿಂಗ್ - ಗೋಪಾಲ್ ಲಾಮಾ
ರಾಯಗಂಜ್ - ಕೃಷ್ಣ ಕಲ್ಯಾಣಿ
ಬಲೂರ್ಘಾಟ್ - ಬಿಪ್ಲಬ್ ಮಿತ್ರ (ಸಚಿವ)
ಮಾಲ್ಡಾ ನಾರ್ತ್ - ಪ್ರಸೂನ್ ಬ್ಯಾನರ್ಜಿ (ಮಾಜಿ ಐಪಿಎಸ್ ಅಧಿಕಾರಿ)
ಮಾಲ್ಡಾ ಸೌತ್ - ಶಾನವಾಜ್ ಅಲಿ ರೆಹಮಾನ್
ಜಂಗಿಪುರ - ಖಲೀಲುರ್ ರೆಹಮಾನ್
ಬಹರಂಪುರ್ - ಯೂಸುಫ್ ಪಠಾಣ್ (ಭಾರತದ ಮಾಜಿ ಕ್ರಿಕೆಟಿಗ)
ಮುರ್ಷಿದಾಬಾದ್ - ಅಬು ತಾಹೆರ್ ಖಾನ್
ಕೃಷ್ಣನಗರ - ಮಹುವಾ ಮೊಯಿತ್ರಾ
ರಣಘಾಟ್ - ಮುಕುತ್ ಮಣಿ ಅಧಿಕಾರಿ (ಬಿಜೆಪಿ ಶಾಸಕ)
ಬಂಗಾನ್ - ಬಿಸ್ವಜಿತ್ ದಾಸ್
ಬ್ಯಾರಕ್‌ಪೋರ್ - ಪಾರ್ಥ ಭೌಮಿಕ್ (ಸಚಿವ)
ದಮ್ ದಮ್ - ಸೌಗತ ರಾಯ್ (MP)
ಬರಾಸತ್ - ಕಾಕಲಿ ಘೋಷ್ ದಸ್ತಿದಾರ್ (ಸಂಸದ)
ಬಸಿರ್ಹತ್ - ಹಾಜಿ ನೂರುಲ್ ಇಸ್ಲಾಂ
ಜೋಯನಗರ - ಪ್ರತಿಮಾ ಮೊಂಡಲ್
ಮಥುರಾಪುರ - ಬಾಪಿ ಹಲ್ದಾರ್
ಡೈಮಂಡ್ ಹಾರ್ಬರ್ - ಅಭಿಷೇಕ್ ಬ್ಯಾನರ್ಜಿ
ಜಾದವ್‌ಪುರ- ಸಯೋನಿ ಘೋಷ್ (ಯುವ ಟಿಎಂಸಿ ಅಧ್ಯಕ್ಷರು)
ಕೋಲ್ಕತ್ತಾ ದಕ್ಷಿಣ - ಮಾಲಾ ರಾಯ್ (MP)
ಕೋಲ್ಕತ್ತಾ ಉತ್ತರ - ಸುದೀಪ್ ಬಂಡೋಪಾಧ್ಯಾಯ (ಸಂಸದ)
ಹೌರಾ- ಪ್ರಸೂನ್ ಬ್ಯಾನರ್ಜಿ (ಸಂಸದ)
ಉಲುಬೇರಿಯಾ- ಸಜ್ದಾ ಅಹ್ಮದ್
ಶ್ರೀರಾಮಪುರ - ಕಲ್ಯಾಣ್ ಬ್ಯಾನರ್ಜಿ (ಸಂಸದ)
ಹೂಗ್ಲಿ- ರಚನಾ ಬ್ಯಾನರ್ಜಿ (ನಟಿ)
ಅರಾಂಬಾಗ್- ಮಿತಾಲಿ ಬಾಗ್
ತಮ್ಲುಕ್ - ದೇಬಂಗ್ಶು ಭಟ್ಟಾಚಾರ್ಯ
ಕಂಠಿ - ಉತ್ತಮ್ ಬಾರಿಕ್
ಘಟಾಲ್ - ದೀಪಕ್ ಅಧಿಕಾರಿ (ಸಂಸದ)
ಜಾರ್ಗ್ರಾಮ್ - ಕಲಿಪಾದ ಸೊರೆನ್
ಮೇದಿನಿಪುರ - ಜೂನ್ ಮಲಿಯಾ (ಶಾಸಕ)
ಪುರುಲಿಯಾ - ಶಾಂತಿರಾಮ್ ಮಹತೋ
ಬಂಕುರಾ - ಅರೂಪ್ ಚಕ್ರವರ್ತಿ (ಶಾಸಕ)
ಬಿಷ್ಣುಪುರ್ - ಸುಜಾತಾ ಮೊಂಡಲ್ ಖಾನ್ (ಪ್ರಸ್ತುತ ಬಿಜೆಪಿ ಸಂಸದರ ಮಾಜಿ ಪತ್ನಿ)
ಬುರ್ದ್ವಾನ್ - ಡಾ ಶರ್ಮಿಳಾ ಸರ್ಕಾರ್
ಬುರ್ದ್ವಾನ್-ದುರ್ಗಾಪುರ- ಕೀರ್ತಿ ಆಜಾದ್ (ಮಾಜಿ ಕ್ರಿಕೆಟಿಗ)
ಅಸನ್ಸೋಲ್ - ಶತ್ರುಘ್ನ ಸಿನ್ಹಾ (ಸಂಸದ)
ಬೋಳೂರು - ಅಸಿತ್ ಮಲ್ (ಸಂಸದ)
ಬಿರ್ಭುಮ್ - ಶತಾಬ್ದಿ ರಾಯ್ (ಸಂಸದ)












Click it and Unblock the Notifications