ಹರ್ಯಾಣದಲ್ಲಿ ಪ್ರಬಲ ಭೂಕಂಪ, ದೆಹಲಿಯಲ್ಲಿಯೂ ಕಂಪನ

Posted By:
Subscribe to Oneindia Kannada

ನವದೆಹಲಿ, ಸೆಪ್ಟೆಂಬರ್ 10 : ಶನಿವಾರ ಸಂಜೆ ಹರ್ಯಾಣದ ಜಜ್ಜರ್ ನಲ್ಲಿ 4.1 ಪ್ರಮಾಣದಷ್ಟು ಪ್ರಬಲ ಭೂಕಂಪ ಸಂಭವಿಸಿದೆ. ದೆಹಲಿ, ಗುರ್ ಗಾಂವ್, ನೊಯ್ಡಾ ಸೇರಿದಂತೆ ಹಲವೆಡೆ ಭೂಮಿ ಕಂಪಿಸಿದೆ.

ದೆಹಲಿಯಲ್ಲಿ ಸುಮಾರು 30 ಸೆಕೆಂಡುಗಳಷ್ಟು ಭೂಮಿ ಕಂಪನಿಸಿದ ಅನುಭವ ಹಲವರಿಗಾದರೆ, ಗುರ್ ಗಾಂವ್ ನಲ್ಲಿಯೂ ಹಲವಾರು ಸೆಕೆಂಡುಗಳಷ್ಟು ಭೂಕಂಪನದ ಅನುಭವವಾಯಿತು ಎಂದು ಜನರು ಹೇಳಿದ್ದಾರೆ.

ಭೂಕಂಪದ ಕೇಂದ್ರಬಿಂದು ದೆಹಲಿಯಿಂದ 61 ಕಿ.ಮೀ ದೂರದಲ್ಲಿರುವ ಹರ್ಯಾಣದ ಜಜ್ಜರ್ ನಲ್ಲಿದೆ ಎಂದು ಭೂಕಂಪ ತಜ್ಞರು ಹೇಳಿದ್ದಾರೆ. ಪ್ರಬಲ ಭೂಕಂಪ ಇದೆಂದು ಹೇಳಲಾಗುತ್ತಿದೆಯಾದರೂ ಯಾವುದೇ ಸಾವುನೋವು ಸಂಭವಿಸಿದ ವರದಿ ಬಂದಿಲ್ಲ.

Tremors of magnitude 4.1 felt in Delhi-NCR

ಭೂಮಿಯ ಹಲವೆಡೆ ಭೂಕಂಪ : ದಕ್ಷಿಣ ಆಫ್ರಿಕಾದ ತಾಂಜಾನಿಯಾದಲ್ಲಿ 6.1 ಪ್ರಮಾಣದಷ್ಟು ಪ್ರಬಲ ಭೂಕಂಪ ಸಂಭವಿಸಿದ್ದು, ಪ್ರಥಮ ಮಾಹಿತಿಯ ಪ್ರಕಾರ ಹನ್ನೊಂದು ಜನ ಜೀವ ಕಳೆದುಕೊಂಡಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ.

ಶನಿವಾರ ಭಾರತೀಯ ಕಾಲಮಾನ 9.59ರ ಸುಮಾರಿಗೆ ಫಿಲಿಪೈನ್ಸ್ ನ ದಾವೋದಲ್ಲಿಯೂ 5.3 ಪ್ರಮಾಣದಷ್ಟು ಭೂಕಂಪನವಾಗಿದೆ. ಪೊಂಡಗಿಟಾನ್ ನಿಂದ 109 ಕಿ.ಮೀ. ದೂರದಲ್ಲಿ ಭೂಕಂಪನದ ಕೇಂದ್ರಬಿಂದುವಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

Read in English: Tanzania quake: 10 dead
English summary
Tremors of magnitude 4.1 felt in Delhi-NCR area. Epicentre at 10 kms near Jhajjar, Haryana. Earthquake also reported in Australia, Tanzania, Peru, Philippines.
Please Wait while comments are loading...