Best Recharge Plans: ಎಲ್ಲಾ ನೆಟ್‌ವರ್ಕ್‌ಗಳಲ್ಲೂ ಬರಲಿದೆ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್
ದಿನಕಳೆದಂತೆ ಮೊಬೈಲ್ ರೀಚಾರ್ಜ್ ದರಗಳು ಗಗನಕ್ಕೇರುತ್ತಿದ್ದು ಜನರ ಜೇಬಿಗೆ ಕತ್ತರಿ ಬೀಳುತ್ತಿದೆ. ಡಾಟಾ ಬಳಕೆಯ ಅಗತ್ಯವಿಲ್ಲದೇ ಇದ್ದರೂ ಕಂಪನಿಗಳ ಪ್ಲಾನ್‌ಗಳ ಪ್ರಕಾರ ಅನಿವಾರ್ಯವಾಗಿ ದುಬಾರಿ ಹಣ ನೀಡಿ ರೀಚಾಜ್ ಮಾಡಿಸಿಕೊಳ್ಳಲೇಬೇಕಾಗುತ್ತದೆ. 4ಜಿ, 5ಜಿ ಸೇವೆಗಳು ಬಂದಿದ್ದರೂ ಭಾರತದಲ್ಲಿ ಇನ್ನೂ 15 ಕೋಟಿ ಮಂದಿ 2ಜಿ ಸೇವೆಗಳನ್ನು ಬಳಕೆ ಮಾಡುತ್ತಿದ್ದಾರೆ. ಇವರು ಸಾಮಾನ್ಯ ಫೋನ್ ಕರೆಗಳು ಮತ್ತು ಎಸ್‌ಎಂಎಸ್‌ನಂತ ಮೂಲಭೂತ ಮೊಬೈಲ್ ಸೇವೆಯನ್ನು ಮಾತ್ರ ಬಳಕೆ ಮಾಡುತ್ತಾರೆ. ಡಾಟಾ ಬಳಕೆ ಮಾಡದೇ ಇದ್ದರೂ ಈ ಬಳಕೆದಾರರು ಅದಕ್ಕಾಗಿ ಹಣ ತೆರಬೇಕಿದ್ದು ಈಗ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಹೊಸ ನಿಯಮ ಜಾರಿಗೆ ಮುಂದಾಗಿದೆ.
2024ರ ಡಿಸೆಂಬರ್ 24ರಂದೇ TRAI ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದರೂ ಟೆಲಿಕಾಂ ಕಂಪನಿಗಳು ಇನ್ನೂ ಕೇಗೆಟುಕುವ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಿಲ್ಲ. ಇದೀಗ ಟೆಲಿಕಾಂ ಕಂಪನಿಗಳಿಗೆ ಬಿಸಿ ಮುಟ್ಟಿಸಲು ಸಜ್ಜಾಗಿದೆ.

10 ರೂಪಾಯಿ ಮುಖಬೆಲೆಯ ರೀಚಾರ್ಜ್ ಯೋಜನೆಗಳು ಹೊಸ ನಿಯಮಗಳ ಅಡಿಯಲ್ಲಿ, ಏರ್‌ಟೆಲ್, ಜಿಯೋ, ಬಿಎಸ್‌ಎನ್‌ಎಲ್ ಮತ್ತು ವೊಡಾಫೋನ್ ಐಡಿಯಾ (Vi) 10 ರೂಪಾಯಿ ಆರಂಭಿಕ ಬೆಲೆಯಲ್ಲಿ ಲಭ್ಯವಿರುವ ಟಾಪ್ ಅಪ್ ವೋಚರ್ ಗಳನ್ನು ಪರಿಚಯಿಸಬೇಕಾಗುತ್ತದೆ. ಆನ್‌ಲೈನ್ ರೀಚಾರ್ಜ್ ಹೆಚ್ಚುತ್ತಿರುವ ಕಾರಣ, ಕೋಡ್ ಮೂಲಕ ರೀಚಾರ್ಜ್ ವ್ಯವಸ್ಥೆ ತೆಗೆದುಹಾಕಲು TRAI ನಿರ್ಧರಿಸಿದೆ.
ವಿಶೇಷ ವೋಚರ್ ಗಳಿಗೆ 365 ದಿನಗಳ ಮಾನ್ಯತೆ
ವಿಶೇಷ ಸುಂಕದ ವೋಚರ್‌ಗಳ (STV) ಮಾನ್ಯತೆಯನ್ನು 90 ದಿನಗಳಿಂದ 365 ದಿನಗಳಿಗೆ ಹೆಚ್ಚಿಸಿದೆ. ಇದರಿಂದಾಗಿ ಬಳಕೆದಾರರು ಕಡಿಮೆ ರೀಚಾರ್ಜ್ ವೆಚ್ಚದಲ್ಲಿ ದೀರ್ಘಾವಧಿಯವರೆಗೆ ಸೌಲಭ್ಯ ಪಡೆಯಬಹುದು. ಇಂಟರ್ನೆಟ್ ಸೇವೆಗಳು ಅಗತ್ಯವಿಲ್ಲದ 2ಜಿ ಮೊಬೈಲ್ ಬಳಕೆದಾರರಿಗೆ ಅನುಕೂಲವಾಗುವಂತೆ ಧ್ವಮಿ ಮತ್ತು ಎಸ್‌ಎಂಎಸ್ ಮಾತ್ರ ಹೊಂದಿರುವ ಯೋಜನೆಗಳನ್ನು ವಿನ್ಯಾಸಗೊಳಿಸಲು ಟೆಲಿಕಾಂ ಆಪರೇಟರ್ ಗಳಿಗೆ ಸೂಚನೆ ನೀಡಲಾಗುತ್ತದೆ.
ಈಗಿರುವ ಯೋಜನೆಗಳ ಪ್ರಕಾರ ಡೇಟಾ ಇರುವ ಯೋಜನೆಗಳು ಅಗತ್ಯವಿಲ್ಲದೇ ಇದ್ದರೂ, ಕರೆಗಳು ಮತ್ತು ಸಂದೇಶಗಳ ಸೇವೆ ಮಾತ್ರ ಬೇಕು ಎಂದರೂ ಅನಿವಾರ್ಯವಾಗಿ ಹೆಚ್ಚಿನ ಹಣ ನೀಡಬೇಕಾಗುತ್ತಿದ್ದು ಬಳಕೆದಾರರಿಗೆ ಹೆಚ್ಚಿನ ಹೊರೆಯಾಗುತ್ತಿದೆ.
ಹೊಸ ಮಾರ್ಗಸೂಚಿಗಳನ್ನು ಈಗಾಗಲೇ ಜಾರಿಗೆ ತರಲಾಗಿದೆ. ಹೊಸ ರೀಚಾರ್ಜ್ ಯೋಜನೆಗಳನ್ನು ಜಾರಿಗೆ ತರಲು ಕೆಲವು ವಾರಗಳ ಸಮಾಯವಕಾಶ ನೀಡಲಾಗಿದೆ. ಜನವರಿ ಅಂತ್ಯದ ವೇಳೆಗೆ ಹೊಸ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸುವ ನಿರೀಕ್ಷೆ ಇದೆ.












Click it and Unblock the Notifications