• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೇಬಲ್ ಟಿವಿ ಶುಲ್ಕ ಇಳಿಕೆ; ಕಡಿಮೆ ಬೆಲೆಗೆ ಹೆಚ್ಚು ಚಾನೆಲ್

|

ಬೆಂಗಳೂರು, ಜನವರಿ 02 : ಹೊಸ ವರ್ಷದ ಆರಂಭದಲ್ಲಿ ಟ್ರಾಯ್ ಕೇಬಲ್ ಟಿವಿ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಹಲವು ನಿಯಮಗಳು ಬದಲಾಗಲಿದ್ದು, ಇದರಿಂದಾಗಿ ಮಾಸಿಕ ದರಗಳು ಸಹ ಕಡಿಮೆಯಾಗಲಿವೆ.

ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ( ಟ್ರಾಯ್) ಕೇಬಲ್ ಟಿವಿ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ತರಲಿದೆ. ಕೇಬಲ್ ದರಗಳು ಜಾಸ್ತಿ ಎಂಬ ದೂರಿನ ಹಿನ್ನಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ. 2020ರ ಮಾರ್ಚ್ 1ರಿಂದ ಅನ್ವಯವಾಗುವಂತೆ ಹೊಸ ನಿಯಮ ಜಾರಿಗೆ ಬರಲಿವೆ.

ಕೇಬಲ್ ಟಿವಿ ಕಾರ್ಯಮಗಳ ಬಗ್ಗೆ ದೂರು ಕೊಡಬಹುದು

ಹೊಸ ನಿಯಮಗಳ ಅನ್ವಯ ಗ್ರಾಹಕರು ಕಡಿಮೆ ಶುಲ್ಕದಲ್ಲೇ ಹೆಚ್ಚಿನ ಮೊತ್ತದ ಚಾನೆಲ್‌ಗಳನ್ನು ಪಡೆಯಬಹುದು. ಕೇಬಲ್ ಟಿವಿ ಮತ್ತು ಡಿಟಿಎಚ್ ಗ್ರಾಹಕರು ಅಗ್ಗದ ದರದಲ್ಲಿ ಸೇವೆಗಳನ್ನು ಪಡೆಯಬಹುದಾಗಿದೆ.

ಕೇಬಲ್ ಟಿವಿ ಗ್ರಾಹಕರ ಗಮನಕ್ಕೆ 130 ರು ಗೆ ಸಿಗಲಿದೆ ಹೆಚ್ಚು ಚಾನೆಲ್ಸ್

ಕೇಬಲ್ ಟಿವಿ ಪ್ರಸಾರಕರು ಟ್ರಾಯ್‌ ನಿಯಮಗಳ ಅನ್ವಯ ಬದಲಾವಣೆಗಳನ್ನು ಮಾಡಿ ಜನವರಿ 15ರೊಳಗೆ ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಮಾರ್ಚ್ 1ರಿಂದ ಹೊಸ ನಿಯಮ ಜಾರಿಗೆ ಬರಲಿದ್ದು, ಕಡಿಮೆ ದರದಲ್ಲಿ ಗ್ರಾಹಕರಿಗೆ ಹೆಚ್ಚಿನ ಚಾನೆಲ್ ಸಿಗಲಿದೆ. ಬದಲಾವಣೆಯಾದ ನಿಯಮಗಳ ವಿವರಗಳು ಇಲ್ಲಿವೆ...

ಟ್ರಾಯ್ ಹೊಸ ಕೇಬಲ್ ನೀತಿಗೆ ಬದಲಾಗಲು ಮಾರ್ಚ್ 31ರ ತನಕ ಗಡುವು ವಿಸ್ತರಣೆ

ಎನ್‌ಸಿಎಫ್‌ ಶುಲ್ಕ

ಎನ್‌ಸಿಎಫ್‌ ಶುಲ್ಕ

ಟ್ರಾಯ್ ಹೊಸ ನಿಯಮಗಳ ಅನ್ವಯ ಮಾಸಿಕ ಕಡ್ಡಾಯವಾಗಿ ಪಾವತಿ ಮಾಡಬೇಕಾದ ಎನ್‌ಸಿಎಫ್‌ ಶುಲ್ಕವನ್ನು 130ಕ್ಕೆ ಸೀಮಿತಗೊಳಿಸಲಾಗಿದೆ (ತೆರಿಗೆ ಬಿಟ್ಟು). ಅಂದರೆ ಕೇಬಲ್ ಆಪರೇಟರ್‌ಗಳು 150 ರೂ.ಗಳಿಗೆ 200 ಉಚಿತ ಚಾನೆಲ್ ಕೊಡಬೇಕು. ಈಗ ಕೇವಲ 100 ಚಾನೆಲ್ ನೀಡುತ್ತಿದ್ದಾರೆ. ಒಂದು ವೇಳೆ ಎನ್‌ಸಿಎಫ್ ಶುಲ್ಕವನ್ನು 160 ರೂ. ಪಡೆದರೆ (ತೆರಿಗೆ ಬಿಟ್ಟು) ಅದಕ್ಕೆ ಲಭ್ಯವಿರುವ ಎಲ್ಲಾ ಉಚಿತ ಚಾನೆಲ್‌ಗಳನ್ನು ನೀಡಬೇಕು.

200 ಚಾನೆಲ್ ವ್ಯಾಪ್ತಿಗೆ ಬರುವುದಿಲ್ಲ

200 ಚಾನೆಲ್ ವ್ಯಾಪ್ತಿಗೆ ಬರುವುದಿಲ್ಲ

ಕೇಂದ್ರ ಸರ್ಕಾರ ಕಡ್ಡಾಯವಾಗಿ ಪ್ರಸಾರ ಮಾಡಬೇಕು ಎಂದು ಪಟ್ಟಿ ಮಾಡಿರುವ 200 ಚಾನೆಲ್ ಎನ್‌ಸಿಎಫ್‌ ವ್ಯಾಪ್ತಿಗೆ ಸೇರುವುದಿಲ್ಲ. ಈ ಚಾನೆಲ್‌ ಹೊರತುಪಡಿಸಿ 150 ರೂ.ಗೆ ಕೇಬಲ್ ಆಪರೇಟರ್‌ಗಳು 200 ಉಚಿತ ಚಾನೆಲ್ ನೀಡಬೇಕು.

ಪ್ರಸಾರಕರು ಕ್ಯಾರಿಯೇಜ್ ಶುಲ್ಕದ ರೂಪದಲ್ಲಿ ಡಿಪಿಒಗಳಿಗೆ ನೀಡಬೇಕಿದ್ದ ಶುಲ್ಕದ ಮೇಲೆ ಗರಿಷ್ಠ 4 ಲಕ್ಷ ರೂ. ಮಿತಿಯನ್ನು ಹೇರಲಾಗಿದೆ.

ಶೇ 40ರಷ್ಟು ಶುಲ್ಕ ವಿಧಿಸಬಹುದು

ಶೇ 40ರಷ್ಟು ಶುಲ್ಕ ವಿಧಿಸಬಹುದು

ಒಬ್ಬ ಬಳಕೆದಾರನ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸಂಪರ್ಕವಿದ್ದರೆ ಆತನಿಗೆ 2 ಮತ್ತು ಆ ನಂತರ ಪಡೆಯುವ ಪ್ರತಿ ಮೊದಲ ಸಂಪರ್ಕಕ್ಕೆ ಶೇ 40ರಷ್ಟನ್ನು ಮಾತ್ರ ಎನ್‌ಸಿಎಫ್ ಶುಲ್ಕವಾಗಿ ವಿಧಿಸಬಹುದಾಗಿದೆ.

12 ರೂ. ಮತ್ತು ಅದಕ್ಕಿಂತ ಕಡಿಮೆ ಶುಲ್ಕ ಹೊಂದಿರುವ ಚಾನೆಲ್‌ಗಳನ್ನು ಮಾತ್ರ ಆಪರೇಟರ್‌ಗಳು ಚಾನೆಲ್ ಗುಚ್ಛದಲ್ಲಿ ಸೇರಿಸಬೇಕಾಗಿದೆ.

ಚಾನೆಲ್‌ಗಳ ಗುಚ್ಛ

ಚಾನೆಲ್‌ಗಳ ಗುಚ್ಛ

ಗುಚ್ಛಗಳಲ್ಲಿ ಲಭ್ಯವಿರುವ ಚಾನೆಲ್‌ಗಳನ್ನು ಗ್ರಾಹಕರು ಪ್ರತ್ಯೇಕವಾಗಿ ಪಡೆಯಲು ಬಯಸಿದರೆ ಸೇವಾ ಕಂಪನಿಗಳು ಪ್ರತಿ ಚಾನೆಲ್‌ಗೆ ವಿಧಿಸುವ ಶುಲ್ಕವು ಗುಚ್ಛದಲ್ಲಿ ಲಭ್ಯವಿರುವ ಎಲ್ಲಾ ಚಾನೆಲ್‌ಗಳ ಸರಾಸರಿ ಶುಲ್ಕದ ಒಂದೂವರೆ ಪಟ್ಟಿಗಿಂತ ಹೆಚ್ಚಾಗಿರಬಾರದು.

ಜನವರಿ 15ರೊಳಗೆ ಕೇಬಲ್ ಆಪರೇಟರ್ ಮತ್ತು ಸೇವಾ ಕಂಪನಿಗಳು ಅಗತ್ಯ ಬದಲಾವಣೆ ಮಾಡಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು.

English summary
TRAI made amendments to the cable and broadcasting services. People can get more channels in low cost. New amendments will come to effect from March 1, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X