ಛಾತ್ ಪೂಜೆಗೆ ಹೋಗಿ ಮಡಿದ ಮಕ್ಕಳು, ಮಹಿಳೆಯರು

Posted By:
Subscribe to Oneindia Kannada

ಪಟ್ನಾ, ನವೆಂಬರ್, 7 : ಬಿಹಾರದಲ್ಲಿ ಛಾತ್ ಪೂಜೆಯ ಸಂಭ್ರಮ ಮಹಿಳೆ ಮತ್ತು ಮಕ್ಕಳ ಸಾವಿನಲ್ಲಿ ಪರ್ಯವಸಾನವಾಗಿದೆ.

ದರ್ಬಾಂಗದಿಂದ ಛಾತ್ ಪೂಜೆಯನ್ನು ಮುಗಿಸಿಕೊಂಡು ಬರುವ ದಾರಿ ಮಧ್ಯದಲ್ಲಿ ರಾಮಭದ್ರಾಪುರ ರೈಲ್ವೆ ನಿಲ್ದಾಣದಲ್ಲಿ ರೈಲ್ವೆಹಳಿ ದಾಟುವ ವೇಳೆ ಮಹಿಳೆಯರು ಮೃತಪಟ್ಟಿದ್ದಾರೆ.

ರೈಲಿನ ಹೊಡೆತದಿಂದಾಗಿ ಆರು ಜನ ಮಹಿಳೆಯರು ಸಾವಿಗೀಡಾಗಿದ್ದು, ಈ ಘಟನೆಯಿಂದಾಗಿ ಕ್ರೋಧಗೊಂಡಿರುವ ಇಲ್ಲಿನ ಜನರು ರೈಲಿನ ಸೇವೆ ವಿರುದ್ಧ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.[ಗೋವು ಕಳ್ಳತನ ಗ್ಯಾಂಗ್ ಪತ್ತೆಹಚ್ಚಿದ ಬಜ್ಪೆ ಪೊಲೀಸರು]

Tragedy strikes bihar on chhath puja 6 women and 5 children dead

ಇನ್ನು ಭಾನುವಾರ ಬಿಹಾರದ ಮುಜಾಫರ್ ಪುರದಲ್ಲಿ ಐದು ಮಕ್ಕಳು ಛಾತ್ ಪೂಜಾ ಆಚರಣೆ ವೇಳೆ ಸಾವಿಗೀಡಾಗಿದ್ದಾರೆ.

ಬಿಹಾರದ ಸಿದ್ದವನ್ ಕಾಲುವೆಯಲ್ಲಿ ಛಾತ್ ಪೂಜಾ ಸಂದರ್ಭದಲ್ಲಿ 6 ವರ್ಷದ ಬಾಲಕ ನೀರಿನಲ್ಲಿ ಮುಳುಗಿದ್ದಾನೆ. ಭಕ್ತರು ತಮ್ಮ ಪೂಜಾ ವಿಧಿವಿಧಾನಗಳನ್ನು ಮಗಿಸಿ ಕಾಲುವೆಯಿಂದ ಮೇಲೆ ಬಂದಿದ್ದಾರೆ. ಕಾಲುವೆಯಲ್ಲಿ ನೀರಿನ ಹರಿವನ್ನು ಹೆಚ್ಚಿಸಲಾಗಿದೆ ಮಗು ಮೇಲೆ ಬರಲಾರದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದೆ.[ಬೀದರ್: ಸಹಪಾಠಿಗಳ ರ‌್ಯಾಗಿಂಗ್ ಗೆ ಬಲಿ ಆಯ್ತು ವಿದ್ಯಾರ್ಥಿಯ ಜೀವ!]

ಪಾಟ್ನಾ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಧಿಕಾರಿಗಳೊಂದಿಗೆ ಘಾಟ್ಗಳಿಗೆ ಭೇಟಿ ನೀಡಿದ್ದು, ಸಾವಧಾನವಾಗಿ ವ್ರತವನ್ನು ಅಚರಿಸಲು ಸೂಚಿಸಿದ್ದಾರೆ.

ಇನ್ನು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಂಸದರೊಂದಿಗೆ ವಿವಿಧ ಛಾತ್ ಘಾಟ್ ಗಳಿಗೆ ಭೇಟಿ ನೀಡಿದ್ದು ಕ್ರಮಕೈಗೊಳ್ಳುವಂತೆ ನೀರಾವರಿ ಸಚಿವರಿಗೆ ಸೂಚಿಸಿದ್ದಾರೆ.

ದೀಪಾವಳಿಯಾದ ಆರನೇ ದಿನವನ್ನು ಛಾತ್ ಅಥವಾ ಛಾಟ್ ಎಂಬ ಹೆಸರಿನಲ್ಲಿ ಉತ್ತರ ಭಾರತದಲ್ಲಿ ವಿಶೇಷವಾಗಿ ಪೂಜೆ ಅಚರಿಸಲಾಗುತ್ತದೆ. ಇದನ್ನು ನದೀ ತೀರದಲ್ಲಿ ಆಚರಿಸುವ ಹಬ್ಬವಾಗಿದ್ದು ಹಿಂದೂ ಅಚರಣೆಗಳಲ್ಲೊಂದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
6 women have been dead after being hit by a train near Rambhadrapur station when they were returning from Chhath Puja celebrations.5 children have been dead due to drowning during Chhath Puja celebrations in Muzaffarpur, Bihar.
Please Wait while comments are loading...